More

    ಸಿಎಎ ಪ್ರತಿಭಟನೆ, ಗಲಭೆಗೆ ಬಳಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ 120 ಕೋಟಿ ರೂ?!

    ನವದೆಹಲಿ: ಸಂಸತ್​ನಲ್ಲಿ ಪೌರತ್ವ ತಿದ್ದಪಡಿ ಕಾಯ್ದೆ ಮಂಡನೆಯಾದ ದಿನದಿಂದ ಇಂದಿನವರೆಗೆ ವಾದ ವಿವಾದಗಳು ನಡೆಯುತ್ತಲೇ ಇವೆ. ದೇಶಾದ್ಯಂತ ಪ್ರತಿಭಟನೆಗಳೂ ನಡದಿವೆ.

    ಇತ್ತೀಚಿನ ತನಿಖೆಯಲ್ಲಿ ಆಘಾತಕಾರಿ ಹೊಸ ವಿಷಯಗಳು ಬಹಿರಂಗಗೊಂಡಿದ್ದು, ಪ್ರತಿಭಟನೆ ವೇಳೆ, ಹಿಂಸಾಚಾರ, ಅಗ್ನಿಸ್ಪರ್ಶ, ವಿಧ್ವಂಸಕ ಕೃತ್ಯಗಳ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಇದೆ. ಗಲಭೆ ನಡೆಸಲು ಪಿಎಫ್‌ಐ ಸಂಘಟನೆಯು ಅಂದಾಜು 120 ಕೋಟಿ ರೂಪಾಯಿ ವ್ಯಯಿಸಿದೆ ಎಂದು ಇಂಡಿಯಾಟಿವಿ ವರದಿ ಮಾಡಿದೆ.

    ಪೌರತ್ವ ತಿದ್ದಪಡಿ ಕಾಯ್ದೆ ಪ್ರತಿಭಟನೆ ಹಾಗೂ ಗಲಭೆಗಳ ಹಿಂದಿನ ಸತ್ಯ ಬಯಲಾಗಿದೆ. ಇಂತಹ ಗಲಭೆಗಳಿಗೆ ಧನಸಹಾಯ ನೀಡುವ ಯೋಜಿತವಾದ ಜಾಲವೇ ಇದೆ ಎಂದು ತನಿಖೆಯಿಂದ ತಿಳಿದುಬಂದಿದೆ.

    ಉತ್ತರ ಪ್ರದೇಶದಲ್ಲಿ ಪೊಲೀಸರಿಗೆ ಈ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ವರದಿ ಪ್ರಕಾರ, ಇದಕ್ಕಾಗಿ ಪಿಎಫ್‌ಐ ಹೆಸರಿನಲ್ಲಿ ವಿವಿಧ 27 ಬ್ಯಾಂಕ್​ಗಳಲ್ಲಿ ಖಾತೆ ತೆರೆದಿದೆ. ಪಿಎಫ್​ಐ ಅಂಗ ಸಂಘಟನೆಯಾದ ರಿಹ್ಯಾಬ್​ ಇಂಡಿಯಾ ಫೌಂಡೇಷನ್​ ಹೆಸರಿನಲ್ಲಿ 9 ಖಾತೆಗಳಿವೆ. ಇನ್ನು ಪಿಎಫ್​ಐ ಮತ್ತು ಬೇರೆ ಬೇರೆಯವರ ಹೆಸರಿನಲ್ಲಿ ಒಟ್ಟು 37 ಖಾತೆಗಳನ್ನು ತೆರೆಯಲಾಗಿದೆ.

    ಒಟ್ಟು ವಿವಿಧ ಬ್ಯಾಂಕಿನ 73 ಖಾತೆಗಳ ಪರಿಶೀಲನೆಯಿಂದ ತನಿಖೆಗೆ ಹೆಚ್ಚು ಮಾಹಿತಿ ಸಿಕ್ಕಿದೆ. ಈ ಖಾತೆಗಳಿಗೆ 120 ಕೋಟಿ ರೂಪಾಯಿ ಜಮೆ ಆಗಿತ್ತು. ಸ್ವಲ್ಪ ಮಾತ್ರ ಉಳಿಸಿ, ಉಳಿದ ಎಲ್ಲ ಮೊತ್ತವನ್ನು ಬಳಸಲಾಗಿದೆ.

    ಸಂಸತ್​ನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡನೆಯಾದ ಡಿಸೆಂಬರ್​ 4ರಿಂದಲೇ ಈ ಬ್ಯಾಂಕ್​ ಖಾತೆಗಳಿಗೆ ಹಣ ಹರಿದು ಬಂದಿದೆ. ಹೀಗೆ ಬಂದ ಹಣದ ಮೂಲ ಯಾವುದು ಎಂದು ಯಾರಿಗೂ ತಿಳಿದಿಲ್ಲ. ಆದರೆ ಹೀಗೆ ಖಾತೆಗೆ ಜಮಾ ಮಾಡುವಾಗ 50 ಸಾವಿರ ರೂಪಾಯಿಗಿಂತ ಕಡಿಮೆ ಹಣ ಹಾಕಲು ತಿಳಿಸಲಾಗಿತ್ತು.

    ಹೀಗೆ ಜಮಾ ಮಾಡಿದ ಹಣದ ದಿನಾಂಕ ಮತ್ತು ಗಲಭೆಯಾದ ದಿನಗಳು ಕೂಡ ತಾಳೆಯಾಗಿವೆ. ಇದರಿಂದ ದೇಶದಲ್ಲಿ ನಡೆದ ಗಲಭೆಗಳಿಗೆ ಮತ್ತು ಪಿಎಫ್​ಐ ಸಂಘಟನೆಗೆ ನೇರ ಸಂಬಂಧವಿದೆ ಎಂದು ತಿಳಿದುಬರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts