ಮುಂಬೈ: ಕೋಲ್ಕತ ನೈಟ್‌ರೈಡರ್ಸ್ ಪ್ರತಿಹೋರಾಟದ ನಡುವೆಯೂ ಕಡೇ ಹಂತದಲ್ಲಿ ಬೌಲರ್‌ಗಳ ಚಾಣಾಕ್ಷ ನಿರ್ವಹಣೆ ಫಲವಾಗಿ ಲಖನೌ ಸೂಪರ್‌ಜೈಂಟ್ಸ್ ತಂಡ ಐಪಿಎಲ್-15ರ ತನ್ನ ಕಡೇ ಲೀಗ್ ಪಂದ್ಯದಲ್ಲಿ 2 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಇದರೊಂದಿಗೆ ಲೀಗ್‌ನಲ್ಲಿ 9ನೇ ಗೆಲುವು ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ತಂಡ 2ನೇ ತಂಡವಾಗಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿತು. ಮತ್ತೊಂದೆಡೆ, ಕೆಕೆಆರ್ ಅಧಿಕೃತವಾಗಿ ಲೀಗ್‌ನಿಂದ ಹೊರಬಿದ್ದಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ, ಆರಂಭಿಕ ಬ್ಯಾಟರ್‌ಗಳಾದ ಕ್ವಿಂಟನ್ ಡಿಕಾಕ್ (140*ರನ್, 70 ಎಸೆತ, 10 ಬೌಂಡರಿ, 10 ಸಿಕ್ಸರ್) ಹಾಗೂ ನಾಯಕ ಕೆಎಲ್ ರಾಹುಲ್ (68*ರನ್, 51 ಎಸೆತ, 3 ಬೌಂಡರಿ, 4 ಸಿಕ್ಸರ್) ಜೋಡಿಯ ದಾಖಲೆಯ ಅಜೇಯ ಜತೆಯಾಟದ ನೆರವಿನಿಂದ 210 ರನ್ ಪೇರಿಸಿತು. ಪ್ರತಿಯಾಗಿ ಮೊಹ್ಸಿನ್ ಖಾನ್ (20ಕ್ಕೆ 3), ಮಾರ್ಕಸ್ ಸ್ಟೋಯಿನಿಸ್ (23ಕ್ಕೆ 3) ದಾಳಿಗೆ ನಲುಗಿದ ಕೆಕೆಆರ್ 8 ವಿಕೆಟ್‌ಗೆ 208 ರನ್ ಗಳಿಸಿ ಸೋಲೊಪ್ಪಿಕೊಂಡಿತು.
* ಡಿಕಾಕ್-ರಾಹುಲ್ ಅಬ್ಬರ
ಕ್ವಿಂಟನ್ ಡಿಕಾಕ್ ಹಾಗೂ ಕೆಎಲ್ ರಾಹುಲ್ ಜೋಡಿ ಆರಂಭಿಕ ಹಂತದಲ್ಲಿ ಎಚ್ಚರಿಕೆ ನಿರ್ವಹಣೆಗೆ ಮುಂದಾಯಿತು. ಈ ಜೋಡಿ ಇನಿಂಗ್ಸ್ ಸಾಗುತ್ತಿದ್ದಂತೆ ರನ್‌ಗತಿಗೆ ಚುರುಕು ಮುಟ್ಟಿಸಿತು. ಡಿಕಾಕ್ 12 ರನ್‌ಗಳಿಸಿದ್ದ ವೇಳೆ ಅಭಿಜಿತ್ ತೋಮರ್ ಕ್ಯಾಚ್ ಬಿಟ್ಟು ಜೀವದಾನ ನೀಡಿದರು. ಇದರ ಲಾಭ ಗಿಟ್ಟಸಿಕೊಂಡ ಡಿಕಾಕ್ ಕೆಕೆಆರ್ ಬೌಲರ್‌ಗಳನ್ನು ದುಃಸ್ವಪ್ನದಂತೆ ಕಾಡಿದರು. ರಾಹುಲ್ ಜತೆ ಪೈಪೋಟಿಗಿಳಿದಂತೆ ಬ್ಯಾಟ್ ಬೀಸಿದ ದಕ್ಷಿಣ ಆಫ್ರಿಕಾದ ಆಟಗಾರ ಐಪಿಎಲ್‌ನಲ್ಲಿ 2ನೇ ಶತಕ ಪೂರೈಸಿದರು. ಸ್ಲಾಗ್ ಓವರ್‌ಗಳಲ್ಲಿ ಬಹುತೇಕ ಏಕಾಂಗಿ ನಿರ್ವಹಣೆ ತೋರಿದ ಡಿಕಾಕ್, ಟಿಮ್ ಸೌಥಿ ಎಸೆದ 19ನೇ ಓವರ್‌ನಲ್ಲಿ 4 ಸಿಕ್ಸರ್ ಒಳಗೊಂಡಂತೆ 27 ರನ್ ಕಸಿದರು. ರಾಹುಲ್-ಡಿಕಾಕ್ ಜೋಡಿ ಕಡೇ 5 ಓವರ್‌ಗಳಲ್ಲಿ 88 ರನ್ ಪೇರಿಸಿತು.
* ಕೆಕೆಆರ್ ಪ್ರತಿರೋಧ
ಕೆಕೆಆರ್‌ಗೆ ಮೊಹ್ಸಿನ್ ಖಾನ್ ಆರಂಭಿಕ ಆಘಾತ ನೀಡಿದರು. ವೆಂಕಟೇಶ್ ಅಯ್ಯರ್ (0), ಅಭಿಜಿತ್ ತೋಮರ್ (4) ಬೇಗನೆ ಔಟಾದರು. ಬಳಿಕ ನಿತೀಶ್ ರಾಣಾ (42) ಹಾಗೂ ಶ್ರೇಯಸ್ ಅಯ್ಯರ್ (50) 3ನೇ ವಿಕೆಟ್‌ಗೆ 56 ರನ್ ಪೇರಿಸಿದರೆ, ಶ್ರೇಯಸ್-ಸ್ಯಾಮ್ ಬಿಲ್ಲಿಂಗ್ಸ್ ಜೋಡಿ 4ನೇ ವಿಕೆಟ್‌ಗೆ 66 ರನ್ ಸೇರಿಸಿತು. ಈ ಜೋಡಿ ನಿರ್ಗಮನದ ಬೆನ್ನಲ್ಲೇ ರಸೆಲ್ (5) ನಿರಾಸೆ ಕಂಡರು. ಕೊನೆಯಲ್ಲಿ ರಿಂಕು ಸಿಂಗ್ (40 ರನ್, 15 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಸುನೀಲ್ ನಾರಾಯಣ್ (21*) ಜೋಡಿ 19 ಎಸೆತಗಳಲ್ಲಿ 58 ರನ್ ಪೇರಿಸಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲವಾಯಿತು.
#LSG become the second team to qualify for the #TATAIPL 2022 Playoffs 🎉 pic.twitter.com/gaK0idsJ84
— IndianPremierLeague (@IPL) May 18, 2022