ಕಾಂಗ್ರೆಸ್​-ಬಿಜೆಪಿ ನಡುವಿನ ಗುದ್ದಾಟಕ್ಕೆ ಕಾರಣವಾಗಿರುವ ಟಿಪ್ಪು ಜಯಂತಿಗೆ ಬ್ರೇಕ್​ ಹಾಕಲು ನಿರ್ಧರಿಸಿದ್ದಾರೆಯೇ ಸಿಎಂ ಎಚ್ಡಿಕೆ?

ಬೆಂಗಳೂರು: ರಾಜ್ಯದಲ್ಲಿ ಭಾರಿ ಚರ್ಚೆಗೆ ಗುರಿಯಾಗುತ್ತಿರುವ, ವಿರೋಧಕ್ಕೀಡಾಗಿರುವ, ಬಿಜೆಪಿ-ಕಾಂಗ್ರೆಸ್​ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗುತ್ತಿರುವ ಟಿಪ್ಪು ಜಯಂತಿಯನ್ನು ಮುಂದಿನ ವರ್ಷದಿಂದ ಆಚರಿಸದೇ ಇರಲು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ನಡೆಯುತ್ತಿವೆ. ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಡಿಸಿಎಂ ಪರಮೇಶ್ವರ್​ ಅವರೂ ಸಮ್ಮಿತಿಸಿದ್ದಾರೆ ಎಂದು ಹೇಳಲಾಗಿದೆ.

ಟಿಪ್ಪು ಜಯಂತಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೂ ಉಂಟಾಗುವ ಸಂಭಾವ್ಯ ಹಾನಿಯಿಂದ ತಪ್ಪಿಸಿಕೊಳ್ಳುವುದು ಕುಮಾರಸ್ವಾಮಿ ಅವರ ಚಿಂತನೆ ಹಿಂದಿನ ಮೂಲ ಉದ್ದೇಶ ಎಂದೂ ಹೇಳಲಾಗುತ್ತಿದೆ. ಅದರೆ, ಈ ಬಗ್ಗೆ ಸರ್ಕಾರದಿಂದಾಗಲಿ, ಕುಮಾರಸ್ವಾಮಿ ಅವರಿಂದಾಗಲಿ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಸದ್ಯ ಮುಖ್ಯಮಂತ್ರಿ ಅವರ ಈ ಚಿಂತನೆನ್ನು ಕಾಂಗ್ರೆಸ್​, ಅಲ್ಪಸಂಖ್ಯಾತ ಸಂಘಟನೆಗಳು, ಮುಸ್ಲಿಂ ಸಮುದಾಯ ಹೇಗೆ ಸ್ವೀಕರಿಸುತ್ತದೆ ಎಂಬುದು ಕುತೂಹಲಕಾರಿ ಪ್ರಶ್ನೆಯಾಗಿದೆ. (ದಿಗ್ವಿಜಯ ನ್ಯೂಸ್​)