ಮುಂಬೈ: ಆಲ್ರೌಂಡರ್ ರಾಹುಲ್ ತೆವಾಟಿಯ (13*ರನ್, 3 ಎಸೆತ, 2 ಸಿಕ್ಸರ್) ಕಡೇ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಸಿಡಿಸಿದ ಪರಿಣಾಮ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಪಂಜಾಬ್ ಕಿಂಗ್ಸ್ ವಿರುದ್ಧ ಬ್ರಬೋನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯ ದಾಖಲಿಸಲು ಕಡೇ ಓವರ್‌ನಲ್ಲಿ 19 ರನ್‌ಗಳ ಅವಶ್ಯಕತೆಯಿತ್ತು. ಒಡೆನ್ ಸ್ಮಿತ್ ಆರಂಭಿಕ 4 ಎಸೆತಗಳಲ್ಲಿ 7 ರನ್ ನೀಡಿದ್ದರೆ, ಕಡೇ 2 ಎಸೆತಗಳಲ್ಲಿ ತೆವಾಟಿಯ ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 6 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಟೂರ್ನಿಯಲ್ಲಿ ಏಕೈಕ ಅಜೇಯ ತಂಡವಾಗಿ ಮುನ್ನಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಸ್ಪಿನ್ನರ್ ರಶೀದ್ ಖಾನ್ (22ಕ್ಕೆ 3) ಮಾರಕ ದಾಳಿ ನಡುವೆಯೂ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ (64ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್‌ಗೆ 189 ರನ್ ಕಲೆಹಾಕಿತು. ಪ್ರತಿಯಾಗಿ ಗುಜರಾತ್ ತಂಡ, ಶುಭಮಾನ್ ಗಿಲ್ (96 ರನ್, 59 ಎಸೆತ, 11 ಬೌಂಡರಿ, 1 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಕಡೇ ಓವರ್‌ನಲ್ಲಿ ತೆವಾಟಿಯ ಮ್ಯಾಜಿಕ್‌ನಿಂದ 4 ವಿಕೆಟ್‌ಗೆ 190 ರನ್‌ಗಳಿಸಿ ಜಯದ ನಗೆ ಬೀರಿತು.
ಪಂಜಾಬ್ ಕಿಂಗ್ಸ್: 9 ವಿಕೆಟ್‌ಗೆ 189 (ಶಿಖರ್ ಧವನ್ 35, ಲಿಯಾಮ್ ಲಿವಿಂಗ್‌ಸ್ಟೋನ್ 64, ಜತೇಶ್ ಶರ್ಮ 23, ರಾಹುಲ್ ಚಹರ್ 22, ರಶೀದ್ ಖಾನ್ 22ಕ್ಕೆ 3, ದರ್ಶನ್ ನಲಕಂಡೆ 37ಕ್ಕೆ 2, ಹಾರ್ದಿಕ್ ಪಾಂಡ್ಯ 36ಕ್ಕೆ 1), ಗುಜರಾತ್ ಟೈಟಾನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 190 (ಗಿಲ್ 96, ಸಾಯಿ ಸುದರ್ಶನ್ 35, ಹಾರ್ದಿಕ್ ಪಾಂಡ್ಯ 27, ಕಗಿಸೊ ರಬಾಡ 35ಕ್ಕೆ 2, ರಾಹುಲ್ ಚಹರ್ 41ಕ್ಕೆ 1).
For his incredible 96 (59) at the top, @ShubmanGill is adjudged as the Player of the Match as @gujarat_titans win by 6 wickets in a final-over thriller. 👏 👏
— IndianPremierLeague (@IPL) April 8, 2022
Scorecard ▶️ https://t.co/GJN6Rf8GKJ#TATAIPL | #PBKSvGT pic.twitter.com/9M7pAzMpqA