ಫಾರಿನ್ ಸ್ಟಾರ್ಸ್ ನಿರ್ಗಮನ, ಐಪಿಎಲ್​ಗೆ ಸಂಕಟ!: ರಾಯಲ್ಸ್, ಸನ್​ರೈಸರ್ಸ್​ಗೆ ಹೆಚ್ಚಿನ ಸಂಕಷ್ಟ

ನವದೆಹಲಿ: ವಿದೇಶಿ ಆಟಗಾರರು ಐಪಿಎಲ್​ನ ನಡುವೆಯೇ ರಾಷ್ಟ್ರೀಯ ತಂಡದ ಸೇವೆಗಾಗಿ ತೆರಳುವುದು ಸಾಮಾನ್ಯ. ಹಿಂದಿನ ಕೆಲ ಆವೃತ್ತಿಗಳಲ್ಲೂ ಇದು ನಡೆದಿದೆ. ಆದರೆ, ಈ ಬಾರಿ ವಿಶ್ವಕಪ್ ವರ್ಷವಾಗಿರುವ ಕಾರಣ, ಐಪಿಎಲ್​ನಲ್ಲಿ ಮಿಂಚುತ್ತಿರುವ ಆಟಗಾರರು ಆಯಾ ದೇಶದ ರಾಷ್ಟ್ರೀಯ ತಂಡದ ಸ್ಟಾರ್ ಆಟಗಾರರೂ ಆಗಿರುವ ಕಾರಣ, ಈ ಬಾರಿ ಅವರ ಅಲಭ್ಯತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಡಲಿದೆ. ವಿಶ್ವಕಪ್​ಗೆ ಒಂದು ತಿಂಗಳಿದ್ದು, ಕ್ರಿಕೆಟ್ ಲೋಕದ ಮಹಾಟೂರ್ನಿಗಾಗಿ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಹೆಚ್ಚಿನೆಲ್ಲ ದೇಶಗಳು, ತನ್ನ ಪ್ರಮುಖ ಆಟಗಾರರಿಗೆ ಟೂರ್ನಿಯಿಂದ ವಾಪಸ್ ಬರುವಂತೆ ಹೇಳಿದೆ. ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳು ಮಾತ್ರವೇ ತನ್ನ ಆಟಗಾರರಿಗೆ ಐಪಿಎಲ್​ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದೆ. ದಕ್ಷಿಣ ಆಫ್ರಿಕಾದ ವಿಶ್ವಕಪ್ ಸಿದ್ಧತಾ ಶಿಬಿರ ಐಪಿಎಲ್ ಫೈನಲ್ ನಡೆಯಲಿರುವ ಮೇ 12ರಂದೇ ಆರಂಭವಾಗಲಿದ್ದು, ಐಪಿಎಲ್​ನಲ್ಲಿರುವ ಆಟಗಾರರು ಮೇ 13ಕ್ಕೆ ತಂಡ ಕೂಡಿಕೊಳ್ಳಲಿದ್ದಾರೆ.

ಐರ್ಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧ ಸರಣಿ ಇರುವ ಕಾರಣ ಏಪ್ರಿಲ್ 26ರ ಒಳಗಾಗಿ ಇಂಗ್ಲೆಂಡ್ ಆಟಗಾರರು ಐಪಿಎಲ್​ನಿಂದ ಮರಳಬೇಕು ಎಂದು ಅಲ್ಲಿನ ಕ್ರಿಕೆಟ್ ಮಂಡಳಿ ಸೂಚನೆ ನೀಡಿದ್ದರೆ, ಆಸೀಸ್ ಕ್ರಿಕೆಟ್ ಮಂಡಳಿ ಮೇ 2ರ ಒಳಗಾಗಿ ಆಟಗಾರರು ಮರಳಬೇಕು ಎಂದು ತಿಳಿಸಿದೆ. ಶ್ರೀಲಂಕಾ ತಂಡದ ಆಟಗಾರರಿಗೆ ಮೇ 6ರವರೆಗೆ ಅನುಮತಿಯಿದ್ದರೆ, ಮೇ 7ರಿಂದ ಐರ್ಲೆಂಡ್​ನಲ್ಲಿ ಆರಂಭಗೊಳ್ಳಲಿರುವ ತ್ರಿಕೋನ ಸರಣಿಗೆ ಪ್ರಕಟಿಸಲಾಗಿರುವ ಬಾಂಗ್ಲಾದೇಶ ತಂಡದಲ್ಲಿ ಶಕೀಬ್ ಅಲ್ ಹಸನ್ ಸ್ಥಾನ ಪಡೆದಿದ್ದಾರೆ. ಪ್ಲೇಆಫ್ ರೇಸ್ ಬಿಸಿ ಏರಿರುವ ಸಂದರ್ಭದಲ್ಲಿ ವಿದೇಶಿ ಆಟಗಾರರು ತಂಡವನ್ನು ತೊರೆದರೆ ಯಾವ ತಂಡಕ್ಕೆ ಹೆಚ್ಚಿನ ನಷ್ಟವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.

Leave a Reply

Your email address will not be published. Required fields are marked *