ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿಗೊಳಿಸಿದ ಬಿಸಿಸಿಐ

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಸ್ಥಗಿತಗೊಂಡಿರುವ ಐಪಿಎಲ್ 14ನೇ ಆವೃತ್ತಿಯನ್ನು ಟಿ20 ವಿಶ್ವಕಪ್‌ಗೆ ಮುನ್ನ ಆಯೋಜಿಸಲು ಬಿಸಿಸಿಐ ಯೋಜನೆ ಸಿದ್ಧಪಡಿಸಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ನಡುವಿನ ಒಂದು ತಿಂಗಳ ಕಾಲಾವಕಾಶದಲ್ಲಿ ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ರೂಪುರೇಷೆ ರೂಪಿಸುತ್ತಿದೆ. ಐಪಿಎಲ್‌ನಲ್ಲಿ ಸದ್ಯ 29 ಪಂದ್ಯ ನಡೆದಿದ್ದು, ಇನ್ನು 31 ಪಂದ್ಯ ಬಾಕಿ ಉಳಿದಿವೆ. 8 ಡಬಲ್ ಹೆಡರ್‌ಗಳ (ಒಂದೇ ದಿನ 2 ಪಂದ್ಯ) ಸಹಿತ 4 ವಾರಗಳಲ್ಲಿ 31 ಪಂದ್ಯ ಮುಗಿಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಮೇ … Continue reading ಐಪಿಎಲ್ 14ನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ದಿನಾಂಕ ನಿಗದಿಗೊಳಿಸಿದ ಬಿಸಿಸಿಐ