ಪಾಕಿಸ್ತಾನದ ಮೇಲೆಯೇ ಕ್ಷಿಪಣಿ ಉಡಾಯಿಸಿದ ಇರಾನ್​: ಪರಿಣಾಮ ನೆಟ್ಟಗಿರಲ್ಲ ಎಂದ ಪಾಕ್​!

ಇಸ್ಲಮಾಬಾದ್​: ಪಾಕಿಸ್ತಾನದಲ್ಲಿರುವ ಎರಡು ಉಗ್ರ ಸಂಘಟನೆಗಳ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಮಂಗಳವಾರ (ಜ.16)​ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನಿಯನ್​ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಇರಾಕ್ ಮತ್ತು ಸಿರಿಯಾದಲ್ಲಿನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಮರು ದಿನವೇ ಪಾಕಿಸ್ತಾನದ ಮೇಲೂ ದಾಳಿ ನಡೆದಿದೆ. ಬಲೂಚಿ ಉಗ್ರಗಾಮಿ ಸಂಘಟನೆ ಜೈಶ್ ಅಲ್ ಅದ್ಲ್​ಗೆ ಸಂಬಂಧಿಸಿದ ಎರಡು ನೆಲೆಗಳ ಮೇಲೆ ದಾಳಿ ನಡೆದಿದೆ. ಈ ಹಿಂದೆ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ … Continue reading ಪಾಕಿಸ್ತಾನದ ಮೇಲೆಯೇ ಕ್ಷಿಪಣಿ ಉಡಾಯಿಸಿದ ಇರಾನ್​: ಪರಿಣಾಮ ನೆಟ್ಟಗಿರಲ್ಲ ಎಂದ ಪಾಕ್​!