ಮಧುಕರ್​ ಶೆಟ್ಟಿಯವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ ಬೆಂಗಳೂರಿಗೆ, ನಾಳೆ ಅಂತ್ಯಕ್ರಿಯೆ

ಕಲಬುರಗಿ: ಅನಾರೋಗ್ಯದಿಂದ ಮೃತಪಟ್ಟಿರುವ ಹಿರಿಯ ಐಪಿಎಸ್​ ಅಧಿಕಾರಿ ಮಧುಕರ್​ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ ಬೆಂಗಳೂರಿಗೆ ತರಲಾಗುವುದು.

ವಿಶೇಷ ವಿಮಾನದ ಮೂಲಕ ಪಾರ್ಥಿವ ಶರೀರ ತಂದು ಯಲಹಂಕದ ಸಶಸ್ತ್ರ ಪೊಲೀಸ್​ ತರಬೇತಿ ಕೇಂದ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅದಾದ ಬಳಿಕ ರಾತ್ರಿ.8.25ಕ್ಕೆ ಮಂಗಳೂರಿಗೆ ರವಾನೆ ಮಾಡಲಾಗುವುದು. ನಾಳೆ ಮಧ್ಯಾಹ್ನ ಅವರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.




https://youtu.be/7CE6au-KYYs

Leave a Reply

Your email address will not be published. Required fields are marked *