ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ನ 2024 44ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇಲ್ಲಿನ ಲಕ್ನೋದ ಅಟಲ್ ವಿಹಾರಿ ವಾಜಪೇಯಿ ಐಕಾನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಅತಿಥೇಯ ಲಕ್ನೋ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ದೆಹಲಿಯಲ್ಲಿ ಎಎಪಿ ‘ವಾರ್ ರೂಮ್’ ಉದ್ಘಾಟನೆ!
🚨 Toss Update from Lucknow 🚨@rajasthanroyals win the toss & elect to bowl against @LucknowIPL
Follow the Match ▶️ https://t.co/Dkm7eJqwRj#TATAIPL | #LSGvRR pic.twitter.com/F09WUphJcQ
— IndianPremierLeague (@IPL) April 27, 2024
ಈ ಆವೃತ್ತಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ರಾಜಸ್ಥಾನ ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ರಾಜಸ್ಥಾನ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನೆ ತೋರುತ್ತಿರುವುದು ತಂಡದ ಪ್ಲಸ್ ಪಾಯಿಂಟ್, ಬಟ್ಲರ್, ಜೈಸ್ವಾಲ್, ರಿಯಾನ್, ನಾಯಕ ಸ್ಯಾಟ್ಸನ್ ಅಬ್ಬರಿಸುತ್ತಿದ್ದು, ವೇಗಿಗಳಾದ ಸಂದೀಪ್, ಬೌಲ್ಡ್, ಆವೇಶ್, ಸಿನ್ಸರ್‌ಗಳಾದ ಅಶ್ವಿನ್, ಚಹಲ್ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.
ಅತ್ತ ಲಖನೌ ಕೂಡಾ ಆರೌಂಡ್ ಆಟದಿಂದ ಗಮನ ಸೆಳೆಯುತ್ತಿದ್ದು, ಆಡಿರುವ 8ರಲ್ಲಿ 5 ಗೆದ್ದಿದೆ. ರಾಜಸ್ಥಾನ ವಿರುದ ಸೋಲುವ ಮೂಲಕ ಟೂರ್ನಿಗೆ ಕಾಲಿರಿಸಿದ್ದ ತಂಡ ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
26/11 ಉಗ್ರ ಕಸಬ್ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್ಗೆ ಬಿಜೆಪಿ ಟಿಕೆಟ್! ಪೂನಂಗೆ ಕೊಕ್?