IPL-2025: ಐಪಿಎಲ್​ ಟೂರ್ನಿಯ ಯಶಸ್ವಿ ತಂಡಗಳಿಗೆ ಗೆಲುವಿನ ಆರಂಭದ ತವಕ; ಇಂದು ಸಿಎಸ್​ಕೆ-ಮುಂಬೈ ಹಣಾಹಣಿ

blank

ಚೆನ್ನೈ: ಐಪಿಎಲ್​ ಟೂರ್ನಿ ಕಂಡ ಅತ್ಯಂತ ಯಶಸ್ವಿ ತಂಡಗಳೆನಿಸಿದ ತಲಾ 5 ಬಾರಿಯ ಚಾಂಪಿಯನ್​ಗಳಾದ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಐಪಿಎಲ್​-18ರಲ್ಲಿ ಭಾನುವಾರ ರಾತ್ರಿ ಮುಖಾಮುಖಿ ಆಗಲಿವೆ. ಚೆಪಾಕ್​ನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಆರಂಭ ಕಾಣಲು ಉಭಯ ತಂಡಗಳು ಪೈಪೋಟಿ ನಡೆಸಲಿವೆ.

ಕಳೆದ ಆವೃತ್ತಿಯಲ್ಲಿ ಪ್ಲೇಆ್​ ಹಂತಕ್ಕೇರಲು ವಿಲವಾಗಿದ್ದ ಉಭಯ ತಂಡಗಳು ಈ ಬಾರಿ ಪುಟಿದೇಳುವ ಹಂಬಲದಲ್ಲಿವೆ. ಮೆಗಾ ಹರಾಜಿನ ನಂತರವೂ ಎರಡೂ ತಂಡಗಳ ಪ್ರಮುಖ ಆಟಗಾರರಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಋತುರಾಜ್​ ಗಾಯಕ್ವಾಡ್​ ಸಾರಥ್ಯದ ಸಿಎಸ್​ಕೆಗೆ ಅನುಭವಿ ಎಂಎಸ್​ ಧೋನಿ ಮಾರ್ಗದರ್ಶನ ಈ ಸಲವೂ ಮುಂದುವರಿಯಲಿದೆ. ನಾಯಕತ್ವ ಕಳೆದುಕೊಂಡ ಬಳಿಕ ಕಳೆದ ವರ್ಷ ಮಂಕಾಗಿದ್ದ ರೋಹಿತ್​ ಶರ್ಮ ಮುಂಬೈ ತಂಡದಲ್ಲೇ ರಿಟೇನ್​ ಆಗುವ ಮೂಲಕ ಮ್ಯಾನೇಜ್​ಮೆಂಟ್​ ಬಗೆಗಿನ ಅಸಮಾಧಾನದ ವರದಿಯನ್ನು ತಳ್ಳಿಹಾಕಿದ್ದರು.

ಕಳೆದ 7 ವರ್ಷಗಳಿಂದ ಸಿಎಸ್​ಕೆ ತಂಡದ ಪ್ರಮುಖ ವೇಗಿ ಆಗಿದ್ದ ದೀಪಕ್​ ಚಹರ್​ ಮತ್ತು ಸ್ಪಿನ್ನರ್​ ಮಿಚೆಲ್​ ಸ್ಯಾಂಟ್ನರ್​ ಈ ಬಾರಿ ಮುಂಬೈ ತಂಡದಲ್ಲಿದ್ದಾರೆ. ಹೀಗಾಗಿ ಚೆಪಾಕ್​ ಅಂಗಣದಲ್ಲಿ ಇವರಿಬ್ಬರ ಅನುಭವ ಮುಂಬೈಗೆ ಲಾಭದಾಯಕ ಎನಿಸಿದೆ.

ಮೆಗಾ ಹರಾಜಿನಲ್ಲಿ ಕೈತಪ್ಪಿದ ಇಶಾನ್​ ಕಿಶನ್​ ಸ್ಥಾನವನ್ನು ಈ ಬಾರಿ ದಣ ಆಫ್ರಿಕಾದ ವಿಕೆಟ್​ ಕೀಪರ್​-ಬ್ಯಾಟರ್​ ರ್ಯಾನ್​ ರಿಕೆಲ್​ಟನ್​ ತುಂಬಲಿದ್ದು, ರೋಹಿತ್​ ಜತೆ ಇನಿಂಗ್ಸ್​ ಆರಂಭಿಸಲಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ತಿಲಕ್​ ವರ್ಮ, ಸೂರ್ಯಕುಮಾರ್​ ಶಕ್ತಿ ತುಂಬಲಿದ್ದಾರೆ. ಬುಮ್ರಾ ಗೈರಿನಲ್ಲಿ ದೀಪಕ್​ ಚಹರ್​, ಟ್ರೆಂಟ್​ ಬೌಲ್ಟ್​, ರೀಸ್​ ಟಾಪ್ಲೆ ವೇಗದ ಬೌಲಿಂಗ್​ ವಿಭಾಗದ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಮುಂಬೈಗೆ ಸೂರ್ಯ ಸಾರಥ್ಯ
ಕಳೆದ ಆವೃತ್ತಿಯ ಕೊನೇ ಪಂದ್ಯದ ನಿಧಾನಗತಿ ಓವರ್​ಗಾಗಿ ಒಂದು ಪಂದ್ಯ ನಿಷೇಧ ಶಿೆಗೆ ಗುರಿಯಾಗಿದ್ದ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ, ಹಾಲಿ ಆವೃತ್ತಿಯ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ಹೀಗಾಗಿ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಇನ್ನೂ ಫಿಟ್​ ಆಗಿರದ ಕಾರಣ ಮುಂಬೈನ ಮೊದಲ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇಬ್ಬರು ಪ್ರಮುಖ ಆಟಗಾರರ ಗೈರು ಮುಂಬೈಗೆ ಮೊದಲ ಪಂದ್ಯದಲ್ಲಿ ಹಿನ್ನಡೆ ಎನಿಸಿದೆ.

ಸಿಎಸ್​ಕೆಗೆ ಸ್ಪಿನ್​ ಬಲ
ಮೆಗಾ ಹರಾಜಿನ ನಂತರವೂ ಸಿಎಸ್​ಕೆ ಬ್ಯಾಟಿಂಗ್​ ವಿಭಾಗ ಹೆಚ್ಚಿನ ಬದಲಾವಣೆ ಕಂಡಿಲ್ಲ. ಋತುರಾಜ್​, ಶಿವಂ ದುಬೆ, ಧೋನಿ, ಜಡೇಜಾ ರಿಟೇನ್​ ಆಗಿದ್ದರೆ, ಡೆವೊನ್​ ಕಾನ್​ವೇ, ರಚಿನ್​ ರವೀಂದ್ರ ಹರಾಜಿನಲ್ಲಿ ಮರಳಿ ಸೇರ್ಪಡೆಯಾಗಿದ್ದಾರೆ. ರಾಹುಲ್​ ತ್ರಿಪಾಠಿ, ದೀಪಕ್​ ಹೂಡಾ, ವಿಜಯ್​ ಶಂಕರ್​ ಮಾತ್ರ ಹೊಸ ಸೇರ್ಪಡೆ. ಇನ್ನು ಹರಾಜಿನಲ್ಲಿ ಸ್ಪಿನ್​ ಬೌಲಿಂಗ್​ ವಿಭಾಗವನ್ನು ಸಿಎಸ್​ಕೆ ಬಲಿಷ್ಠಗೊಳಿಸಿದ್ದು, ಚೆಪಾಕ್​ ಪಿಚ್​ ಈ ಬಾರಿ ಸ್ಪಿನ್​ಗೆ ಇನ್ನಷ್ಟು ಹೆಚ್ಚು ಸಹಕರಿಸುವ ನಿರೀಕ್ಷೆ ಇದೆ. ಅನುಭವಿ ಆಫ್​​ ಸ್ಪಿನ್ನರ್​ ಆರ್​. ಅಶ್ವಿನ್​ 10 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದರೆ, ಅಫ್ಘಾನಿಸ್ತಾನ ಯುವ ಸ್ಪಿನ್ನರ್​ ನೂರ್​ ಅಹ್ಮದ್​ ಮತ್ತು ಕನ್ನಡಿಗ ಶ್ರೇಯಸ್​ ಗೋಪಾಲ್​ರನ್ನೂ ಸೇರಿಸಿಕೊಳ್ಳಲಿದ್ದಾರೆ. ಇವರು ಸ್ಪಿನ್​ ವಿಭಾಗದಲ್ಲಿ ಜಡೇಜಾ ಕೈ ಬಲಪಡಿಸಲಿದ್ದಾರೆ. ಆಲ್ರೌಂಡರ್​ ಸ್ಯಾಮ್​ ಕರನ್​ ಕೂಡ ಸಿಎಸ್​ಕೆಗೆ ಮರಳಿದ್ದರೆ, ಮಾಲಿಂಗ ಬೌಲಿಂಗ್​ ಶೈಲಿಯ ಮಥೀಶ ಪಥಿರಣ ತಂಡದ ಪ್ರಮುಖ ವೇಗಿಯಾಗಿ ಮುಂದುವರಿಯಲಿದ್ದಾರೆ.

*ಮುಖಾಮುಖಿ: 37
ಮುಂಬೈ: 20
ಸಿಎಸ್​ಕೆ: 17
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

*19: ಎಂಎಸ್​ ಧೋನಿ (4,669) ಇನ್ನು 19 ರನ್​ ಗಳಿಸಿದರೆ, ಸುರೇಶ್​ ರೈನಾ (4,687) ಅವರನ್ನು ಹಿಂದಿಕ್ಕಿ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಗರಿಷ್ಠ ರನ್​ ಗಳಿಸಿದ ಬ್ಯಾಟರ್​ ಎನಿಸಲಿದ್ದಾರೆ.

IPL-2025: ಐಪಿಎಲ್​ನಲ್ಲಿ ಹೊಸದೇನಿದೆ? ಈ ಸಲದ ಆವೃತ್ತಿಯ ವಿಶೇಷ-ವೈವಿಧ್ಯ-ವೈಶಿಷ್ಟ್ಯ…

 

Share This Article

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬೇಡಿ! ಯಾಕೆ ಗೊತ್ತಾ..? healthy morning routine

healthy morning routine:  ಬೆಳಗ್ಗೆ  ಎದ್ದ ತಕ್ಷಣ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ. ಅದಾದ…

ಮಕ್ಕಳಿರಬೇಕಿಲ್ಲ ಮನೆತುಂಬ… ಆದರೆ ನಮಗೆಷ್ಟಿರಬೇಕು?

ನಮಗೆಷ್ಟು ಮಕ್ಕಳಿರಬೇಕು? ಎಂಬುದು ವೈಯಕ್ತಿಕ ವಿಚಾರವಾದರೂ, ಸಾಂಸಾರಿಕವಾಗಿ, ಸಾಮಾಜಿಕವಾಗಿ ಮಾತ್ರವಲ್ಲ ದೇಶದ ಹಿತದೃಷ್ಟಿಯಿಂದಲೂ ಗಮನಿಸಬೇಕಾದ ವಿಷಯ.…

ಈ ಗುಣಗಳನ್ನು ಹೊಂದಿರುವ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿರುತ್ತಾರೆ..ಯಾಕೆ ಗೊತ್ತಾ?Chanakya Niti

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ.…