ಐಪಿಎಲ್​​ ಫೈನಲ್​ಗೆ ನೆಚ್ಚಿನ ತಂಡ ಪ್ರಕಟಿಸಿದ ಕುಂಬ್ಳೆ: ತಂಡದಲ್ಲಿ ಖ್ಯಾತ ಆಟಗಾರರಿಗಿಲ್ಲ ಸ್ಥಾನ

ಬೆಂಗಳೂರು: ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಅನಿಲ್​​ ಕುಂಬ್ಳೆ ಅವರು 2019ನೇ ಇಂಡಿಯನ್​​ ಪ್ರೀಮಿಯರ್​​​ ಲೀಗ್ ​​​​​​(ಐಪಿಎಲ್​) ಫೈನಲ್​​​ಗೆ ತಮ್ಮ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ.

ಐಪಿಎಲ್​ ಆರಂಭದಿಂದಲೂ ಆಟಗಾರರ ಪ್ರದರ್ಶನವನ್ನು ಗಮನಿಸಿ ತಂಡವನ್ನು ಆಯ್ಕೆ ಮಾಡಿದ್ದಾರೆ. ಆದರೆ, ಭಾರತದ ಪ್ರಮುಖ ಆಟಗಾರರ ಆಯ್ಕೆ ಮಾಡದಿರುವುದು ಅಚ್ಚರಿಯಾಗಿದೆ.

ನಾಳೆ ರಾತ್ರಿ ಹೈದರಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್​​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮಾಜಿ ಚಾಂಪಿಯನ್​​ ಮುಂಬೈ ಇಂಡಿಯನ್ಸ್​​​​ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ. ಪಂದ್ಯ ನಡೆಯುವುದಕ್ಕೂ ಒಂದು ದಿನ ಮುನ್ನ ತಮ್ಮ ನೆಚ್ಚಿನ ತಂಡವನ್ನು ಪ್ರಕಟಿಸಿದ್ದಾರೆ. ತಂಡದಲ್ಲಿ 119.94 ಸ್ಟ್ರೈಕ್​​ ರೇಟ್​​​ನಲ್ಲಿ 463 ರನ್​​​ ಗಳಿಸಿರುವ ಯುವ ಆಟಗಾರ ಶ್ರೇಯಸ್​​ ಅಯ್ಯರ್​​​​​​ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನೂ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ, ಉಪನಾಯಕ ರೋಹಿತ್​ ಶರ್ಮಾ, ದಿನೇಶ್​ ಕಾರ್ತಿಕ್​​​​​, ಹರ್​​ಭಜನ್​​ ಸಿಂಗ್​​​​​​​​​​​ ಅವರನ್ನು ತಂಡಕ್ಕೆ ಆಯ್ಕೆ ಮಾಡದೇ ಇರುವುದು ಅಚ್ಚರಿಯಾಗಿದೆ. ಈಗ ಪ್ರಕಟಿಸಿರುವ ತಂಡ ಬಲಿಷ್ಠವಾಗಿದ್ದರೂ, ಖ್ಯಾತ ಆಟಗಾರರಿಗೆ ಸ್ಥಾನ ನೀಡದೆ ಇರುವುದು ಲೋಪವೆನಿಸಿದೆ.

ಐಪಿಎಲ್ 2019ರ ಫೈನಲ್‌ಗೆ ಕುಂಬ್ಳೆಯ ನೆಚ್ಚಿನ ತಂಡ: ಡೇವಿಡ್ ವಾರ್ನರ್, ಕೆ.ಎಲ್. ರಾಹುಲ್, ಶ್ರೇಯಸ್ ಐಯ್ಯರ್, ರಿಷಬ್ ಪಂತ್, ಎಂ.ಎಸ್. ಧೋನಿ (ವಿ.ಕೆ. ಮತ್ತು ಸಿ), ಹಾರ್ದಿಕ್ ಪಾಂಡ್ಯ, ಆ್ಯಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್ ತಾಹಿರ್, ಕಾಗಿಸೋ ರಬಾಡಾ, ಜಸ್​​ಪ್ರೀತ್​ ಬುಮ್ರಾ. (ಏಜನ್ಸೀಸ್​)