ಐಪಿಎಲ್ ಹರಾಜಿಗೆ ಸಾವಿರ ಕ್ರಿಕೆಟರ್ಸ್

ಬೆಂಗಳೂರು: ಬಹುನಿರೀಕ್ಷಿತ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಗೆ ಅಂದಾಜು 1 ಸಾವಿರ ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಿಸೆಂಬರ್​ನಲ್ಲಿ 18ರಂದು ಜೈಪುರದಲ್ಲಿ ನಡೆಯಲಿರುವ ಹರಾಜಿನಲ್ಲಿ 746 ಭಾರತೀಯರು ಮತ್ತು 232 ವಿದೇಶಿ ಆಟಗಾರರ ಸಹಿತ ಒಟ್ಟು 1003 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ 200 ಆಟಗಾರರು ಹಾಗೂ 800 ದೇಶೀಯ ಆಟಗಾರರು, ಅಸೋಸಿಯೇಟ್ ತಂಡಗಳ 3 ಆಟಗಾರರ ಹೆಸರು ಹರಾಜು ಪಟ್ಟಿಯಲ್ಲಿದೆ. ವಿದೇಶಿ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದ ಗರಿಷ್ಠ 59 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಆಸ್ಟ್ರೇಲಿಯಾ(35), ವೆಸ್ಟ್ ಇಂಡೀಸ್(33), ಶ್ರೀಲಂಕಾ(28), ಅಫ್ಘಾನಿಸ್ತಾನ (27), ನ್ಯೂಜಿಲೆಂಡ್(17), ಇಂಗ್ಲೆಂಡ್(14), ಜಿಂಬಾಬ್ವೆ(5) ತಂಡದ ಆಟಗಾರರ ಜತೆಗೆ ಹಾಂಕಾಂಗ್, ಐರ್ಲೆಂಡ್, ನೆದರ್ಲೆಂಡ್, ಅಮೆರಿಕದ ತಲಾ ಒಬ್ಬರು ಪಟ್ಟಿಯಲ್ಲಿದ್ದಾರೆ.