More

  ಶಾಸಕ ಪೊನ್ನಣ್ಣಗೆ ಆಹ್ವಾನ

  ಮಡಿಕೇರಿ:

  ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ದಿನಾಂಕ ನ. 9ರಂದು ಕಲಾಸ್ಮೃತಿ ವೇದಿಕೆಯಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ.

  ಕೊಡಗು ವೈದ್ಯಕೀಯ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಪಧಾಧಿಕಾರಿಗಳು ಶನಿವಾರ ಎ.ಎಸ್. ಪೊನ್ನಣ್ಣ ಅವರ ಗೃಹ ಕಚೇರಿಗೆ ತೆರಳಿ ಸಾಂಪ್ರದಾಯಿಕ ಆಹ್ವಾನ ನೀಡಿದರು. ಇದೇ ಸಂಧರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿ ಕೈಯಾರೆ ರಚಿಸಿದ ಪೊನ್ನಣ್ಣ ಅವರ ಚಿತ್ರ ಪಟವನ್ನು ನೀಡಲಾಯಿತು.

  ಸಂಘದ ಕಾರ್ಯದರ್ಶಿ ಹಾಗೂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ ಮಂಜುನಾಥ್, ವಿದ್ಯಾರ್ಥಿ ಪ್ರತಿನಿಧಿಗಳಾದ ಕೃಪಾ ಎನ್., ಶಶಾಂಕ್ ಎಂ.ಜಿ., ಕಲಾವಿದ ಯಶಸ್ಸ್, ಸಂಚಾಲಕಿ ಡಾ. ದಿವ್ಯಾಜ್ಯೋತಿ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕ ತೆನ್ನಿರ ಮೈನಾ ನಿಯೋಗಲ್ಲಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts