ಷೇರುಪೇಟೆ ಮಹಾಪತನ; 770 ಅಂಕ ಕುಸಿದ ಸೆನ್ಸೆಕ್ಸ್, ನಿಫ್ಟಿಯಲ್ಲಿ 225 ಅಂಶ ಇಳಿಕೆ

ಮುಂಬೈ: ಜಾಗತಿಕ ಆರ್ಥಿಕ ಬಿಕ್ಕಟ್ಟು, ಭಾರತ ಅರ್ಥವ್ಯವಸ್ಥೆಯ ಮಂದಗತಿ ಮತ್ತು 2019-20ನೇ ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ದೇಶೀಯ ಒಟ್ಟು ಉತ್ಪನ್ನ (ಜಿಡಿಪಿ) ಶೇ. 5ಕ್ಕೆ ಕುಸಿತದಿಂದ ಷೇರುಪೇಟೆ ತೀವ್ರ ಕುಸಿತ ಕಂಡಿದ್ದು, ಸೆನ್ಸೆಕ್ಸ್ 770 ಅಂಶ ಕುಸಿತವಾಗಿದೆ. ನಿಫ್ಟಿ 225 ಅಂಶ ಇಳಿಮುಖವಾಗಿದೆ. ವಿನಾಯಕ ಚತುರ್ಥಿಯ ಸಂಭ್ರಮದ ನಡುವೆಯೇ ಷೇರುಪೇಟೆಯಲ್ಲಿ -ಠಿ; 2.61 ಲಕ್ಷ ಕೋಟಿ ಸಂಪತ್ತು ಕರಗಿದೆ. 15 ತಿಂಗಳ ಹಿಂದೆ ಅಂದರೆ 2018ರ ಮೇ ನಂತರ ಷೇರುಪೇಟೆಯಲ್ಲಿ ಉಂಟಾದ ಅತಿದೊಡ್ಡ ತಲ್ಲಣ ಇದಾಗಿದೆ.

ದಿನದ ವಹಿವಾಟಿನಲ್ಲಿ 867 ಅಂಕ ಹಿನ್ನಡೆ ಕಂಡಿದ್ದ ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 769.88 ಅಂಶ ಅಥವಾ ಶೇ. 2.06 ಕುಸಿತವಾಗಿ 36,562.91ಕ್ಕೆ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರುಪೇಟೆಯಲ್ಲಿ (ನಿಫ್ಟಿ) 225.35 ಅಂಕ ಅಥವಾ ಶೇ. 2.04 ಕುಸಿತ ಕಂಡು 10,797.90ನಲ್ಲಿ ವಹಿವಾಟು ಸ್ಥಿರಗೊಂಡಿತು.

ನಷ್ಟ ಅನುಭವಿಸಿದ ಕಂಪನಿಗಳು: ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ವೇದಾಂತ, ಎಚ್​ಡಿಎಫ್​ಸಿ ಇಂಡಸ್​ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ರಿಲಯನ್ಸ್ ಇಂಡಸ್ಟ್ರಿಸ್, ಒಎನ್​ಜಿಸಿ ಷೇರುಗಳ ಮೌಲ್ಯ ಶೇ.4.45ಕ್ಕೆ ಇಳಿಯಿತು. ಟೆಕ್​ಕಾಂ ಮತ್ತು ಎಚ್​ಸಿಎಲ್ ಟೆಕ್ ಷೇರುಗಳ ಮಾತ್ರ ವೃದ್ಧಿ ಕಂಡವು.

ಬ್ಯಾಂಕಿಂಗ್ ಷೇರು ಕುಸಿತ

ನಿಫ್ಟಿಯಲ್ಲಿ 11 ವಲಯದ ಷೇರುಗಳ ಕುಸಿತಕಂಡವು. ಸಾರ್ವಜನಿಕ ವಲಯದ ಬ್ಯಾಂಕ್​ಗಳ ಷೇರುಗಳು ಶೇ. 5 ಇಳಿಕೆ ಕಂಡಿತು. ಖಾಸಗಿ ಬ್ಯಾಂಕ್, ಹಣಕಾಸು, ಲೋಹ ವಲಯದಲ್ಲಿ ಶೇ. 2.5ರಿಂದ 3ರವರೆಗೆ ಷೇರುಗಳು ಅಪಮೌಲ್ಯಗೊಂಡವು. ಆರ್ಥಿಕ ಹಿನ್ನಡೆಯು ಆಟೋಮೊಬೈಲ್ ಕ್ಷೇತ್ರದಲ್ಲಿ ತೀವ್ರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲಾ ಗುತ್ತಿದೆ. ಇವೆಲ್ಲದರ ಪರಿಣಾಮ ಷೇರುಪೇಟೆ ಮೇಲೂ ಉಂಟಾಗುತ್ತಿದೆ. 10 ಬ್ಯಾಂಕ್​ಗಳ ವಿಲೀನದ ಘೋಷಣೆ ಯಿಂದ ಬ್ಯಾಂಕ್ ಷೇರುಗಳ ಮೌಲ್ಯ ಇಳಿಕೆಯಾಗುತ್ತಿದೆ.

ರೂಪಾಯಿ ಮೌಲ್ಯವೂ ಇಳಿಕೆ

ಅಂತಾರಾಷ್ಟ್ರೀಯ ತೈಲೋದ್ಯಮ ಮತ್ತು ವಿದೇಶಿ ವಿನಿಯದ ಪ್ರಭಾವ ಭಾರತದ ರೂಪಾಯಿ ಮೇಲೂ ಉಂಟಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಇಳಿಕೆಯಾಗಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಒಂದು ಡಾಲರ್​ಗೆ -ಠಿ; 72.39ಕ್ಕೆ ತಲುಪಿದೆ. ಒಂಬತ್ತು ತಿಂಗಳ ನಂತರ ರೂಪಾಯಿ ಮೌಲ್ಯ ಈ ಮಟ್ಟಕ್ಕೆ ಕುಸಿದಿದೆ. ಜಾಗತಿಕ ಪರಿಣಾಮದ ಜತೆಗೆ ಭಾರತದ ಜಿಡಿಪಿ ಕುಸಿತ ಕೂಡ ರೂಪಾಯಿ ಮೌಲ್ಯ ಅಧಃಪತನಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ- ಚೀನಾ ವ್ಯಾಪಾರ ಸಮರ ಮತ್ತಷ್ಟು ತಾರಕಕ್ಕೇರಿದೆ. ಪಾದರಕ್ಷೆ, ಸ್ಮಾರ್ಟ್ ವಾಚ್, ಫ್ಲಾ ್ಯ್ ಟಿವಿ ಸೇರಿ ಚೀನಾದ ವಿವಿಧ ಸರಕುಗಳ ಮೇಲೆ ಅಮೆರಿಕ ಶೇ. 15 ತೆರಿಗೆ ವಿಧಿಸಿದೆ. ಇದೇ ವೇಳೆಗೆ ಅಮೆರಿಕದ ಕಚ್ಚಾ ತೈಲದ ಮೇಲೆ ಚೀನಾ ಹೊಸದಾಗಿ ಸುಂಕ ಹೇರಿದೆ.

ಚಿನಿವಾರ ಪೇಟೆಯಲ್ಲಿ ಚೇತರಿಕೆ

ದೆಹಲಿ ಚಿನಿವಾರಪೇಟೆಯಲ್ಲಿ ಬಂಗಾರದ ಬೆಲೆ -ಠಿ; 538 ಹೆಚ್ಚಳ ವಾಗಿ ಅಪರಂಜಿ ಚಿನ್ನದ ದರ 10.ಗ್ರಾಂಗೆ -ಠಿ; 38,987ಕ್ಕೆ ತಲು ಪಿದೆ. ಬೆಳ್ಳಿ ದರ -ಠಿ; 1,080 ಏರಿಕೆಯಾಗಿ, ಪ್ರತಿ ಕೆ.ಜಿ.ಗೆ -ಠಿ; 47, 960ಕ್ಕೆ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,530 ಡಾಲರ್, ಪ್ರತಿ ಔನ್ಸ್ ಬೆಳ್ಳಿ 18.50 ಇತ್ತು.

ಕರಗಿದ -ಠಿ; 2.61 ಲಕ್ಷ ಕೋಟಿ ಸಂಪತ್ತು

ಷೇರುಪೇಟೆ ತಲ್ಲಣದಿಂದ ಒಂದೇ ದಿನದಲ್ಲಿ ಹೂಡಿಕೆದಾರರ -ಠಿ; 2.61 ಕೋಟಿ ಮೌಲ್ಯದ ಸಂಪತ್ತು ಕರಗಿದೆ. ಮುಂಬೈನಲ್ಲಿ ಗಣೇಶ ಹಬ್ಬದ ಸಡಗರಕ್ಕೆ ಇದು ದೊಡ್ಡ ಹೊಡೆತ ನೀಡಿದೆ.

ಕುಸಿತಕ್ಕೆ ಕಾರಣ

  • ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಇಳಿಕೆ
  • ಕೈಗಾರಿಕೆ, ಉತ್ಪಾದನೆ ಇನ್ನಿತರ ಅಂಕಿ- ಅಂಶ ಇಳಿಕೆ
  • ರೂಪಾಯಿ ಮೌಲ್ಯ ಕುಸಿತ
  • ವಿದೇಶಿ ಹೂಡಿಕೆ ದಾರರಿಂದ ಷೇರುಗಳ ಮಾರಾಟ

Leave a Reply

Your email address will not be published. Required fields are marked *