More

    ಐಪಿಎಲ್​-2023 ಅತ್ಯಧಿಕ ವೀಕ್ಷಿಸಲ್ಪಟ್ಟ ಆವೃತ್ತಿ; 482 ದಶಲಕ್ಷ ವೀಕ್ಷಕರನ್ನು ತಲುಪಿದ ಡಿಸ್ನಿ ಸ್ಟಾರ್!

    ನವದೆಹಲಿ: 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ ಅಧಿಕೃತವಾಗಿ ಅತಿ ಹೆಚ್ಚು ವೀಕ್ಷಿಸಿದ ಆವೃತ್ತಿಯಾಗಿದೆ ಎಂದು ಭಾರತೀಯ ಪೇ-ಟಿವಿ ನೆಟ್​ವರ್ಕ್​ ಡಿಸ್ನಿ ಸ್ಟಾರ್ ಬಹಿರಂಗಪಡಿಸಿದೆ, ಮೊದಲ 66 ಪಂದ್ಯಗಳ ನೇರಪ್ರಸಾರವು 482 ದಶಲಕ್ಷ ವೀಕ್ಷಕರನ್ನು ತಲುಪಿದೆ.

    ಈ ಮೂಲಕ ಇನ್ನೂ 8 ಪಂದ್ಯಗಳು ಉಳಿದಿರುವಾಗಲೇ 2019ರ ಆವೃತ್ತಿಯ 478 ದಶಲಕ್ಷ ವೀಕ್ಷಣೆಯನ್ನೂ ದಾಟಿ 4 ದಶಲಕ್ಷ ಅಧಿಕ ವೀಕ್ಷಣೆ ದಾಖಲಾಗಿದೆ. ಅಲ್ಲದೆ ಡಿಸ್ನಿ ಸ್ಟಾರ್ 350 ಶತಲಕ್ಷ ನಿಮಿಷಗಳಿಗಿಂತ ಹೆಚ್ಚು ವಾಚ್ ಟೈಮ್ ಗಳಿಸಿದ್ದು, ಜಾಹೀರಾತು ಆದಾಯ ಕೂಡ ಗಣನೀಯವಾಗಿ ಹೆಚ್ಚಾಗಿದೆ.

    ‘ಟಿವಿಯಲ್ಲಿ ಹಿಂದಿನ ಎಲ್ಲಾ ವೀಕ್ಷಕರ ದಾಖಲೆಗಳನ್ನು ಐಪಿಎಲ್ 2023 ಮುರಿದಿದೆ’ ಎಂದು ಡಿಸ್ನಿ ಸ್ಟಾರ್​​ನ ಕ್ರೀಡಾ ಮುಖ್ಯಸ್ಥ ಸಂಜೋಗ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಳಕೆಯ ದೃಷ್ಟಿಯಿಂದ ಸಹ ನಾವು 350 ಶತಲಕ್ಷ ನಿಮಿಷಗಳಿಗಿಂತ ಹೆಚ್ಚಿನ ವೀಕ್ಷಣಾ ಸಮಯದೊಂದಿಗೆ ದಾಖಲೆ ಸಂಖ್ಯೆಗಳನ್ನು ನೋಡುತ್ತಿದ್ದೇವೆ. ಮೊದಲ 66 ಪಂದ್ಯಗಳಲ್ಲಿ 40 ಪಂದ್ಯಗಳಲ್ಲಿ ಪ್ರತಿಯೊಂದೂ 30 ದಶಲಕ್ಷಕ್ಕಿಂತಲೂ ಅಧಿಕ ಪೀಕ್​ ಕನ್​ಕರೆನ್ಸಿ ದಾಖಲಿಸಿದ್ದು, ಆ ಪೈಕಿ 56 ದಶಲಕ್ಷ ಗರಿಷ್ಠ ಎನಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ. ಇದು ಐಪಿಎಲ್ 2023ಅನ್ನು ದೂರದರ್ಶನದಲ್ಲಿ ತಲುಪುವ, ವೀಕ್ಷಿಸುವ ಸಮಯ ಮತ್ತು ಆವರ್ತನದ ಎಲ್ಲಾ ಆಯಾಮಗಳಲ್ಲಿ ಐತಿಹಾಸಿಕ ಐಪಿಎಲ್ ಆಗಿಸಿದೆ ಎಂದೂ ಅವರು ಹೇಳಿದ್ದಾರೆ.

