ಯುವಿ ಔಟ್, ಆರ್​ಸಿಬಿ ಕ್ಲೀನ್ ಕನ್ನಡ!

ಮುಂಬೈ: ಐಪಿಎಲ್ 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೂ ಮುನ್ನ ಎಲ್ಲ ಎಂಟೂ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. 2019ರ ಐಪಿಎಲ್​ಗೆ ಏಪ್ರಿಲ್ ತಿಂಗಳಲ್ಲಿ ಮಾತ್ರವೇ ಆಸೀಸ್ ಆಟಗಾರರು ಲಭ್ಯವಿರಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ಕಾರಣ ಹೆಚ್ಚಿನ ಆಸ್ಟ್ರೇಲಿಯಾ ಆಟಗಾರರನ್ನು ತಂಡಗಳು ಕೈಬಿಟ್ಟಿವೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಯುವರಾಜ್ ಸಿಂಗ್​ರನ್ನು ತಂಡದಿಂದ ಕೈಬಿಟ್ಟಿದ್ದರೆ, ಆರ್​ಸಿಬಿ ತಂಡ ಯಾವೊಬ್ಬ ಸ್ಥಳೀಯ ಆಟಗಾರರನ್ನೂ ಉಳಿಸಿಕೊಂಡಿಲ್ಲ. ತಂಡದಲ್ಲಿದ್ದ ರಾಜ್ಯದ ಅನಿರುದ್ಧ ಜೋಶಿ ಹಾಗೂ ಪವನ್ ದೇಶಪಾಂಡೆಗೆ ಕೊಕ್ ನೀಡಲಾಗಿದೆ. ಇನ್ನು 14 ಮಂದಿಯ ತಂಡಕ್ಕೆ ವಿರಾಟ್ ಕೊಹ್ಲಿಯೇ ನಾಯಕ ಎನ್ನುವುದನ್ನೂ ಪ್ರಕಟಿಸಿದೆ.

# ಆರ್​ಸಿಬಿ: ಇನ್: ಮಾರ್ಕಸ್ ಸ್ಟೋಯಿನಿಸ್ ಔಟ್: ಕ್ವಿಂಟನ್ ಡಿ ಕಾಕ್, ಮಂದೀಪ್ ಸಿಂಗ್, ಬ್ರೆಂಡನ್ ಮೆಕ್ಕಲಂ, ಕ್ರಿಸ್ ವೋಕ್ಸ್, ಕೋರಿ ಆಂಡರ್​ಸನ್, ಸರ್ಫ್ರಾಜ್ ಖಾನ್, ಅನಿಕೇತ್ ಚೌಧರಿ, ಅನಿರುದ್ಧ ಜೋಶಿ, ಎಂ.ಅಶ್ವಿನ್, ಮನನ್ ವೋಹ್ರಾ, ಪವನ್ ದೇಶಪಾಂಡೆ. ಹಾಲಿ ತಂಡದ ಸದಸ್ಯರು: 15, ವರ್ಗಾವಣೆ: 1, ಬಿಡುಗಡೆ: 10

# ಮುಂಬೈ ಇಂಡಿಯನ್ಸ್: ಇನ್: ಕ್ವಿಂಟನ್ ಡಿ ಕಾಕ್ ಔಟ್: ಮುಸ್ತಾಫಿಜುರ್ ರೆಹಮಾನ್, ಪ್ಯಾಟ್ ಕಮ್ಮಿನ್ಸ್, ಅಕಿಲ ಧನಂಜಯ, ಜೆಪಿ ಡುಮಿನಿ, ಸೌರಭ್ ತಿವಾರಿ, ತಜೀಂದರ್ ಸಿಂಗ್, ಮೊಹ್​ಶಿನ್ ಖಾನ್, ಪ್ರದೀಪ್ ಸಂಗ್ವಾನ್, ಎಂಡಿ ನಿಧೀಶ್, ಶರದ್ ಲಾಂಬಾ. ಹಾಲಿ ತಂಡದ ಸದಸ್ಯರು: 18, ವರ್ಗಾವಣೆ: 1, ಬಿಡುಗಡೆ: 10

# ಡೆಲ್ಲಿ ಡೇರ್​ಡೆವಿಲ್ಸ್: ಇನ್: ಶಿಖರ್ ಧವನ್ ಔಟ್: ಗೌತಮ್ ಗಂಭೀರ್, ಜೇಸನ್ ರಾಯ್, ಗುರುಕೀರತ್ ಮಾನ್, ಗ್ಲೆನ್ ಮ್ಯಾಕ್ಸ್​ವೆಲ್, ಮೊಹಮದ್ ಶಮಿ, ಡಾನ್ ಕ್ರಿಶ್ಚಿಯನ್, ವಿಜಯ್ ಶಂಕರ್, ಅಭಿಷೇಕ್ ಶರ್ಮ, ಶಾಬಾಜ್ ನದೀಂ, ಸಯಾನ್ ಘೋಶ್, ಲಿಯಾಮ್ ಪ್ಲಂಕೆಟ್, ಜೂನಿಯರ್ ಡಾಲಾ, ನಮನ್ ಓಜಾ. ಹಾಲಿ ತಂಡದ ಸದಸ್ಯರು: 14, ವರ್ಗಾವಣೆ: 1, ಬಿಡುಗಡೆ: 13

