ಜೀತಪದ್ಧತಿ ಪತ್ತೆ ಹಚ್ಚಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜೀತ ಕಾರ್ವಿುಕ ಪದ್ಧ್ದ ಸಮೀಕ್ಷೆ ನಡೆಸುವ ಬಗ್ಗೆ ಅಧಿಕಾರಿಗಳು ಅನಾಸಕ್ತಿ ತೋರಿಸುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಎಚ್.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಪಂಚಾಯತ್​ರಾಜ್ ಇಲಾಖೆ ಅಧಿಕಾರಿಗಳಿಗೆ ಗುರುವಾರ ಏರ್ಪಡಿಸಿದ್ದ ಜೀತ ಪದ್ಧತಿ ನಿಮೂಲನೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಜೀತ ಕಾರ್ವಿುಕ ಪದ್ಧತಿ ನಿಮೂಲನೆ ಕಾಯ್ದೆ ಬಗ್ಗೆ ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಜೀತ ಕಾರ್ವಿುಕ ಪದ್ಧತಿ ಬಗ್ಗೆ ತನಿಖೆ ನಡೆಸಬೇಕಲ್ಲದೆ ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಮಹಜರು ನಡೆಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಂಟರ್ ನ್ಯಾಶನಲ್ ಜಸ್ಟೀಸ್ ಮಿಷನ್ ಸಂಸ್ಥೆಯ ಸಹ ನಿರ್ದೇಶಕ ವಿಲಿಯಂ ಕ್ರಿಸ್ಟೋಫರ್ ಉಪನ್ಯಾಸ ನೀಡಿ, ಮೇಲ್ನೋಟಕ್ಕೆ ಗಮನಿಸಿದರೆ ಜೀತ ಪದ್ಧತಿ ಕಾಣಿಸದು. ಅಧಿಕಾರಿಗಳು ಸಾಮಾಜಿಕ ಕಳಕಳಿ ಹಾಗೂ ಮಾನವೀಯ ನೆಲೆಗಟ್ಟಿನಿಂದ ಸಮಸ್ಯೆಯ ಆಳಕ್ಕೆ ಇಳಿದು ಜೀತಪದ್ಧತಿ ಪತ್ತೆ ಹಚ್ಚಬೇಕು ಎಂದು ಸಲಹೆ ನೀಡಿದರು.

ಸಾಲ ಅಥವಾ ಅನಿವಾರ್ಯತೆ ಕಾರಣದಿಂದ ತನ್ನ ಹಕ್ಕು ಮತ್ತು ಸ್ವಾತಂತ್ರ್ಯ ಕಳೆದುಕೊಂಡು ಬಲವಂತವಾಗಿ ದುಡಿಯುವುದೇ ಜೀತ ಕಾರ್ವಿುಕ ಪದ್ಧ್ದ. ಅದನ್ನು ಪತ್ತೆ ಹಚ್ಚಬೇಕಾದರೆ ನಾನಾ ಅಂಶಗಳ ಬಗ್ಗೆ ವರದಿ ತಯಾರಿಸಬೇಕಾಗುತ್ತದೆ ಎಂದು ಹೇಳಿದರು.

1976ರಲ್ಲಿ ಜೀತ ಪದ್ಧ್ದ ನಿಮೂಲನೆ ಕಾಯ್ದೆ ಜಾರಿಗೆ ಬಂದಿದೆ. ಅದರಂತೆ ಪ್ರತಿ ವರ್ಷ ಜೀತದಾಳುಗಳ ಸಮೀಕ್ಷೆ ನಡೆಸಬೇಕು. ಆದರೆ, ರಾಜ್ಯದಲ್ಲಿ 4 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಯುತ್ತಿದೆ. ತರಬೇತಿ, ಮಾರ್ಗದರ್ಶನ ಇಲ್ಲದ ಕಾರಣ ಸಮೀಕ್ಷೆ ಸಹ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ. ವಿಶ್ವದಲ್ಲಿ 47 ಬಿಲಿಯನ್ ಜೀತ ಕಾರ್ವಿುಕರಿದ್ದಾರೆ. ನಮ್ಮ ರಾಜ್ಯದಲ್ಲಿ 2008ರ ಸಮೀಕ್ಷೆ ಪ್ರಕಾರ 68 ಸಾವಿರ ಮಂದಿ ಜೀತದಾಳುಗಳಿದ್ದಾರೆ ಎಂದರು.

ಜೀತ ಕಾರ್ವಿುಕರಲ್ಲಿ ನಿರ್ದಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಕ್ಕೆ ಸೇರಿದವರೇ ಹೆಚ್ಚಾಗಿದ್ದಾರೆ. ಇದು ಮುಂಗಡ ಹಣ ಕೊಡುವುದು, ಉತ್ತರಾಧಿಕಾರದಿಂದ ಬರಬಹುದು, ರೂಢಿಗತ ಮತ್ತು ಸಾಮಾಜಿಕ ಬಾಧ್ಯತೆಯಿಂದ ಬರಬಹುದು ಎಂದು ಹೇಳಿದರು.

ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ಕಾರ್ವಿುಕ ಇಲಾಖೆಯ ಸಹಾಯಕ ನಿರ್ದೇಶಕ ಜಾನ್ಸನ್, ಐಜೆಎಂ ಸಂಸ್ಥೆಯ ವಿಷಯ ಸಂಪನ್ಮೂಲ ವ್ಯಕ್ತಿ ಇಂದ್ರಜಿತ್ ಪವಾರ್, ಎಲ್ಲ ತಹಸೀಲ್ದಾರರು, ತಾಪಂ ಇಒಗಳು, ಪಿಡಿಒಗಳು, ಕಂದಾಯ ನಿರೀಕ್ಷಕರು ಕಾರ್ಯಾಗಾರದಲ್ಲಿದ್ದರು.

ವರದಿ ನೋಡಿದರೆ ಆಶ್ಚರ್ಯ

ಅಧಿಕಾರಿಗಳು ಈ ಜಿಲ್ಲೆಯಲ್ಲಿ ಜೀತಪದ್ಧತಿಯೇ ಇಲ್ಲ ಎಂದು ವರದಿ ನೀಡಿದ್ದಾರೆ. ಅದು ನಮಗೆ ಆಶ್ಚರ್ಯ ತಂದಿದೆ. ಈ ವರದಿಯಲ್ಲಿ ಅರ್ಥವಿಲ್ಲ. ಇದರರ್ಥ ಜಿಲ್ಲೆಯಲ್ಲಿ ಬಡವರೇ ಇಲ್ಲ, ಶೋಷಣೆ ಇಲ್ಲ, ಕಾರ್ವಿುಕರೇ ಇಲ್ಲ ಎಂದಾಗುತ್ತದೆ. ನಮ್ಮಲ್ಲಿ ಕಳಕಳಿ ಮತ್ತು ಬದ್ಧತೆ ಇದ್ದಲ್ಲಿ ಜೀತ ಪದ್ಧತಿ ಪತ್ತೆಹಚ್ಚಿ ನಿಮೂಲನೆ ಮಾಡಬಹುದು ಎಂದು ವಿಲಿಯಂ ಕ್ರಿಸ್ಟೋಫರ್ ಹೇಳಿದರು.

ಜೀತಪದ್ಧತಿ ನಾನಾ ಮುಖವಾಡದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಕನಿಷ್ಠ ವೇತನ ಅಥವಾ ವೇತನವನ್ನೇ ನೀಡದೆ ದುಡಿಸಿಕೊಳ್ಳುವುದು, ಬೇರೆ ಕಡೆ ಕೆಲಸ ಮಾಡಲು ನಿರ್ಬಂಧ ಹೇರುವುದು, ಮುಕ್ತ ಸಂಚಾರಕ್ಕೆ ಅವಕಾಶ ನೀಡದಿರುವುದು, ಮಾರುಕಟ್ಟೆ ಮೌಲ್ಯಕ್ಕೆ ಖರೀದಿ ಅಥವಾ ಮಾರಾಟ ಮಾಡಲು ಸಾಧ್ಯವಾಗದಿರುವುದು ಜೀತ ಪದ್ಧತಿಯ ಲಕ್ಷಣ.

| ವಿಲಿಯಂ ಕ್ರಿಸ್ಟೋಫರ್, ಸಹ ನಿರ್ದೇಶಕ, ಐಎನ್​ಜೆ ಮಿಷನ್