More

    ಉಕ್ರೇನಿಯನ್​ ವಿಮಾನ ಪತನ ಪ್ರಕರಣ: ಮೃತರ ಕುಟುಂಬದ ಬಳಿ ಕ್ಷಮೆಯಾಚಿಸಿ, ಅಮೆರಿಕ ಕಡೆ ಬೊಟ್ಟು ಮಾಡಿದ ಇರಾನ್​

    ಟೆಹರಾನ್​: ಉಕ್ರೇನಿಯನ್​ ವಿಮಾನ ಪತನದ ಹೊಣೆ ಹೊತ್ತುಕೊಂಡ ಬೆನ್ನಲ್ಲೇ ದುರಂತದಲ್ಲಿ ಸಾವಿಗೀಡಾದ ಕುಟುಂಬದವರ ಬಳಿ ಇರಾನ್​ ಕ್ಷಮೆಯಾಚಿಸಿ, ಸಂತಾಪ ಸೂಚಿಸಿದೆ.

    ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಇರಾನ್​ ವಿದೇಶಾಂಗ ಸಚಿವ ಜಾವದ್​ ಜರೀಫ್, ಇದೊಂದು ದುಃಖದ ದಿನವಾಗಿದೆ. ನಮ್ಮ ಸೇನಾಪಡೆ ತನಿಖೆಯ ಪ್ರಾಥಮಿಕ ನಿರ್ಣಯ ಪ್ರಕಾರ ಇದೊಂದು ಮಾನವ ಪ್ರಮಾದವಾಗಿದ್ದು, ಅಮೆರಿಕ ಸೃಷ್ಟಿ ಮಾಡಿದ ಬಿಕ್ಕಟ್ಟಿನ ಕಾರಣ ಈ ಘನಘೋರ ವಿಪತ್ತು ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

    ಬಳಿಕ ಕ್ಷಮೆಯಾಚಿಸಿರುವ ಜರೀಫ್​, ಈ ಘಟನೆಯಿಂದ ಪಶ್ಚಾತಾಪ ಕಾಡುತ್ತಿದೆ. ವಿಮಾನ ದರಂತದಲ್ಲಿ ಮೃತಪಟ್ಟ ನಮ್ಮವರಿಗೂ ಹಾಗೂ ಇತರೆ ದೇಶದ ಸಂತ್ರಸ್ತ ಕುಟುಂಬಗಳ ಬಳಿ ಕ್ಷಮೆಯಾಚಿಸಿ, ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts