ಹೌ ಈಸ್ ದಿ ಐಪಿಎಲ್​ ಜೋಶ್​

ಒಂದೆಡೆ ಲೋಕಸಭಾ ಚುನಾವಣೆ ಬಿಸಿ, ಇನ್ನೊಂದೆಡೆ ಏಕದಿನ ವಿಶ್ವಕಪ್​ನಂಥ ತೀರಾ ಪ್ರಮುಖ ಟೂರ್ನಿಯ ನಡುವೆ ಐಪಿಎಲ್ 12ನೇ ಆವೃತ್ತಿಯ ಮಹಾಮನರಂಜನೆ ಶನಿವಾರ ಆರಂಭವಾಗಲಿದೆ. ವಿಶ್ವಕಪ್ ಹಾಗೂ ಲೋಕಸಭಾ ಚುನಾವಣೆ ನಡೆಯುವ ವರ್ಷದಲ್ಲಿ ಐಪಿಎಲ್ ಟೂರ್ನಿ ಕೂಡ ನಡೆಯುತ್ತಿರುವುದು ಇದೇ ಮೊದಲು. 2011 ಮತ್ತು 2015ರಲ್ಲಿ ವಿಶ್ವಕಪ್ ನಂತರದಲ್ಲಿ ಐಪಿಎಲ್ ನಡೆದಿದ್ದರೆ, ಈ ಬಾರಿ ಮೊದಲೇ ನಡೆಯುತ್ತಿರುವುದರಿಂದ ಆಟಗಾರರ ಮೇಲೆ ‘ವರ್ಕ್​ಲೋಡ್’ ಭಾರವೂ ಇದೆ. ಚುನಾವಣೆಯ ಸಮಯದಲ್ಲಿ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲೇ ನಡೆಸುವ ಸಾಹಸಕ್ಕೂ ಬಿಸಿಸಿಐ ಮುಂದಾಗಿದ್ದು, ಈ ವರ್ಷ ಸಾಕಷ್ಟು ಜೋಶ್ ಮತ್ತು ರೋಚಕ ಕ್ಷಣಗಳಿಂದ ತುಂಬಿದ ಐಪಿಎಲ್, ಡಜನ್ ಸಂಭ್ರಮ ಹರಡುವ ನಿರೀಕ್ಷೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್

ಕಳೆದ ಆವೃತ್ತಿಯ ಚಾಂಪಿಯನ್ ತಂಡವನ್ನೇ ಈ ವರ್ಷ ಬಹುತೇಕ ಉಳಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಕಳೆದ ಹರಾಜಿನಲ್ಲಿ ಕೇವಲ ಇಬ್ಬರು ಆಟಗಾರರನ್ನು ಖರೀದಿಸಿದೆ. 5 ಕೋಟಿ ರೂ. ಮೊತ್ತಕ್ಕೆ ಮೋಹಿತ್ ಶರ್ಮ ಹಾಗೂ 20 ಲಕ್ಷ ರೂ.ಗೆ ರುತುರಾಜ್ ಗಾಯಕ್ವಾಡ್​ರನ್ನು ಖರೀದಿಸಿದೆ. ಬಹುತೇಕ ಹಳೇ ತಂಡವನ್ನೇ ಹೊಂದಿರುವ ಚೆನ್ನೈಯಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ಇಲ್ಲ.

