Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಎಂಆರ್​ಪಿಎಲ್​ಗೆ ಇರಾನ್ ತೈಲ ಬಿಸಿ!

Saturday, 22.09.2018, 3:02 AM       No Comments

| ವೇಣುವಿನೋದ್ ಕೆ.ಎಸ್.ಮಂಗಳೂರು

ಇರಾನ್​ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳದಂತೆ ಭಾರತದ ಮೇಲೆ ಅಮೆರಿಕ ಹೇರುತ್ತಿರುವ ಒತ್ತಡದ ಬಿಸಿ ಎಂಆರ್​ಪಿಎಲ್​ಗೂ ತಟ್ಟಿರುವುದರಿಂದ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಆರಂಭವಾಗಿದೆ.

ರಾಜ್ಯಕ್ಕೆ ಪೆಟ್ರೋಲ್/ಡೀಸೆಲ್ ಪೂರೈಕೆ ಹೊಣೆ ಹೊತ್ತಿರುವ ಎಂಆರ್​ಪಿಎಲ್, ಇರಾನ್​ನಿಂದ ಕಚ್ಚಾ ತೈಲ ಆಮದು ಮಾಡುತ್ತಿರುವ ದೇಶದ ಪ್ರಮುಖ ರಿಫೈನರಿಗಳಲ್ಲಿ ಒಂದಾಗಿದೆ. ಇದು ಶೇ.30ಕ್ಕೂ ಅಧಿಕ ಕಚ್ಚಾತೈಲವನ್ನು ಇರಾನ್​ನಿಂದಲೇ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕ ಒತ್ತಡದ ಬಳಿಕ ಇರಾನ್ ತೈಲಕ್ಕೆ ಪರ್ಯಾಯವಾಗಿ ಬೇರೆ ಕಡೆಯಿಂದ ಕಚ್ಚಾ ತೈಲ ಪಡೆಯಲು ಎಂಆರ್​ಪಿಎಲ್ ಯೋಜನೆ ರೂಪಿಸುತ್ತಿದೆ.

ಎಂಆರ್​ಪಿಎಲ್ ವಾರ್ಷಿಕ 16 ಮಿಲಿಯನ್ ಮೆಟ್ರಿಕ್ ಟನ್(ಎಂಎಂಟಿ) ಕಚ್ಚಾ ತೈಲ ಸಂಸ್ಕರಿಸುತ್ತದೆ. ಇದರಲ್ಲಿ 3 ಎಂಎಂಟಿಯಷ್ಟನ್ನು ಪೆಟ್ರೋಲಿಯಂ ಸಚಿವಾಲಯವೇ ದೇಶೀಯವಾಗಿ ಬಾಂಬೆ ಹೈ, ಕೃಷ್ಣ ಗೋದಾವರಿ ಬೇಸಿನ್​ನ ರವ್ವಾ, ರಾಜಸ್ಥಾನದ ಮಂಗಳಾ ತೈಲ ಕ್ಷೇತ್ರದಿಂದ ಪೂರೈಕೆ ಮಾಡುತ್ತದೆ.

ಇದು ಸ್ವಲ್ಪ ಮಾತ್ರ. ಉಳಿದ 13 ಎಂಎಂಟಿಯನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಪ್ರಮುಖ ಪಾಲು (4-5 ಎಂಎಂಟಿ) ಇರಾನ್​ನದು. ಉಳಿದದ್ದನ್ನು ಟೆಂಡರ್​ಗೆ ಪೂರಕವಾಗಿ ರಷ್ಯಾ, ಯುಎಇ, ಕುವೈತ್, ಯುಎಸ್, ಸೌದಿ ಅರೇಬಿಯಾ ಮತ್ತಿತರ ಕಡೆಯಿಂದ ಪಡೆದುಕೊಳ್ಳಲಾಗುತ್ತದೆ. ಈ ವರ್ಷ ಎಂಆರ್​ಪಿಎಲ್ ಶೇ.90 ಇರಾನ್ ತೈಲ ಪಡೆದುಕೊಂಡಾಗಿದೆ. ಏಪ್ರಿಲ್​ನಿಂದ ನಿರಂತರ ಸೆಪ್ಟೆಂಬರ್​ವರೆಗೂ ತೈಲದ ನೌಕೆಗಳು ಆಗಮಿಸಿವೆ. ಅಕ್ಟೋಬರ್​ನ ನೌಕೆ ಬರಲು ಕೂಡ ಸಮಸ್ಯೆ ಇಲ್ಲ. ಅಮೆರಿಕದ ನಿರ್ಬಂಧದಿಂದಾಗಿ ನವೆಂಬರ್​ನಿಂದ ಇರಾನ್ ಕಚ್ಚಾ ತೈಲ ಕಳುಹಿಸುವಂತಿಲ್ಲ.

ದರ ಏರಿಕೆ ಭೀತಿ?

ಸದ್ಯಕ್ಕೆ ಇರಾನ್ ತೈಲ ನಿರ್ಬಂಧದಿಂದ ದೊಡ್ಡ ಪರಿಣಾಮ ಆಗದಿದ್ದರೂ ಮುಂದಿನ ದಿನಗಳಲ್ಲಿ ತೈಲದ ಕೊರತೆ ಉಂಟಾಗಿ ದರ ಏರಿಕೆ ಸಾಧ್ಯತೆ ಇದೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬರುತ್ತಿದೆ. ಈ ಬಾರಿ ಎಂಆರ್​ಪಿಎಲ್ ಅಮೆರಿಕದ ದಕ್ಷಿಣ ಗ್ರೀನ್ ಕಾನ್ಯನ್​ನ ಕಚ್ಚಾ ತೈಲ ಹಾಗೂ ಈಜಿಪ್ಟ್​ನ ಖಾರುನ್ ಕಚ್ಚಾ ತೈಲ ಸಂಸ್ಕರಣೆ ಮಾಡಿದೆ. ಆಸ್ಟ್ರೇಲಿಯಾ, ಪೂರ್ವ ಆಫ್ರಿಕಾದ ದೇಶಗಳಿಂದ ಕಚ್ಚಾ ತೈಲ ಮೂಲ ಪಡೆದುಕೊಳ್ಳುವುದಕ್ಕೂ ಚಿಂತನೆ ನಡೆಸಿದೆ. ನಿರ್ಬಂಧ ಪರಿಣಾಮ ತಗ್ಗಿಸಿ ಪರ್ಯಾಯ ಮಾರ್ಗಗಳ ಬಗ್ಗೆ ಯೋಚನೆ ಮಾಡಲಾಗುತ್ತಿದೆ, ಈ ವರ್ಷ ಸಮಸ್ಯೆ ಆಗುವುದಿಲ್ಲ, ಮುಂದಿನ ವರ್ಷಕ್ಕೆ ಬಿಕ್ಕಟ್ಟು ಬಗೆಹರಿಯಬಹುದು ಎಂಬುದು ಎಂಆರ್​ಪಿಎಲ್ ಅಧಿಕಾರಿಗಳ ವಿಶ್ವಾಸ.

ಶೇ.80 ಇಂಧನ ಪೂರೈಕೆ

ದೇಶದ ಪ್ರಮುಖ ತೈಲ ಸಂಸ್ಕರಣಾಗಾರ ಗಳ ಸಾಲಿನಲ್ಲಿ ಎಂಆರ್​ಪಿಎಲ್ ಗುರುತಿಸಿಕೊಂಡಿದೆ. ರಾಜ್ಯದ ಶೇ.80ರಷ್ಟು ಇಂಧನ ಪೂರೈಸುತ್ತದೆ. ನವಮಂಗಳೂರು ಬಂದರಿಗೆ ಕಚ್ಚಾತೈಲ ಆಮದು ಮಾಡಿ, ಅಲ್ಲಿಂದ ಪೈಪ್​ಲೈನ್ ಮೂಲಕ ಪಡೆದು ಸಂಸ್ಕರಣೆ ಮಾಡಲಾಗುತ್ತದೆ. ಐಎಸ್​ಪಿಆರ್​ಎಲ್​ನವರ ವ್ಯೂಹಾತ್ಮಕ ಭೂಗತ ಸಂಗ್ರಹಣಾಗಾರದಲ್ಲೂ ಕಚ್ಚಾತೈಲ ಸಂಗ್ರಹಿಸಲಾಗುತ್ತಿದೆ.

ಇರಾನ್​ನಿಂದ ಈ ವರ್ಷ ಶೇ.90 ಕಚ್ಚಾ ತೈಲ ಬಂದಿದೆ. ಅಮೆರಿಕ ನಿರ್ಬಂಧ ಪರಿಣಾಮ ನವೆಂಬರ್​ನಿಂದ ತೈಲ ಬರಲಾರದು. ಕೇಂದ್ರ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಪರ್ಯಾಯ ಮಾರ್ಗಗಳನ್ನೂ ಯೋಚಿಸುತ್ತಿದ್ದೇವೆ, ಮುಂದಿನ ವರ್ಷ ಸಮಸ್ಯೆ ಇತ್ಯರ್ಥ ಆಗಬಹುದು.

| ಎಂ.ವೆಂಕಟೇಶ್ ವ್ಯವಸ್ಥಾಪಕ ನಿರ್ದೇಶಕ, ಎಂಆರ್​ಪಿಎಲ್

Leave a Reply

Your email address will not be published. Required fields are marked *

Back To Top