ಮೂರನೇ ದಿನವೂ ವಿದರ್ಭ ಬ್ಯಾಟಿಂಗ್

ನಾಗ್ಪುರ: ದೇಶೀಯ ಕ್ರಿಕೆಟ್ ಅನುಭವಿ ಬ್ಯಾಟ್ಸ್​ಮನ್ ವಾಸಿಂ ಜಾಫರ್(286) ಇರಾನಿ ಕಪ್ ಕ್ರಿಕೆಟ್ ಇತಿಹಾಸದ ಚೊಚ್ಚಲ ತ್ರಿಶತಕ ಬಾರಿಸಿದ ಸಾಧಕ ಎನಿಸಿಕೊಳ್ಳುವಲ್ಲಿ ವಿಫಲಗೊಂಡರು. ಈ ಅವಕಾಶದಿಂದ ವಾಸಿಂ ಜಾಫರ್ ವಂಚಿತರಾದರೂ, ಹಾಲಿ ರಣಜಿ ಚಾಂಪಿಯನ್ ವಿದರ್ಭ ತಂಡ, ಶೇಷ ಭಾರತ ತಂಡದ ವಿರುದ್ಧ ಮೊದಲ ಇನಿಂಗ್ಸ್​ನಲ್ಲಿ ರನ್ ಪರ್ವತವೇರಿ ನಿಂತಿದೆ.

5 ದಿನಗಳ ಪಂದ್ಯದಲ್ಲಿ 3ನೇ ದಿನವಾದ ಶುಕ್ರವಾರ ಮಂದಬೆಳಕಿನ ಸಮಸ್ಯೆಯಿಂದ ಕೇವಲ 28 ಓವರ್​ಗಳ ಆಟ ನಡೆಯಿತಲ್ಲದೆ, ವಿದರ್ಭ ಹಿಂದಿನ ಮೊತ್ತಕ್ಕೆ 104 ರನ್ ಸೇರಿಸಿ ಸುಸ್ಥಿತಿಯಲ್ಲಿದೆ. 3 ವಿಕೆಟ್​ಗೆ 593 ರನ್​ಗಳೊಂದಿಗೆ ಆಟ ಮುಂದುವರಿಸಿದ ವಿದರ್ಭ ಪಂದ್ಯ ಸ್ಥಗಿತಗೊಂಡಾಗ 5 ವಿಕೆಟ್​ಗೆ 702 ರನ್ ದಾಖಲಿಸಿದ್ದು, ಡಿಕ್ಲೇರ್ ಘೋಷಿಸದೆ 4ನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದೆ. ಇದರಿಂದ ಈ ಪಂದ್ಯ ಫಲಿತಾಂಶ ಕಾಣುವುದು ಅನುಮಾನ ಮೂಡಿದ್ದು, ಡ್ರಾ ಆಗುವ ಸಂಭವ ಹೆಚ್ಚಾಗಿದೆ.

ಶತಕದತ್ತ ಅಪೂರ್ವ ವಾಂಖೆಡೆ: ಮಾಜಿ ಮುಂಬೈ ಬ್ಯಾಟ್ಸ್​ಮನ್ 40 ವರ್ಷದ ವಾಸಿಂ ಜಾಫರ್ 14 ರನ್​ಗಳಿಂದ ತ್ರಿಶತಕದಿಂದ. 285 ರನ್​ಗಳೊಂದಿಗೆ ಆಟ ಮುಂದುವರಿಸಿದ ಜಾಫರ್, ದಿನದ 3ನೇ ಓವರ್ ಎಸೆದ ಸಿದ್ಧಾರ್ಥ್ ಕೌಲ್ ಬೌಲಿಂಗ್​ನಲ್ಲಿ ಬೌಲ್ಡಾದರು. 44 ರನ್​ಗಳೊಂದಿಗೆ ಆಟ ಮುಂದುವರಿಸಿದ ಅಪೂರ್ವ ವಾಂಖೆಡೆ(99*ರನ್, 173 ಎಸೆತ, 12 ಬೌಂಡರಿ, 2 ಸಿಕ್ಸರ್) ಶತಕ ಸನಿಹ ತಲುಪಿದರೆ, ಅಕ್ಷಯ್ ವಾಡ್ಕರ್(37) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ವಿದರ್ಭ 5ನೇ ವಿಕೆಟ್​ಗೆ 91 ರನ್ ಸೇರಿಸಿತು. ಬಳಿಕ ಮಂದಬೆಳಕು ಅಡ್ಡಿಯಾದ್ದರಿಂದ ದಿನದ 62 ಓವರ್​ಗಳು ವ್ಯರ್ಥವಾಯಿತು. ವಾಂಖೆಡೆ ಜತೆ ಆದಿತ್ಯ ಸರ್ವಾಟೆ(4*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿದರ್ಭ: 208 ಓವರ್​ಗಳಲ್ಲಿ 5 ವಿಕೆಟ್​ಗೆ 702(ವಾಸಿಂ ಜಾಫರ್ 286, ವಾಂಖೆಡೆ 99*, ಸರ್ವಾಟೆ 4*, ಸಿದ್ಧಾರ್ಥ್ ಕೌಲ್ 91ಕ್ಕೆ 2, ಆರ್.ಅಶ್ವಿನ್ 123ಕ್ಕೆ 1, ಶಾಬಾಜ್ ನದೀಂ 159ಕ್ಕೆ 1, ಜಯಂತ್ ಯಾದವ್ 202ಕ್ಕೆ 1 ).

Leave a Reply

Your email address will not be published. Required fields are marked *