ಪಾಕಿಸ್ತಾನಕ್ಕೆ ಇರಾನ್​ನಿಂದ ಪ್ರತಿಕಾರದ ಬೆದರಿಕೆ

ಆತ್ಮಾಹುತಿ ದಾಳಿಯಲ್ಲಿ ಇರಾನ್​ನ 27 ಯೋಧರ ಹತ್ಯೆ

ದುಬೈ: ಕೆಲದಿನಗಳ ಹಿಂದೆ ಆತ್ಮಾಹುತಿ ದಾಳಿ ನಡೆಸಿರುವ ಪಾಕಿಸ್ತಾನ ತನ್ನ ಪ್ರತಿಷ್ಠಿತ ರೆವಲ್ಯೂಷನರಿ ಗಾರ್ಡ್ಸ್​ ಪಡೆಯ 27 ಯೋಧರನ್ನು ಕೊಂದಿರುವುದಾಗಿ ಇರಾನ್​ ಆರೋಪಿಸಿದೆ. ಈ ತಪ್ಪಿಗಾಗಿ ಭಾರಿ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ಸಿದ್ಧರಾಗಿ ಎಂದು ಇರಾನ್​ನ ರೆವಲ್ಯುಷನರಿ ಗಾರ್ಡ್ಸ್​ನ ಮೇಜರ್​ ಜನರಲ್​ ಮೊಹಮ್ಮದ್​ ಅಲಿ ಜಾಫರಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.


ಇರಾನ್​ ಸೇನಾಪಡೆ ಮೇಲೆ ದಾಳಿ ನಡೆಸುವ ಸುನ್ನಿ ಮುಸ್ಲಿಮರ ಜೈಶ್​ ಅಲ್​ ಅದಲ್​ (ನ್ಯಾಯದ ಸೇನೆ) ಗುಂಪುಗಳಿಗೆ ಬೆಂಬಲ ನೀಡುವ ಮೂಲಕ ಪ್ರಾದೇಶಿಕ ಶತ್ರುಗಳಾದ ಸೌದಿ ಅರೇಬಿಯಾ ಮತ್ತು ಯುಎಇಗಳಿಗೂ ತಿರುಗೇಟು ನೀಡುವುದಾಗಿ ಇರಾನ್​ ಎಚ್ಚರಿಕೆ ನೀಡಿದೆ. ಆದರೆ, ತಾವು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿರುವ ಯಾವುದೇ ಗುಂಪಿಗೂ ಬೆಂಬಲ ನೀಡುತ್ತಿಲ್ಲವೆಂದು ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ ಹೇಳುತ್ತಲೇ ಇವೆ.


ಆದರೆ ಉಗ್ರರ ಸುರಕ್ಷಿತ ಅಡಗುತಾಣವಾಗಿರುವ ಪಾಕಿಸ್ತಾನದಲ್ಲಿ ನೆಲೆಸಿ ತನ್ನ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದಾಗಿ ಇರಾನ್​ ಆರೋಪಿಸುತ್ತಲೇ ಇದೆ. ಇಂತಹ ಸಂಘಟನೆಗಳನ್ನು ಸದೆಬಡಿಯುವಂತೆ ಮನವಿ ಮಾಡಿಕೊಳ್ಳುತ್ತಲೇ ಇದೆ. ಆದರೆ, ಪಾಕಿಸ್ತಾನ ಮಾತ್ರ ಇದಾವುದನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಮೊಹಮ್ಮದ್​ ಅಲಿ ಜಾಫರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

One Reply to “ಪಾಕಿಸ್ತಾನಕ್ಕೆ ಇರಾನ್​ನಿಂದ ಪ್ರತಿಕಾರದ ಬೆದರಿಕೆ”

Comments are closed.