# ಪ್ಲಸ್: ಅನುಭವಿ ಹಾಗೂ ಪ್ರಬುದ್ಧ ಆಟಗಾರರಿರುವ ತಂಡ.

# ಮೈನಸ್: ಡೆತ್ ಬೌಲಿಂಗ್.

# ನಿರೀಕ್ಷೆ: ಸಲೀಸಾಗಿ ಪ್ಲೇಆಫ್​ಗೇರಬಹುದು.

# ಟೀಮ್ ಎಂಎಸ್ ಧೋನಿ (ನಾಯಕ), ಫಾಫ್ ಡು ಪ್ಲೆಸಿಸ್, ಮುರಳಿ ವಿಜಯ್, ರವೀಂದ್ರ ಜಡೇಜಾ, ಕರ್ಣ್ ಶರ್ಮ, ಸುರೇಶ್ ರೈನಾ, ಶೇನ್ ವ್ಯಾಟ್ಸನ್, ಮಿಚೆಲ್ ಸ್ಯಾಂಟ್ನರ್, ಸ್ಯಾಮ್ ಬಿಲ್ಲಿಂಗ್ಸ್, ಡೇವಿಡ್ ವಿಲ್ಲಿ, ಡ್ವೇನ್ ಬ್ರಾವೊ, ಇಮ್ರಾನ್ ತಾಹಿರ್, ಕೇದಾರ್ ಜಾಧವ್, ಅಂಬಟಿ ರಾಯುಡು, ಹರ್ಭಜನ್ ಸಿಂಗ್, ದೀಪಕ್ ಚಹರ್, ಕೆಎಂ ಆಸೀಫ್, ಧ್ರುವ್ ಶೋರೆ, ಎನ್. ಜಗದೀಶನ್, ಶಾರ್ದೂಲ್ ಠಾಕೂರ್, ಮೋನು ಕುಮಾರ್, ಚೈತನ್ಯ ಬಿಷ್ಣೋಯಿ.

ಹೊಸ ಸೇರ್ಪಡೆ: ಮೋಹಿತ್ ಶರ್ಮ, ರುತುರಾಜ್ ಗಾಯಕ್ವಾಡ್

# ತಂಡದ ಬಲ: 25, ಭಾರತೀಯರು: 17, ವಿದೇಶೀಯರು: 8

# ನಿರ್ವಹಣೆ ಪಂದ್ಯ: 148 ಜಯ: 90 ಸೋಲು: 57 ರದ್ದು: 1, ಗೆಲುವಿನ ಸರಾಸರಿ: 61.56

# ಬ್ರಾಂಡ್ ಮೌಲ್ಯ -675 ಕೋಟಿ ರೂ.

ರಾಯಲ್ ಚಾಲೆಂಜರ್ಸ್ ಬೆಂಗಳೂರು

9 ಹೊಸ ಆಟಗಾರರನ್ನು ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದೆ. ಇದರಲ್ಲಿ ಪ್ರಮುಖವಾಗಿರುವುದು ವೆಸ್ಟ್ ಇಂಡೀಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಶಿಮ್ರೊನ್ ಹೆಟ್ಮೆಯರ್ ಹಾಗೂ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್. ಭಾರತ ವಿರುದ್ಧದ ಸರಣಿಯಲ್ಲಿ ಹೆಟ್ಮೆಯರ್ 5 ಪಂದ್ಯಗಳಿಂದ 259 ರನ್ ಬಾರಿಸಿದ್ದರೆ, ಕ್ಲಾಸೆನ್ ಭಾರತದ ಅಗ್ರ ಸ್ಪಿನ್ನರ್​ಗಳಾದ ಕುಲದೀಪ್ ಯಾದವ್ ಹಾಗೂ ಚಾಹಲ್​ರನ್ನು ಎದುರಿಸುವಲ್ಲಿ ನಿಸ್ಸೀಮರು. ಅದ ರೊಂದಿಗೆ 16 ವರ್ಷದ ಲೆಗ್​ಸ್ಪಿನ್ನರ್ ಪ್ರಯಾಸ್ ಬರ್ಮನ್ ಆಯ್ಕೆ ಕುತೂಹಲ ಹುಟ್ಟಿಸಿದೆ. ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್ ಶಿವಂ ದುಬೇ ತಂಡದ ದೊಡ್ಡ ಶಕ್ತಿ.

# ಪ್ಲಸ್: ಕೊಹ್ಲಿ, ವಿಲಿಯರ್ಸ್ ಹೊರತಾಗಿಯೂ ಇರುವ ಉತ್ಸಾಹಿ ಬ್ಯಾಟ್ಸ್​ಮನ್​ಗಳು.

# ಮೈನಸ್: ಬೌಲಿಂಗ್ ವಿಭಾಗ, ದೇಶೀಯ ಸ್ಟಾರ್ ಬ್ಯಾಟ್ಸ್​ಮನ್ ಕೊರತೆ.

# ನಿರೀಕ್ಷೆ: ಸಮತೋಲನ ಕಂಡುಕೊಂಡರಷ್ಟೇ ಪ್ಲೇಆಫ್ ಚಾನ್ಸ್.

# ಟೀಮ್ ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್, ಯಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಪವನ್ ನೇಗಿ, ನಥಾನ್ ಕೌಲ್ಟರ್ ನಿಲ್, ಮೋಯಿನ್ ಅಲಿ, ಮೊಹಮದ್ ಸಿರಾಜ್, ಕಾಲಿನ್ ಡಿ ಗ್ರಾಂಡ್​ಹೊಮ್ ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಖುಲ್ವಂತ್ ಖೆಜ್ರೋಲಿಯಾ, ಮಾರ್ಕಸ್ ಸ್ಟೋಯಿನಿಸ್. ಹೊಸ ಸೇರ್ಪಡೆ: ಶಿವಂ ದುಬೇ, ಶಿಮ್ರೊನ್ ಹೆಟ್ಮೆಯರ್, ಅಕ್ಷದೀಪ್ ನಾಥ್, ಪ್ರಯಾಸ್ ಬರ್ಮನ್, ಹಿಮ್ಮತ್ ಸಿಂಗ್, ಗುರ್ಕೀರತ್ ಮಾನ್ ಸಿಂಗ್, ಹೆನ್ರಿಚ್ ಕ್ಲಾಸೆನ್, ದೇವದತ್ತ ಪಡಿಕ್ಕಲ್, ಮಿಲಿಂದ್ ಕುಮಾರ್.

# ತಂಡದ ಬಲ: 24, ಭಾರತೀಯರು: 16, ವಿದೇಶೀಯರು: 8

# ನಿರ್ವಹಣೆ ಪಂದ್ಯ: 167 ಜಯ: 79 ಸೋಲು: 85 ರದ್ದು: 3, ಗೆಲುವಿನ ಸರಾಸರಿ: 48.17

# ಬ್ರಾಂಡ್ ಮೌಲ್ಯ 675 ಕೋಟಿ ರೂ.

ಕಿಂಗ್ಸ್ ಇಲೆವೆನ್​ ಪಂಜಾಬ್

ತಮಿಳುನಾಡಿನ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಇಂಗ್ಲೆಂಡ್​ನ ಎಡಗೈ ವೇಗದ ಬೌಲಿಂಗ್ ಆಲ್ರೌಂಡರ್ ಸ್ಯಾಮ್ ಕರ›ನ್, ಭಾರತೀಯ ಅನುಭವಿ ವೇಗಿ ಮೊಹಮದ್ ಶಮಿ, ದೇಶೀಯ ಕ್ರಿಕೆಟ್​ನಲ್ಲಿ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ಸರ್ಫ್ರಾಜ್ ಖಾನ್, ಟಿ20 ಕ್ರಿಕೆಟ್​ನಲ್ಲಿ ಆಸೀಸ್​ನ ಪ್ರಮುಖ ಆಲ್ರೌಂಡರ್ ಮೋಯ್ಸೆಸ್ ಹೆನ್ರಿಕ್ಸ್ ಹಾಗೂ ವೆಸ್ಟ್ ಇಂಡೀಸ್​ನ ಸ್ಪೋಟಕ ಆಟಗಾರ ನಿಕೋಲಾಸ್ ಪೂರನ್ ತಂಡಕ್ಕೆ ಹೊಸ ಸೇರ್ಪಡೆ. ಅದರೊಂದಿಗೆ ಕೆಲವೊಂದು ಅಪರಿಚಿತ ಮುಖಗಳನ್ನು ತಂಡ ಸೇರಿಸಿಕೊಂಡಿದ್ದು ಸಮತೋಲನ ತರಬಹುದು.

