More

    ಇರಾಕ್​ನಲ್ಲಿರುವ ಯುಎಸ್​​ ಸೇನಾ ನೆಲೆಗಳ ಮೇಲೆ ಇರಾನ್​ ಕ್ಷಿಪಣಿ ದಾಳಿ; 80 ಅಮೆರಿಕನ್​ ಉಗ್ರರು ಹತ್ಯೆಗೀಡಾಗಿದ್ದಾರೆಂದು ವರದಿ

    ತೆಹ್ರಾನ್​: ಇರಾನ್​ ಸೇನಾ ಜನರಲ್​ ಖಾಸಿಮ್​ ಸೊಲೈಮಾನಿಯನ್ನು ಅಮೆರಿಕ ಸೇನೆ ವಾಯುದಾಳಿ ನಡೆಸಿ ಹತ್ಯೆಗೈದ ಬಳಿಕ ಯುಎಸ್​-ಇರಾನ್​ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಸೊಲೈಮಾನಿ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಇರಾನ್​ ​ ಈಗಾಗಲೇ ಹೇಳಿಕೊಂಡಿದೆ.

    ಇರಾನ್​ ಪ್ರಜೆಗಳು ಅಮೆರಿಕ ಅಧ್ಯಕ್ಷನ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಸೊಲೈಮಾನಿ ಅಂತ್ಯಕ್ರಿಯೆ ವೇಳೆ ಅವರ ಮಗಳೂ ಕೂಡ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದಾರೆ.

    ಹೀಗಿರುವಾಗ ಇರಾನ್​ ಸೈನಿಕರು ಅಮೆರಿಕದ 80 ಉಗ್ರರನ್ನು ಇಂದು ಬೆಳಗ್ಗೆ ಹತ್ಯೆ ಮಾಡಿದ್ದಾರೆ ಎಂದು ಇರಾನಿಯನ್​ ನ್ಯೂಸ್​ ಚಾನೆಲ್​ವೊಂದು ವರದಿ ಮಾಡಿದೆ.

    ಇರಾಕ್​ನಲ್ಲಿ ಬೀಡುಬಿಟ್ಟಿರುವ ಯುಎಸ್​ ಸೇನಾ ಪಡೆಗಳನ್ನು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್​ ಸೈನಿಕರು ತೆಹ್ರಾನ್​ನಿಂದ ಸುಮಾರು 15 ಕ್ಷಿಪಣಿಗಳ ದಾಳಿ ನಡೆಸಿದ್ದಾರೆ. ಯಾವುದೇ ಕ್ಷಿಪಣಿಯೂ ವಿಫಲವಾಗಿಲ್ಲ. ಈ ದಾಳಿಯಲ್ಲಿ ಒಟ್ಟು 80 ಅಮೆರಿಕನ್​ ಉಗ್ರರು ಮೃತಪಟ್ಟಿದ್ದಾರೆ. ಹಾಗೇ ಯುಎಸ್​ನ ಹೆಲಿಕಾಪ್ಟರ್​ಗಳು, ಸೇನಾ ಸಾಮಗ್ರಿಗಳು ಹಾನಿಗೊಂಡಿವೆ ಎಂದು ಸುದ್ದಿ ಮಾಧ್ಯಮ ಹೇಳಿದೆ.

    ಅಷ್ಟೇ ಅಲ್ಲದೆ ವಾಷಿಂಗ್ಟನ್​ ಮತ್ತೆ ಪ್ರತೀಕಾರಕ್ಕೆ ಮುಂದಾದರೆ ಇನ್ನೂ 100 ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತೇವೆ ಎಂದು ಇರಾನ್​ ಸೇನಾಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

    ಇರಾನ್ ನಡೆಸಿದ ಕ್ಷಿಪಣಿ ದಾಳಿ ಬಗ್ಗೆ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಆಲ್​ ಈಸ್​ ವೆಲ್​, ಇರಾಕ್​ನಲ್ಲಿರುವ ಯುಎಸ್​ನ ಎರಡು ಸೇನಾ ನೆಲೆಗಳ ಮೇಲೆ ಇರಾನ್​ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲಿ ಉಂಟಾಗಿರುವ ಸ್ಥಳ ಹಾನಿ, ಸಾವು-ನೋವುಗಳ ಬಗ್ಗೆ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ನಮ್ಮ ಅತ್ಯಂತ ಶಕ್ತಿಶಾಲಿ ಹಾಗೂ ಸುಸಜ್ಜಿತ ಸೇನಾ ಪಡೆ ವಿಶ್ವದ ಎಲ್ಲ ಕಡೆಗಳಲ್ಲೂ ಇದೆ. ಈ ದಾಳಿಯ ಬಗ್ಗೆ ನಾನು ನಾಳೆ ಸರಿಯಾಗಿ ಹೇಳಿಕೆ ನೀಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts