ನವದೆಹಲಿ: ದುಬೈನಲ್ಲಿ ನಡೆದ ಎರಡು ದಿನಗಳ ಐಪಿಎಲ್ (IPL 2025) ಹರಾಜು ಪ್ರಕ್ರಿಯೆಯಲ್ಲಿ ಊಹಿಸಲಾಗಿದ್ದ ಆಟಗಾರರ ಭವಿಷ್ಯ ಅಂದುಕೊಂಡತೆಯೇ ನಡೆದಿದ್ದು, ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಮೂಡಿಸಿತು. ಅರ್ಷ್ದೀಪ್ ಸಿಂಗ್, ರಿಷಭ್ ಪಂತ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್, ಯಜುವೇಂದ್ರ ಚಹಲ್ ಸೇರಿದಂತೆ ಒಂದಷ್ಟು ಸ್ಟಾರ್ ಕ್ರಿಕೆಟಿಗರು ದುಬಾರಿ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಸದ್ಯ ಯುವ ಹಾಗೂ ಅನುಭವಿ ಆಟಗಾರರನ್ನೇ ತಮ್ಮ ಫ್ರಾಂಚೈಸಿಗೆ ಖರೀದಿ ಮಾಡಿರುವ 10 ತಂಡಗಳ ಪೈಕಿ ಉತ್ತಮ ಬ್ಯಾಟಿಂಗ್ ಲೈನ್ ಹೊಂದಿರುವ ಮೂರು ಫ್ರಾಂಚೈಸಿಗಳು ಹೀಗಿವೆ ನೋಡಿ.
ಸನ್ರೈಸರ್ಸ್ ಹೈದರಾಬಾದ್
ಕಾವ್ಯ ಮಾರನ್ ಮಾಲೀಕತ್ವದ ಸನ್ರೈಸರ್ಸ್ ಹೈದರಾಬಾದ್ ಈ ಬಾರಿ ಹರಾಜಿನಲ್ಲಿ ಉತ್ತಮ ಖರೀದಿಯನ್ನು ಮಾಡಿತು. ತಂಡದ ಬಲಿಷ್ಠ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದ ಫ್ರಾಂಚೈಸಿ, ಹರಾಜಿನಲ್ಲಿ ಅತ್ಯುತ್ತಮ ಬ್ಯಾಟರ್ಗಳನ್ನೇ ಖರೀದಿಸಿದೆ.
ಪ್ರಮುಖ ಆಟಗಾರರು
- ಟ್ರಾವಿಸ್ ಹೆಡ್
- ಇಶಾನ್ ಕಿಶನ್
- ಅಭಿಷೇಕ್ ಶರ್ಮಾ
- ಹೆನ್ರಿಚ್ ಕ್ಲಾಸೆನ್
- ನಿತೀಶ್ ರೆಡ್ಡಿ
ಮುಂಬೈ ಇಂಡಿಯನ್ಸ್
ಐದು ಬಾರಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ಈ ಬಾರಿಯೂ ಚಾಂಪಿಯನ್ಸ್ ಆಗಿ ಮಿಂಚಲು ಸಜ್ಜಾಗಿದೆ. ಅದಕ್ಕಾಗಿಯೇ ತಂಡಕ್ಕೆ ಉತ್ತಮ ಬ್ಯಾಟರ್ ಹಾಗೂ ಬೌಲರ್ಗಳನ್ನು ಆಯ್ಕೆ ಮಾಡಿಕೊಂಡಿದೆ. ಯಾರನ್ನು ಹರಾಜಿನಲ್ಲಿ ಖರೀದಿ ಮಾಡಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಫ್ರಾಂಚೈಸಿ, ಟೀಮ್ನ ಈ ಐವರು ಬಲಿಷ್ಠ ಬ್ಯಾಟರ್ಗಳ ಮೇಲೆ ಅಪಾರ ಭರವಸೆ ಹೊಂದಿದೆ.
ಪ್ರಮುಖ ಆಟಗಾರರು
- ರೋಹಿತ್ ಶರ್ಮಾ
- ಸೂರ್ಯಕುಮಾರಿ ಯಾದವ್
- ತಿಲಕ್ ವರ್ಮಾ
- ಹಾರ್ದಿಕ್ ಪಾಂಡ್ಯ
- ವಿಲ್ ಜ್ಯಾಕ್ಸ್
ಡೆಲ್ಲಿ ಕ್ಯಾಪಿಟಲ್ಸ್
ಇತರೆ ತಂಡಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್, ಹರಾಜಿನಲ್ಲಿ ಅಚ್ಚರಿ ಮೂಡುವಂತೆ ಆಟಗಾರರನ್ನು ಖರೀದಿಸಿತು. ಅದರಲ್ಲೂ ವಿಶೇಷವಾಗಿ ಬ್ಯಾಟರ್ಗಳ ಮೇಲೆ ಹೆಚ್ಚು ಗಮನಹರಿಸಿದ ಫ್ರಾಂಚೈಸಿ, ಉತ್ತಮ ಖರೀದಿಯನ್ನೇ ಮಾಡಿತು. ಸದ್ಯ ಯಾವ ಬ್ಯಾಟ್ಸ್ಮನ್ಗಳು ಡೆಲ್ಲಿ ತಂಡಕ್ಕೆ ಬಲ ತುಂಬಲಿದ್ದಾರೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ.
ಪ್ರಮುಖ ಆಟಗಾರರು
- ಕೆ.ಎಲ್. ರಾಹುಲ್
- ಟ್ರಿಸ್ಟಾನ್ ಸ್ಟಬ್ಸ್
- ಹ್ಯಾರಿ ಬ್ರೂಕ್
- ಅಭಿಷೇಕ್ ಪೊರೆಲ್
- ಝಾರ್ ಪಟೇಲ್
BBK11: ದಿಕ್ಕು ತಪ್ಪಿದ್ರೆ ತಲೆ ಮೇಲೆ ತಟ್ಟಿ ಕೂರಿಸುತ್ತೀವಿ! ಕಿಚ್ಚನ ಮಾತಿನಲ್ಲಿ ಹೆಚ್ಚಿದ ‘ಕಿಚ್ಚು’