# ಪ್ಲಸ್: ವಿಶ್ವ ದರ್ಜೆಯ ಸ್ಪೋಟಕ ಆರಂಭಿಕ ಆಟಗಾರರು.

# ಮೈನಸ್: ಮ್ಯಾಚ್ ಫಿನಿಷರ್​ಗಳ ಕೊರತೆ

# ನಿರೀಕ್ಷೆ: ಕನಿಷ್ಠ ಪ್ಲೇಆಫ್​ಗೇರುವ ಆಸೆ ಇಡಬಹುದು.

ಟೀಮ್ ಕೆಎಲ್ ರಾಹುಲ್, ಕ್ರಿಸ್ ಗೇಲ್, ಆಂಡ್ರ್ಯೂ ಟೈ, ಮಯಾಂಕ್ ಅಗರ್ವಾಲ್, ಅಂಕಿತ್ ರಜಪೂತ್, ಮುಜೀಬ್ ಉರ್ ರೆಹಮಾನ್, ಕರುಣ್ ನಾಯರ್, ಡೇವಿಡ್ ಮಿಲ್ಲರ್, ಆರ್.ಅಶ್ವಿನ್ (ನಾಯಕ), ಮಂದೀಪ್ ಸಿಂಗ್. ಹೊಸ ಸೇರ್ಪಡೆ: ವರುಣ್ ಚಕ್ರವರ್ತಿ, ಸ್ಯಾಮ್ ಕರ›ನ್, ಮೊಹಮದ್ ಶಮಿ, ಪ್ರಭ್​ಸಿಮ್ರನ್ ಸಿಂಗ್, ನಿಕೋಲಾಸ್ ಪೂರನ್, ಮೋಯ್ಸೆಸ್ ಹೆನ್ರಿಕ್ಸ್, ಹರ್ದುಸ್ ವಿಲ್​ಜೊಯೆನ್, ದರ್ಶನ್ ನಲ್ಕಂಡೆ, ಸರ್ಫ್ರಾಜ್ ಖಾನ್, ಆರ್ಶ್​ದೀಪ್ ಸಿಂಗ್, ಅಗ್ನಿವೇಶ್ ಅಯಾಚಿ, ಹರ್​ಪ್ರೀತ್ ಬ್ರಾರ್, ಮುರುಗನ್ ಅಶ್ವಿನ್.

# ತಂಡದ ಬಲ: 23, ಭಾರತೀಯರು: 15, ವಿದೇಶೀಯರು: 8

# ನಿರ್ವಹಣೆ ಪಂದ್ಯ: 162 ಜಯ: 76 ಸೋಲು: 86 ಗೆಲುವಿನ ಸರಾಸರಿ: 46.29

# ಬ್ರಾಂಡ್ ಮೌಲ್ಯ: 358 ಕೋಟಿ ರೂ.

ಮುಂಬೈ ಇಂಡಿಯನ್ಸ್

ಕಳೆದ ವರ್ಷ ಆರ್​ಸಿಬಿಯಲ್ಲಿ ರನ್​ಬರ ಎದುರಿಸಿದ್ದ ವಿಕೆಟ್ ಕೀಪರ್-ಆರಂಭಿಕ ಕ್ವಿಂಟನ್ ಡಿಕಾಕ್ ಈ ಬಾರಿ ಮುಂಬೈಗೆ ವರವಾಗಿ ಪರಿಣಮಿಸಬಹುದು. ಕಳೆದ ಲಂಕಾ ವಿರುದ್ಧ ಸರಣಿಯಲ್ಲಿ ಭರ್ಜರಿ ಫಾಮ್ರ್ ಗೆ ಮರಳಿರುವ ಡಿಕಾಕ್, ಮುಂಬೈ ತಂಡದ ವಿಕೆಟ್ ಕೀಪರ್ ಮತ್ತು ಆರಂಭಿಕನ ಸ್ಥಾನ ಭದ್ರಪಡಿಸಬಹುದು. ದೇಶೀಯ ವಿಕೆಟ್ ಕೀಪರ್​ಗಳಾದ ಇಶಾನ್ ಕಿಶನ್ ಮತ್ತು ಆದಿತ್ಯ ತಾರೆಗೆ ಅವಕಾಶ ಕ್ಷೀಣಿಸಬಹುದು. ಹರಾಜಿನಲ್ಲಿ ಮುಂಬೈಗೆ ದುಬಾರಿ ಆಟಗಾರ ಎನಿಸಿದ್ದ ಬರೀಂದರ್ ಸ್ರಾನ್, ಅನ್ಮೋಲ್​ಪ್ರೀತ್ ಸಿಂಗ್​ರ ಇತ್ತೀಚೆಗಿನ ನಿರ್ವಹಣೆ ಅಸ್ಥಿರವೆನಿಸಿದೆ. ಮಾಲಿಂಗ ತಂಡದ ಪ್ರಮುಖ ಕೊಂಡಿಯಾಗಿದ್ದಾರೆ. ಪಂಕಜ್ ಜೈಸ್ವಾಲ್ ಹಾಗೂ ರಸಿಕ್ ದಾರ್​ರಂಥ ಯುವ ಆಟಗಾರರು ಗಮನಸೆಳೆದಿದ್ದರೂ, ಎಲ್ಲರ ಗಮನ ಈ ಬಾರಿ ಯುವರಾಜ್ ಸಿಂಗ್ ಮೇಲಿರಲಿದೆ.

# ಪ್ಲಸ್: ಬೌಲಿಂಗ್, ಅದರಲ್ಲೂ ಡೆತ್ ಓವರ್​ಗಳಿಗಾಗಿಯೇ ಇರುವ ಸ್ಪೆಷಲಿಸ್ಟ್​ಗಳು.

# ಮೈನಸ್: ಮಧ್ಯಮ ಕ್ರಮಾಂಕದ ಮೇಲೆ ನಂಬಿಕೆ ಕಷ್ಟ.

# ನಿರೀಕ್ಷೆ: ಪ್ಲೇಆಫ್​ಗೇರುವುದು ಹೆಚ್ಚು ಕಷ್ಟವಾಗದು.

# ಟೀಮ್ ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್ ಬುಮ್ರಾ, ಕೃನಾಲ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಮಯಾಂಕ್ ಮಾರ್ಕಂಡೆ, ರಾಹುಲ್ ಚಹರ್, ಅನುಕೂಲ್ ರಾಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕೈರಾನ್ ಪೊಲ್ಲಾರ್ಡ್, ಎವಿನ್ ಲೂಯಿಸ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ಲೀನಘನ್, ಆಡಂ ಮಿಲ್ನೆ, ಜೇಸನ್ ಬೆಹ್ರನ್​ಡಾರ್ಫ್, ಕ್ವಿಂಟನ್ ಡಿಕಾಕ್.

ಹೊಸ ಸೇರ್ಪಡೆ: ಬರೀಂದರ್ ಸ್ರಾನ್, ಲಸಿತ್ ಮಾಲಿಂಗ, ಯುವರಾಜ್ ಸಿಂಗ್, ಅನ್ಮೋಲ್​ಪ್ರೀತ್ ಸಿಂಗ್, ಪಂಕಜ್ ಜೈಸ್ವಾಲ್, ರಸಿಕ್ ದಾರ್.

# ತಂಡದ ಬಲ: 24, ಭಾರತೀಯರು: 16, ವಿದೇಶೀಯರು: 8

# ನಿರ್ವಹಣೆ ಪಂದ್ಯ: 171 ಜಯ: 98 ಸೋಲು: 73 ಗೆಲುವಿನ ಸರಾಸರಿ: 57.01

# ಬ್ರಾಂಡ್ ಮೌಲ್ಯ 778 ಕೋಟಿ ರೂ.

43349

ಕಾರ್ಪೆರೇಟ್ ಫೈನಾನ್ಸ್ ಸಲಹಾ ಸಂಸ್ಥೆ ‘ಡಫ್ ಆಂಡ್ ಫೆಲ್ಪ್ ್ಸ ವರದಿಯ ಪ್ರಕಾರ 2018ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ಶೇ. 19 ಏರಿಕೆ ಯಾಗಿದ್ದು, 43,349 ಕೋಟಿ ರೂ.ಗೆ (6.3 ಬಿಲಿಯನ್ ಡಾಲರ್) ತಲುಪಿದೆ.

ಕೋಲ್ಕತ ನೈಟ್​ರೈಡರ್ಸ್

ಇಂಗ್ಲೆಂಡ್​ನ ಆಲ್ರೌಂಡರ್ ಜೋಯ್ ಡೆನ್ಲೀ, ವೇಗದ ಬೌಲರ್ ಹ್ಯಾರಿ ಗುರ್ನೆಯಂಥ ಅನಾಮಿಕ ಆಟಗಾರರನ್ನು ಕೆಕೆಆರ್ ಹರಾಜಿನಲ್ಲಿ ಆರಿಸಿಕೊಂಡಿದೆ. ಕೆಕೆಆರ್ ತಂಡ ತನ್ನ ಅನುಭವಿ ಆಟಗಾರರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ಕಳೆದ ಹರಾಜಿನಲ್ಲಿ 8 ಆಟಗಾರರನ್ನು ಆಯ್ಕೆ ಮಾಡಿದೆ.

# ಪ್ಲಸ್: ವೆಸ್ಟ್ ಇಂಡೀಸ್​ನ ವಿಧ್ವಂಸಕ ಆಲ್ರೌಂಡರ್​ಗಳು.

# ಮೈನಸ್: ಮೀಸಲು ಆಟಗಾರರ ತಂಡದಲ್ಲಿ ಹೆಚ್ಚಿನ ಬಲವಿಲ್ಲ.

# ನಿರೀಕ್ಷೆ: ನಿರ್ವಹಣೆ ಜತೆಗೆ ಅದೃಷ್ಟದ ಬಲವೂ ಬೇಕಾಗಬಹುದು.

# ಟೀಮ್ ದಿನೇಶ್ ಕಾರ್ತಿಕ್ (ನಾಯಕ), ರಾಬಿನ್ ಉತ್ತಪ್ಪ, ಕ್ರಿಸ್ ಲ್ಯಾನ್, ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ಶುಭಮಾನ್ ಗಿಲ್, ಪೀಯುಷ್ ಚಾವ್ಲಾ, ಕುಲದೀಪ್, ಪ್ರಸಿದ್ಧಕೃಷ್ಣ, ನಿತೇಶ್ ರಾಣಾ, ರಿಂಕು ಸಿಂಗ್.

# ಹೊಸ ಸೇರ್ಪಡೆ: ಬ್ರಾಥ್​ವೇಟ್, ಫರ್ಗ್ಯೂಸನ್, ಜೋಯ್ ಡೆನ್ಲಿ, ಹ್ಯಾರಿ ಗುರ್ನೆ, ನಿಖಿಲ್ ನಾಯ್್ಕ ಶ್ರೀಕಾಂತ್ ಮುಂಡೆ, ಪೃಥ್ವಿ ರಾಜ್ ಯಾರಾ›, ಕೆಸಿ ಕಾರ್ಯಪ್ಪ, ಸಂದೀಪ್ ವಾರಿಯರ್.

# ತಂಡದ ಬಲ: 21, ಭಾರತೀಯರು: 13, ವಿದೇಶೀಯರು: 8

# ನಿರ್ವಹಣೆ ಪಂದ್ಯ: 164, ಜಯ: 86, ಸೋಲು: 78, ಗೆಲುವಿನ ಸರಾಸರಿ: 53.04.

# ಬ್ರಾಂಡ್ ಮೌಲ್ಯ -716 ಕೋಟಿ ರೂ.

ರಾಜಸ್ಥಾನ ರಾಯಲ್ಸ್

ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಮಿಂಚಿನ ನಿರ್ವಹಣೆ ಮೂಲಕ ಗಮನಸೆಳೆದ ಆಶ್ಟನ್ ಟರ್ನರ್ ಹಾಗೂ ವೆಸ್ಟ್ ಇಂಡೀಸ್​ನ ಒಶಾನೆ ಥಾಮಸ್ ರಾಜಸ್ಥಾನದ ಹೊಸಮುಖಗಳು. 9 ಆಟಗಾರನ್ನು ಹರಾಜಿನಲ್ಲಿ ಖರೀದಿಸಿರುವ ರಾಜಸ್ಥಾನ, ಜೈದೇವ್ ಉನಾದ್ಕತ್​ರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸಂಪೂರ್ಣ ಐಪಿಎಲ್ ಭಾರತದಲ್ಲಿಯೇ ನಡೆಯಲಿರುವ ಕಾರಣ, ಉನಾದ್ಕತ್ ಆಯ್ಕೆ ಉತ್ತಮ ಎನಿಸಬಹುದು.

# ಪ್ಲಸ್: ವಿದೇಶದ ಪ್ರತಿಭೆಗಳು ನಿಸ್ಸಂಶಯವಾಗಿ ಈ ತಂಡದ ಶಕ್ತಿ.

# ಮೈನಸ್: ದೇಶೀಯ ಪ್ರತಿಭೆಗಳ ನಿಸ್ತೇಜ ನಿರ್ವಹಣೆ.

# ನಿರೀಕ್ಷೆ: ಸಂಘಟಿತ ನಿರ್ವಹಣೆ ತೋರಿದರಷ್ಟೇ ಮುನ್ನಡೆಯಬಹುದು.

# ಟೀಮ್ ಅಜಿಂಕ್ಯ ರಹಾನೆ (ನಾಯಕ), ಕೆ. ಗೌತಮ್ ಸಂಜು ಸ್ಯಾಮ್ಸನ್, ಶ್ರೇಯಸ್ ಗೋಪಾಲ್, ಆರ್ಯಮಾನ್ ಬಿರ್ಲಾ, ಮಿಧುನ್, ಪ್ರಶಾಂತ್ ಚೋಪ್ರಾ, ಸ್ಟುವರ್ಟ್ ಬಿನ್ನಿ, ರಾಹುಲ್ ತ್ರಿಪಾಠಿ, ಸ್ಟೋಕ್ಸ್, ಸ್ಟೀವನ್ ಸ್ಮಿತ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಇಶ್ ಸೋಧಿ, ಧವಳ್ ಕುಲಕರ್ಣಿ, ಮಹಿಪಾಲ್ ಲೋಮ್ರರ್.

# ಹೊಸ ಸೇರ್ಪಡೆ: ಉನಾದ್ಕತ್, ವರುಣ್ ಆರನ್, ಒಶಾನೆ ಥಾಮಸ್, ಆಶ್ಟನ್ ಟರ್ನರ್, ಲೈವಿಂಗ್​ಸ್ಟೋನ್, ಶಶಾಂಕ್ ಸಿಂಗ್, ರಿಯಾನ್ ಪರಾಗ್, ಮನನ್ ವೋಹ್ರಾ, ರಂಜಾನೆ.

# ತಂಡದ ಬಲ: 25, ಭಾರತೀಯರು: 17, ವಿದೇಶೀ ಯರು: 8

# ನಿರ್ವಹಣೆ ಪಂದ್ಯ: 133, ಜಯ: 70, ಸೋಲು: 62, ರದ್ದು: 1, ಗೆಲುವಿನ ಸರಾಸರಿ: 52.65.

# ಬ್ರಾಂಡ್ ಮೌಲ್ಯ  296 ಕೋಟಿ ರೂ.

ಡೆಲ್ಲಿ ಕ್ಯಾಪಿಟಲ್ಸ್

ಕಳೆದ ಋತುವಿನಿಂದ 14 ಆಟಗಾರರನ್ನು ಉಳಿಸಿಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಈ ವರ್ಷದ ದೊಡ್ಡ ಬಲ ಶಿಖರ್ ಧವನ್. ಆದರೆ, ಆಲ್ರೌಂಡರ್ ವಿಜಯ್ ಶಂಕರ್​ರನ್ನು ವರ್ಗಾವಣೆ ಮಾಡಿದ್ದು ತಪು್ಪ ನಿರ್ಧಾರ ಎನಿಸಬಹುದು. ಹನುಮ ವಿಹಾರಿ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಸಮತೋಲನ ತುಂಬುವ ನಿರೀಕ್ಷೆ ಇದೆ. 10 ಹೊಸ ಆಟಗಾರರನ್ನು ಖರೀದಿಸಿರುವ ಡೆಲ್ಲಿ ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿದೆ.

# ಪ್ಲಸ್: ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳು.

# ಮೈನಸ್: ಶ್ರೇಯಸ್ ಅಯ್ಯರ್ ಅನನುಭವಿ ನಾಯಕತ್ವ.

# ನಿರೀಕ್ಷೆ: ಯುವ ಆಟಗಾರರು ಮಿಂಚಿದರಷ್ಟೇ ಚಾನ್ಸ್.

# ಟೀಮ್ ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್, ಪೃಥ್ವಿ ಷಾ, ಅಮಿತ್ ಮಿಶ್ರಾ, ಆವೇಶ್ ಖಾನ್, ಹರ್ಷಲ್ ಪಟೇಲ್, ರಾಹುಲ್ ಟೇವಾಟಿಯಾ, ಜಯಂತ್ ಯಾದವ್, ಮಂಜೋತ್ ಕಲ್ರಾ, ಕಾಲಿನ್ ಮನ್ರೊ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಸಂದೀಪ್ ಲಮಿಚನ್ನೆ, ಟ್ರೆಂಟ್ ಬೌಲ್ಟ್, ಶಿಖರ್ ಧವನ್.

ಹೊಸ ಸೇರ್ಪಡೆ: ಕಾಲಿನ್ ಇನ್​ಗ್ರಾಮ್ ಅಕ್ಷರ್ ಪಟೇಲ್, ಹನುಮ ವಿಹಾರಿ, ಶೆರ್ಫಾನ್ ರುದರ್​ಫೋರ್ಡ್, ಇಶಾಂತ್ ಶರ್ಮ, ಕೀಮೋ ಪೌಲ್, ಜಲಜ್ ಸಕ್ಸೇನಾ, ಅಂಕುಶ್ ಬೈನ್ಸ್, ನಾಥು ಸಿಂಗ್, ಬಂಡಾರು ಅಯ್ಯಪ್ಪ.