# ಸನ್​ರೈಸರ್ಸ್ ಹೈದರಾಬಾದ್: ಇನ್: ವಿಜಯ್ ಶಂಕರ್, ಅಭಿಷೇಕ್ ಶರ್ಮ, ಶಾಬಾಜ್ ನದೀಂ ಔಟ್: ಶಿಖರ್ ಧವನ್, ಸಚಿನ್ ಬೇಬಿ, ತನ್ಮಯ್ ಅಗರ್ವಾಲ್, ವೃದ್ಧಿಮಾನ್ ಸಾಹ, ಕ್ರಿಸ್ ಜೋರ್ಡನ್, ಕಾಲೋಸ್ ಬ್ರಾಥ್​ವೇಟ್. ಅಲೆಕ್ಸ್ ಹ್ಯಾಲ್ಸ್, ಬಿಪುಲ್ ಶರ್ಮ, ಸಯ್ಯದ್ ಮೆಹದಿ ಹಸನ್. ಹಾಲಿ ತಂಡದ ಸದಸ್ಯರು: 17, ವರ್ಗಾವಣೆ: 3, ಬಿಡುಗಡೆ: 9

# ಚೆನ್ನೈ ಸೂಪರ್ ಕಿಂಗ್ಸ್: ಔಟ್: ಮಾರ್ಕ್ ವುಡ್, ಕನಿಷ್ಕ್ ಸೇಥ್, ಕ್ಷಿತಿಜ್ ಶರ್ಮ. ಹಾಲಿ ತಂಡದ ಸದಸ್ಯರು: 22, ಬಿಡುಗಡೆ: 3

# ಕೆಕೆಆರ್ ಔಟ್: ಮಿಚೆಲ್ ಸ್ಟಾರ್ಕ್, ಮಿಚೆಲ್ ಜಾನ್ಸನ್, ಟಾಮ್ ಕರಾ›ನ್, ಕ್ಯಾಮರೂನ್ ಡೆಲ್​ಪೋರ್ಟ್, ಜೋನಾಥನ್ ಸೀಯರ್ಲೆಸ್, ಇಶಾನ್ ಜಗ್ಗಿ, ಅಪೂರ್ವ ವಾಂಖಡೆ, ವಿನಯ್ ಕುಮಾರ್. ಹಾಲಿ ತಂಡದ ಸದಸ್ಯರು: 13, ಬಿಡುಗಡೆ: 8

# ಕಿಂಗ್ಸ್ ಇಲೆವೆನ್ ಪಂಜಾಬ್ ಇನ್: ಮಂದೀಪ್ ಸಿಂಗ್ ಔಟ್: ಮಾರ್ಕಸ್ ಸ್ಟೋಯಿನಸ್, ಅಕ್ಷರ್ ಪಟೇಲ್, ಆರನ್ ಫಿಂಚ್, ಮೋಹಿತ್ ಶರ್ಮ, ಬರೀಂದರ್ ಸ್ರಾನ್, ಯುವರಾಜ್ ಸಿಂಗ್, ಬೆನ್ ಡ್ವಾರಶಿಸ್, ಮನೋಜ್ ತಿವಾರಿ, ಅಕ್ಷದೀಪ್ ನಾಥ್, ಪ್ರದೀಪ್ ಸಾಹು, ಮಯಾಂಕ್ ದಗಾರ್, ಮಂಜೂರ್ ದಾರ್. ಹಾಲಿ ತಂಡದ ಸದಸ್ಯರು: 9, ವರ್ಗಾವಣೆ: 1, ಬಿಡುಗಡೆ: 11

# ರಾಜಸ್ಥಾನ ರಾಯಲ್ಸ್ ಔಟ್: ಡಾರ್ಸಿ ಶಾರ್ಟ್, ಬೆನ್ ಲಾಫ್ಲಿನ್, ಹೆನ್ರಿಚ್ ಕ್ಲಾಸೆನ್, ಡೇನ್ ಪ್ಯಾಟರ್​ನಸ್, ಜಹೀರ್ ಖಾನ್, ದುಷ್ಮಂತ ಚಾಮೀರ, ಜೈದೇವ್ ಉನಾದ್ಕತ್, ಅನುರೀತ್ ಸಿಂಗ್, ಅಂಕಿತ್ ಶರ್ಮ, ಜತಿನ್ ಸಕ್ಸೇನಾ. ಹಾಲಿ ತಂಡದ ಸದಸ್ಯರು: 16, ಬಿಡುಗಡೆ: 10