ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದ ಕಾರಣಕ್ಕೆ ಷೇರುಪೇಟೆಯಲ್ಲಿ ತಲ್ಲಣ ಉಂಟಾಗಿದ್ದು, ಕಳೆದ ಎರಡು ದಿನಗಳ ಅವಧಿಯಲ್ಲಿ ಷೇರುಪೇಟೆ ಭಾರಿ ಕುಸಿತ ಕಂಡಿದೆ. ಪರಿಣಾಮ ಹೂಡಿಕೆದಾರರು ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿ ಕಳೇದುಕೊಂದಿದ್ದಾರೆ.
ಸತತ ಎರಡು ನಿರಂತರ ಅವಧಿಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ 787.98 ಅಂಶ ಕುಸಿದಿದ್ದು, ಸೋಮವಾರ 40,676.63ರಲ್ಲಿ ವಹಿವಾಟು ಕೊನೆಗೊಳಿಸಿದೆ. ಸೋಮವಾರ ಇಂಟ್ರಾ ಡೇ ಟ್ರೇಡ್ನಲ್ಲಿ ಸೆನ್ಸೆಕ್ಸ್ 850.65 ಅಂಶ ಕುಸಿತ ಕಂಡು 40613.96ರಲ್ಲಿ ವಹಿವಾಟು ನಡೆಸಿತ್ತು.ಇದಕ್ಕೂ ಮುನ್ನ ಕಳೆದ ವಾರದ ಕೊನೆಯ ವಹಿವಾಟಿನ ದಿನ ಶುಕ್ರವಾರ ಅಂತ್ಯಕ್ಕೆ 162.03 ಅಂಶ ಕುಸಿತ ಕಂಡು 41,464.61ರಲ್ಲಿ ವಹಿವಾಟು ಮುಗಿಸಿತ್ತು.
ಬಿಎಸ್ಇಯಲ್ಲಿ ಈ ಕರಡಿ ಕುಣಿತದಿಂದಾಗಿ ಕಳೆದ ರಡು ಅವಧಿಯಲ್ಲಿ ಲಿಸ್ಟೆಡ್ ಕಂಪನಿ ಷೇರುಗಳ ಮೌಲ್ಯ 3,36,559.82 ರೂಪಾಯಿಯಿಂದ 1,53,90,312.60 ಕೋಟಿ ತನಕ ಕುಸಿತ ಕಂಡಿದೆ. (ಏಜೆನ್ಸೀಸ್)