# ತಂಡದ ಬಲ: 25, ಭಾರತೀಯರು: 17, ವಿದೇಶೀಯರು: 8

# ನಿರ್ವಹಣೆ: ಪಂದ್ಯ: 161, ಜಯ: 67, ಸೋಲು: 92, ರದ್ದು: 2, ಗೆಲುವಿನ ಸರಾಸರಿ: 42.45.

# ಬ್ರಾಂಡ್ ಮೌಲ್ಯ: 358 ಕೋಟಿ ರೂ.

ಸನ್​ರೈಸರ್ಸ್

ಎರಡು ಪ್ರಮುಖ ಆಟಗಾರರು ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಲಯದಲ್ಲಿರುವ ಇಂಗ್ಲೆಂಡ್​ನ ವಿಕೆಟ್ಕೀಪರ್-ಬ್ಯಾಟ್ಸ್ ಮನ್ ಜಾನಿ ಬೇರ್​ಸ್ಟೋ ಹಾಗೂ ನ್ಯೂಜಿಲೆಂಡ್​ನ ಸ್ಪೋಟಕ ಆರಂಭಿಕ ಮಾರ್ಟಿನ್ ಗುಪ್ಟಿಲ್ ಬಲ ತುಂಬಿದ್ದಾರೆ.

# ಪ್ಲಸ್: ವಿಶ್ವದರ್ಜೆಯ ಟಿ20 ಸ್ಪೆಷಲಿಸ್ಟ್ ಗಳ ಬೌಲಿಂಗ್ ವಿಭಾಗ.

# ಮೈನಸ್: ಬ್ಯಾಟಿಂಗ್​ನಲ್ಲಿ ಡೇವಿಡ್ ವಾರ್ನರ್ ಏಕಾಂಗಿ ಶಕ್ತಿ.

# ನಿರೀಕ್ಷೆ: ಕಳೆದ ವರ್ಷದ ನಿರ್ವಹಣೆ ಪುನರಾವರ್ತನೆ ಸಾಧ್ಯ.

ಟೀಮ್ ಬಸಿಲ್ ಥಂಪಿ, ಭುವನೇಶ್ವರ್ ಕುಮಾರ್, ದೀಪ್ ಹೂಡಾ, ಮನೀಷ್ ಪಾಂಡೆ, ಟಿ. ನಟ ರಾಜನ್, ರಿಕ್ಕಿ ಭುಯಿ, ಸಂದೀಪ್ ಶರ್ಮ, ಸಿದ್ಧಾರ್ಥ್ ಕೌಲ್. ಶ್ರೀವತ್ಸ ಗೋಸ್ವಾಮಿ, ಖಲೀಲ್ ಅಹ್ಮದ್, ಯೂಸುಫ್ ಪಠಾಣ್, ಬಿಲ್ಲಿ ಸ್ಟಾನ್​ಲೇಕ್, ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ (ನಾಯಕ), ರಶೀದ್ ಖಾನ್, ಮೊಹಮದ್ ನಬಿ, ಶಕೀಬ್ ಅಲ್ ಹಸನ್, ಅಭಿಷೇಕ್ ಶರ್ಮ, ವಿಜಯ್ ಶಂಕರ್, ಶಾಬಾಜ್ ನದೀಂ. ಹೊಸ ಸೇರ್ಪಡೆ: ಬೇರ್​ಸ್ಟೋ, ವೃದ್ಧಿಮಾನ್ ಸಾಹ, ಗುಪ್ಟಿಲ್.

# ತಂಡದ ಬಲ: 23, ಭಾರತೀಯರು: 15, ವಿದೇಶೀಯರು: 8

# ನಿರ್ವಹಣೆ: ಪಂದ್ಯ: 93, ಜಯ: 52, ಸೋಲು: 41, ಗೆಲುವಿನ ಸರಾಸರಿ: 55.37.

# ಬ್ರಾಂಡ್ ಮೌಲ್ಯ: -ಠಿ;482 ಕೋಟಿ