ಕಲಾಯತನ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ…

UDP-14-1-KASAPA

ಉಡುಪಿ ತಾಲೂಕು ಕಸಾಪದಿಂದ ವೀಳ್ಯದೊಂದಿಗೆ ಆಮಂತ್ರಣ

ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಲಾಯತನ ಮೇ 17ರಂದು ಕೊಡವೂರು ಶಂಕರನಾರಾಯಣ ದೇವಳದ ಸಭಾಂಗಣದಲ್ಲಿ ನಡೆಯಲಿದ್ದು, ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಯಕ್ಷಗಾನದ ಹಿರಿಯ ವಿದ್ವಾಂಸ ಪ್ರೊ. ಎಂ.ಎಲ್​ ಸಾಮಗ ಅವರಿಗೆ ಆಮಂತ್ರಣ ಪತ್ರ ನೀಡಲಾಯಿತು.

blank

ಕಸಾಪ ತಾಲೂಕು ಅಧ್ಯಕ್ಷ ರವಿರಾಜ ಎಚ್​.ಪಿ. ಅವರ ನೇತೃತ್ವದಲ್ಲಿ ಘಟಕದ ಇನ್ನಿತರ ಪದಾಧಿಕಾರಿಗಳು ಮೇ 12ರಂದು ಪ್ರೊ.ಸಾಮಗ ಅವರ ಮನೆಗೆ ತೆರಳಿ ಸಂಪ್ರದಾಯದಂತೆ ವೀಳ್ಯದೊಂದಿಗೆ ಆಮಂತ್ರಣ ಪತ್ರ ನೀಡಿ, ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು.

ಪತ್ನಿ, ಕಲಾವಿದೆ ಪ್ರತಿಭಾ ಸಾಮಗ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಾಧು ಸಾಲಿಯಾನ್​, ಹಿರಿಯರಾದ ಭುವನ ಪ್ರಸಾದ ಹೆಗ್ಡೆ, ಕೊಡವೂರು ದೇವಳದ ಆಡಳಿತ ಮಂಡಳಿ ಸದಸ್ಯ ವಾದಿರಾಜ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ವಿದ್ಯಾ ಶಾಮಸುಂದರ, ಕಸಾಪ ಪದಾಧಿಕಾರಿಗಳಾದ ಜನಾರ್ದನ ಕೊಡವೂರು, ರಾಘವೇಂದ್ರ ಪ್ರಭು ಕರ್ವಾಲು, ಪೂರ್ಣಿಮಾ ಜನಾರ್ದನ, ರಂಜನಿ ವಸಂತ್​, ಅನಿತಾ ಸಿಕ್ವೇರಾ, ವಸಂತ , ರಾಜೇಶ ಭಟ್​ ಪಣಿಯಾಡಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಲಕ್ಮೀನಾರಾಯಣ ಉಪಾಧ್ಯ, ಸುಶಾಂತ ಕೆರೆಮಠ ಉಪಸ್ಥಿತರಿದ್ದರು.

Samagaಸಾಹಿತ್ಯ ಸಮ್ಮೇಳನವೆಂದರೆ ಅಕ್ಷರ ಜಾತ್ರೆಯಷ್ಟೇ ಅಲ್ಲ. ಎಲ್ಲ ಸಾಹಿತಿಗಳು, ಕಲಾಸಕ್ತರು ಒಟ್ಟುಗೂಡುವಿಕೆಯ ಆತ್ಮೀಯ ವೇದಿಕೆಯಾಗಿದೆ. ಇಂತಹ ಸಮ್ಮೇಳನಗಳು ಸಾಹಿತ್ಯದ ಬೆಳವಣಿಗೆಗೆ ಪರೋಕ್ಷ ಕಾರಣವಾಗುತ್ತದೆ.
| ಪ್ರೊ. ಎಂ.ಎಲ್​. ಸಾಮಗ. ಸಮ್ಮೇಳನದ ಸರ್ವಾಧ್ಯಕ್ಷ

Share This Article
blank

ನಿಮ್ಮ ಪತಿ ಬಿಗಿಯಾದ ಬೆಲ್ಟ್ ಧರಿಸುತ್ತಿದ್ದಾರಾ? ಅವರಿಗೆ ಈ ಕುರಿತಾಗಿ ಜಾಗೃತಿ ಮೂಡಿಸಿ..belt

belt: ಇತ್ತೀಚಿನ ದಿನಗಳಲ್ಲಿ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ, ಬೆಲ್ಟ್ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು…

ರಸ್ತೆಯಲ್ಲಿ ಬಿದ್ದಿರುವ ಈ ವಸ್ತುಗಳನ್ನು ದಾಟುವ ತಪ್ಪನ್ನು ಎಂದಿಗೂ ಮಾಡಬೇಡಿ..ಅಪಾಯ ಖಂಡಿತ! Vastu Tips

Vastu Tips: ರಸ್ತೆ ದಾಟುವಾಗ ಕೆಲವು ವಿಚಿತ್ರವಾದ ವಸ್ತುಗಳು ಬಿದ್ದಿರುವುದನ್ನು ನೋಡುತ್ತೇವೆ.  ಅಷ್ಟೆ ಅಲ್ಲದೆ ರಸ್ತೆಯಲ್ಲಿ…

blank