More

  IPL 2024: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಬದಲಾವಣೆ!

  ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮುಂಬರುವ ಆವೃತ್ತಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಸಕಲ ತಯಾರಿಗಳನ್ನು ನಡೆಸುತ್ತಿರುವ 10 ತಂಡಗಳ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಉತ್ತಮ ಪ್ರದರ್ಶನ ಕೊಡಲು ಮುಂಚೂಣಿಯಲ್ಲಿದ್ದು, ಆಟಗಾರರನ್ನು ಮತ್ತಷ್ಟು ಬಲಪಡಿಸುತ್ತಿದೆ. ಈ ನಡುವೆ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಅವರ ಸ್ಥಾನಕ್ಕೆ ಬದಲಾವಣೆ ತಂದಿದೆ. ಈ ಕುರಿತು ಇದೀಗ ಅಧಿಕೃತವಾಗಿ ಘೋಷಿಸಿದೆ.

  ಇದನ್ನೂ ಓದಿ: ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಆರ್‌ಸಿಬಿಗೆ ಆಘಾತ: ಹೊರಬಿದ್ದ ಆಲ್ರೌಂಡರ್

  ಶ್ರೀಲಂಕಾದ ಹೊಸ ಬೌಲರ್ ದುಷ್ಮಂತ ಚಮೀರಾ ಅವರನ್ನು ಹರಾಜು ಪ್ರಕ್ರಿಯೆಯಲ್ಲಿ 50 ಲಕ್ಷ ರೂ.ಗೆ ಖರೀದಿ ಮಾಡಿದ್ದ ಕೆಕೆಆರ್​, ಡಿಸೆಂಬರ್ 2023ರಲ್ಲಿ ದುಬೈನಲ್ಲಿ ನಡೆದ ಹರಾಜಿನಲ್ಲಿ ಎರಡು ಬಾರಿ ಚಾಂಪಿಯನ್ ಆದ ಗಸ್​ ಅಟ್ಕಿನ್ಸನ್ ಅವರನ್ನು 1 ಕೋಟಿ ಮೂಲ ಬೆಲೆಗೆ ಆಯ್ಕೆ ಮಾಡಿಕೊಂಡಿತ್ತು. ಸದ್ಯ ಇಂಗ್ಲೆಂಡ್ ವೇಗಿ ಬದಲಿಗೆ ಚಮೀರಾ ಏಕೆ? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡುತ್ತಿದ್ದು, ಇದರ ಹಿಂದಿರುವ ಕಾರಣ ಸ್ಪಷ್ಟವಾಗಿಲ್ಲ.

  ಚಮೀರಾ ಈ ಮೊದಲು ಐಪಿಎಲ್‌ನ ಭಾಗವಾಗಿದ್ದರು. ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಆಡಿದ್ದು, 2022ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಪರ ಪ್ರದರ್ಶನ ನೀಡಿದ್ದರು. ಇದೀಗ ಕೆಕೆಆರ್​ ತಂಡದಲ್ಲಿ ಉಂಟಾದ ಈ ಬದಲಾವಣೆ ಮುಂಬರುವ ಪಂದ್ಯಗಳಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

  ಈ ನಟ ಯಾರೆಂದು ಗೊತ್ತಿಲ್ಲದಿದ್ದರೂ ಇವರ ಡೈಲಾಗ್ ಮಾತ್ರ ಪಕ್ಕಾ ನೆನಪಿರುತ್ತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts