ದಿಟ್ಟ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ನಿಯೋಜಿಸಿದ ರಾಜ್ಯ ಸರ್ಕಾರ

ಬೆಂಗಳೂರು: ದಕ್ಷ ಅಧಿಕಾರಿ ಎಂದೇ ಹೆಸರಾಗಿರುವ ಸದ್ಯ ಚಿಕ್ಕಮಗಳೂರು ಜಿಲ್ಲೆಯ ಎಸ್​ಪಿ ಆಗಿರುವ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯನ್ನಾಗಿಸಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

  • ಅಣ್ಣಾ ಮಲೈ ಅವರ ಜತೆಗೇ ಇನ್ನೂ ನಾಲ್ವರು ಐಪಿಎಸ್​ ಅಧಿಕಾರಿಗಳನ್ನೂ ಸರ್ಕಾರ ವರ್ಗಾವಣೆ ಮಾಡಿದೆ.
  • ಅಣ್ಣಾಮಲೈ, ಡಿಸಿಪಿ, ಬೆಂಗಳೂರು ದಕ್ಷಿಣ
  • ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂಚಾರ
  • ಅಜಯ್ ಹಿಲೋರಿ, ಕೆಎಸ್​​​​ಆರ್​ಪಿ
  • ರಾಹುಲ್ ಕುಮಾರ್, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ
  • ಹರೀಶ್ ಪಾಂಡೆ, ಚಿಕ್ಕಮಗಳೂರು ಎಸ್​​ಪಿ
  • ಜಿನೇಂದ್ರ ಖಣಗಾವಿ, ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣಕ್ಕೆ ನಿಯೋಜನೆ ಮಾಡಲಾಗಿದೆ.

ಅಣ್ಣಾಮಲೈ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದು, ತಮ್ಮ ದಿಟ್ಟ ನಿರ್ಧಾರಗಳಿಂದ ಸುದ್ದಿಯಾದವರು. ಸದ್ಯ ಅವರನ್ನು ಬೆಂಗಳೂರಿಗೆ ನಿಯೋಜಿನೆ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಕುತೂಹಲ ಮನೆ ಮಾಡಿದೆ.

ಇದಕ್ಕೂ ಹಿಂದೆ, ಬಿ.ಎಸ್​. ಯಡಿಯೂರಪ್ಪ ಅವರು ಮೂರೇ ದಿನ ಮುಖ್ಯಮಂತ್ರಿಯಾಗಿದ್ದ ವೇಳೆ ಅಣ್ಣಾಮಲೈ ಅವರನ್ನು ರಾಮನಗರ ಜಿಲ್ಲೆಗೆ ವರ್ಗ ಮಾಡಿದ್ದರು. ಆದರೆ, ಎಚ್​.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ವರ್ಗಾವಣೆ ರದ್ದು ಮಾಡಿದ್ದರು.