ಐಪಿಎಸ್​ ಅಧಿಕಾರಿಯ ಮೊಬೈಲ್​ ಕದ್ದು ಪರಾರಿ

ಬೆಂಗಳೂರು: ನಗರದಲ್ಲಿ ಸುಲಿಗೆಕೋರರ ಅಟ್ಟಹಾಸ ಮಿತಿಮೀರುತ್ತಿದ್ದು ಭಾನುವಾರ ಐಪಿಎಸ್​ ಅಧಿಕಾರಿಯ ಮೊಬೈಲ್​ನ್ನೇ ಕಸಿದ ಖದೀಮರು ಪರಾರಿಯಾಗಿದ್ದಾರೆ.

ಎಚ್‌ಎಸ್‌ಆರ್ ಲೇಔಟ್​ನ 17ನೇ ಕ್ರಾಸ್​ನಲ್ಲಿ ಘಟನೆ ನಡೆದಿದ್ದು, ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಅವರು ಎಚ್​ಎಸ್​ಆರ್​ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸ್​ ಇಲಾಖೆಯಲ್ಲಿ ಕಂಪ್ಯೂಟರ್ ವಿಂಗ್‌ನ ಎಡಿಜಿಪಿ ಆಗಿರುವ ಸಂಜಯ್ ಸಹಾಯ್ ಅವರ ಬಳಿ ಬೈಕ್​ನಲ್ಲಿ ಬಂದ ಕಳ್ಳರು ಮೊಬೈಲ್​ ಕಸಿದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *