PHOTOS| ಆರ್​ಸಿಬಿಗೆ ಬೆಂಬಲ ನೀಡಲು ಬಂದು ಲಕ್ಷಾಂತರ ಜನರ ಹೃದಯ ಕದ್ದ ಈ ಸುಂದರಿ ಯಾರು?

ಬೆಂಗಳೂರು: ಕೆಲವರ ಅದೃಷ್ಟವೇ ಹಾಗೇ ತಮಗೆ ಗೊತ್ತಿಲ್ಲದಂತೆ ಬೆಳಗಾಗುವಷ್ಟರಲ್ಲಿ ಫೇಮಸ್​ ಆಗಿರುತ್ತಾರೆ. ಸೋಶಿಯಲ್​ ಮೀಡಿಯಾ ಬಂದಾಗಿನಿಂದ ಹಲವರ ಹಣೆಬರಹ ಇದೇ ರೀತಿ ಬದಲಾಗಿದೆ. ಇದೀಗ ಆ ಸಾಲಿಗೆ ಯುವತಿಯೊಬ್ಬಳು ಸೇರಿರುವುದು ವಿಪರ್ಯಾಸವೇ ಸರಿ.

ನಿನ್ನೆ(ಶನಿವಾರ) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ನಡುವೆ ನಡೆದ ಪಂದ್ಯದಲ್ಲಿ ಆರ್​​ಸಿಬಿ ತಂಡ ಪಂದ್ಯವನ್ನು ಗೆಲ್ಲುವುದರ ಜತೆಗೆ ಎಸ್​ಆರ್​ಎಚ್​ ತಂಡದ ಪ್ಲೇ ಆಫ್​ ಕನಸಿಗೆ ತಣ್ಣೀರೆರಚಿತು.​ ಆರ್​ಸಿಬಿ ಗೆಲುವಿನ ಜತೆಗೆ ಪಂದ್ಯ ವೀಕ್ಷಿಸಲು ಬಂದಿದ್ದ ಆರ್​ಸಿಬಿ ಅಭಿಮಾನಿಯೊಬ್ಬಳು ಲಕ್ಷಾಂತರ ಜನರ ಹೃದಯವನ್ನು ಕದ್ದಿದ್ದಾಳೆ.

ಹೌದು, ಕೆಂಪು ಬಣ್ಣದ ಟಾಪ್​ ತೊಟ್ಟು, ಆರ್​ಸಿಬಿ ತಂಡದ ಬಾವುಟ ಹಿಡಿದು ಕೊಹ್ಲಿ ಹಾಗೂ ತಂಡದ ಆಟಗಾರರು ಬೌಂಡರಿ ಹಾಗೂ ಸಿಕ್ಸರ್​ ಸಿಡಿಸಿದಾಗಲೆಲ್ಲ ಎದ್ದು ಕುಣಿಯುತ್ತಿದ್ದ ಯುವತಿಯೊಬ್ಬಳು ಕ್ಯಾಮರಾ ಕಣ್ಣಿಗೆ ಸೆರೆಯಾದ ತಕ್ಷಣವೇ ಅಲ್ಲಿ ಕ್ರೀಡಾಂಗಣದಲ್ಲಿ ನೆರೆದಿದ್ದವರ ಕಣ್ಣು ಕುಕ್ಕಿದ್ದಾಳೆ. ಅಲ್ಲದೆ, ಆಕೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಅವಳನ್ನು ಸೆರೆಹಿಡಿದ ಕ್ಯಾಮರಾಮನ್​ಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ. ಜತೆಗೆ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಕಾಮೆಂಟ್​ಗಳ ಸುರಿಮಳೆಗೈಯುತ್ತಿದ್ದಾರೆ.

ಯಾರು ಈ ಹುಡುಗಿ?
ನಿಗೂಢತೆ ಸೃಷ್ಟಿಸಿದ್ದ ಯುವತಿಯ ಪೂರ್ವಾಪರ ತಿಳಿಯಲು ಯತ್ನಿಸಿದಾಗ ಆಕೆಯ ಹೆಸರು ದೀಪಿಕಾ ಘೋಷ್​ ಎಂಬುದು ತಿಳಿದುಬಂದಿದೆ. ಪಂದ್ಯ ಆರಂಭಕ್ಕೂ ಮುನ್ನ ದೀಪಿಕಾ ಅವರ ಇನ್​ಸ್ಟಾಗ್ರಾಮ್​​ ಖಾತೆಗೆ ಐದು ಸಾವಿರ ಫಾಲೋವರ್ಸ್​ ಇದ್ದರು. ಟಿವೀಲಿ ಕಾಣಿಸಿಕೊಂಡ ಬಳಿಕ ಈ ಸಂಖ್ಯೆ 1.30 ಲಕ್ಷ ದಾಟಿದೆ.

ಶನಿವಾರ ಪಂದ್ಯದಲ್ಲಿ ಎಸ್​​​​ಆರ್​ಎಚ್​​ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು(175) ಬೆನ್ನಟ್ಟಿದ ಆರ್​ಸಿಬಿ ಆರಂಭದಲ್ಲಿಯೇ ಪಾರ್ಥಿವ್​​ ಪಟೇಲ್​, ವಿರಾಟ್​​ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ವಿಕೆಟ್​​​​​​​​ ಕಳೆದುಕೊಂಡಿತು. ಬಳಿಕ ಕ್ರೀಸ್​ಗೆ ಬಂದ ಶಿಮ್ರೋನ್​​​ ಹೇಟ್ಮೆರ್​​​ ಮತ್ತು ಗುರ್​​ರ್ಕೀತ್​ ಸಿಂಗ್​​​​​​​​​ ಜೋಡಿ ಉತ್ತಮ ಇನಿಂಗ್ಸ್​​ ಕಟ್ಟಿತು. ಈ ಜೋಡಿ 144 ರನ್​​​​​​​​ ಜತೆಯಾಟವಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು. (ಏಜೆನ್ಸೀಸ್​)

View this post on Instagram

#RCB girl forever ❤️🏏

A post shared by deepika (@deeghose) on

View this post on Instagram

Thanks for all the birthday love! 💕

A post shared by deepika (@deeghose) on

View this post on Instagram

on cloud wine

A post shared by deepika (@deeghose) on

View this post on Instagram

#FALLin 🍁

A post shared by deepika (@deeghose) on

View this post on Instagram

#lasttrainhome ⛔️🚂

A post shared by deepika (@deeghose) on

View this post on Instagram

throwin shade

A post shared by deepika (@deeghose) on