    ಇದನ್ನೂ ಓದಿ: 9 ವರ್ಷ, 9 ಪ್ರಶ್ನೆ: ಮೌನ ಮುರಿದು ಉತ್ತರಿಸಿ ಎಂದು ಮೋದಿಗೆ ಕಾಂಗ್ರೆಸ್ ಸವಾಲು

    ಐಪಿಎಲ್​ನ ದೇಶೀಯ ಟಿವಿ ಪ್ರಸಾರ ಹಕ್ಕುಗಳಿಗಾಗಿ ಡಿಸ್ನಿ ಸ್ಟಾರ್​ 23,575 ಕೋಟಿ ರೂ. (ಯುಎಸ್ 3.02 ಬಿಲಿಯನ್ ಡಾಲರ್) ವಿನಿಯೋಗಿಸಿ, ಅದರಲ್ಲೂ ಆಯ್ದ ಆಟಗಳನ್ನು ಮೊದಲ ಸಲ ಮುಕ್ತ ಪ್ರಸಾರಕ್ಕೆ ಆಯ್ಕೆ ಮಾಡಿಕೊಂಡ ಬಳಿಕ ಐಪಿಎಲ್​-2023ಗೆ ಈ ದಾಖಲೆ ಪ್ರಮಾಣದ ವೀಕ್ಷಣೆ ಬಂದಿದೆ ಎಂದರು.

    ಪಂದ್ಯಾವಳಿಯ ಆರನೇ ವಾರದಲ್ಲಿ ಮಾರ್ಕ್ಯೂ ಮ್ಯಾಚ್ಅಪ್​ಗಳನ್ನು ಒಳಗೊಂಡ ‘ರೈವಲ್ರೀ ವೀಕ್’ನಂತಹ ಉಪಕ್ರಮಗಳು ಲೀಗ್​ನಲ್ಲಿ ಆಸಕ್ತಿ ಹೆಚ್ಚಿಸಲು ಸಹಾಯ ಮಾಡಿವೆ. ಅಲ್ಲದೆ ಆ ವಾರದಲ್ಲಿ ಡಿಸ್ನಿ ಸ್ಟಾರ್ 21 ಮಿಲಿಯನ್ ಹೊಸ ವೀಕ್ಷಕರನ್ನು ಸೇರಿಸಿದೆ ಎಂದು ಗುಪ್ತಾ ಹೇಳಿದ್ದಾರೆ.

    ಇದನ್ನೂ ಓದಿ: ಸಚಿವಗಿರಿಗಾಗಿ ಭುಗಿಲೆದ್ದ ಅಸಮಾಧಾನ; ಶಾಸಕರಿಬ್ಬರಿಂದ ಎಐಸಿಸಿ ಅಧ್ಯಕ್ಷರಿಗೆ ಪತ್ರ

    ‘ಮನೆಯಲ್ಲಿನ ಅಭಿಮಾನಿಗಳಿಗೆ ತ್ವರಿತ ರಿಪ್ಲೇಗಳು, ಪ್ರಮುಖ ಕ್ಷಣಗಳು, ಲೈವ್ ಅಂಕಿ-ಅಂಶಗಳು ಮತ್ತು ಅವರ ರಿಮೋಟ್​ಗಳಲ್ಲಿನ ಬಟನ್ ಒತ್ತುವ ಮೂಲಕ ಮುಖ್ಯಾಂಶಗಳಿಗೆ ಪ್ರವೇಶ ನೀಡುವ ಮೂಲಕ ಸಾಂಪ್ರದಾಯಿಕ ಟಿವಿ ಅನುಭವ ಮರುವ್ಯಾಖ್ಯಾನಿಸಲು ನಾವು ಪ್ರಯತ್ನಿಸಿದ್ದೇವೆ’ ಎಂದು ಅವರು ಹೇಳಿದರು. ಈ ಮೂಲಕ ಐಪಿಎಲ್ 2023 ರಲ್ಲಿ 11 ಮಿಲಿಯನ್ ಚಂದಾದಾರರ ಸೇರ್ಪಡೆ ಹೆಚ್ಚಾಗಿದ್ದು, ಇದು ಸ್ಟಾರ್ ಸ್ಪೋರ್ಟ್ಸ್​ ಪ್ರವೇಶವನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿದೆ ಎಂದಿದ್ದಾರೆ.

    ದಾಖಲೆಯ ವೀಕ್ಷಣೆ ಹಿನ್ನೆಲೆಯಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ನಾಲ್ಕು ಹೊಸ ಪ್ರಾಯೋಜಕರು ಮತ್ತು 30 ಬ್ರ್ಯಾಂಡ್​ಗಳು ಸಹಿ ಹಾಕುವುದರೊಂದಿಗೆ ಡಿಸ್ನಿ ಸ್ಟಾರ್​ಗೆ ಜಾಹೀರಾತು ಆದಾಯವೂ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಗುಪ್ತ ಹೇಳಿದ್ದಾರೆ.

    ದಂಪತಿ ಮಧ್ಯೆ ಪ್ರೀತಿ ಇದ್ದರೂ ದಾಂಪತ್ಯ ದ್ರೋಹ; ವಿವಾಹೇತರ ಸಂಬಂಧದ ಬಗ್ಗೆ ಇಲ್ಲ ಪಶ್ಚಾತ್ತಾಪ: ಏನಿದು ಅಧ್ಯಯನ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts