ಸೊರಬ: ಸಾಮಾಜಿಕ, ಪೌರಾಣಿಕ ನಾಟಕಗಳು ಜನರಿಗೆ ಮನರಂಜನೆ ನೀಡುವ ಜತೆಗೆ ಅದರ ಮೌಲ್ಯಗಳು ಸಮಾಜದಲ್ಲಿ ಜೀವನದ ಮಹತ್ವವನ್ನು ಸಾರುತ್ತವೆ ಎಂದು ತಾಪಂ ಮಾಜಿ ಅಧ್ಯಕ್ಷ ಎಚ್.ಗಣಪತಿ ಹುಲ್ತಿಕೊಪ್ಪ ಹೇಳಿದರು.
ತಾಲೂಕಿನ ಕಮರೂರು- ಭದ್ರಾಪುರ ಗ್ರಾಮದ ಶ್ರೀ ಗ್ರಾಮದೇವರ ಮತ್ತು ಪರಿವಾರ ದೇವರ ಪಂಚಲೋಹ ಹಾಗೂ ನಾಗದೇವರ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನಾಟಕಗಳು ಕುಟುಂಬದ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಾಟಕಗಳು ಸಾಮಾಜಿಕ ಚಿಂತನೆಗೆ ಸಹಕಾರಿ. ಕಲಾ ಕ್ಷೇತ್ರದಲ್ಲಿ ಸಾಕಷ್ಟು ಕಲಾವಿದರಿದ್ದಾರೆ ಅವರನ್ನು ಗುರುತಿಸುವ ಕೆಲಸವಾಗಬೇಕು. ಎಲ್ಲ ಕಲೆಗಳನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು ಎಂದರು.
ಲೋಕಕಲ್ಯಾಣಕ್ಕಾಗಿ ಗ್ರಾಮದೇವರು ಮತ್ತು ಪರಿವಾರ ದೇವರುಗಳ ಪ್ರಾಣ ಪ್ರತಿಷ್ಠಾಪನೆಯನ್ನು ಕಮರೂರು ಭದ್ರಾಪುರ ಗ್ರಾಮಸ್ಥರು ಒಗ್ಗೂಡಿ ಆಯೋಜಿಸಿದ್ದು ಹೆಮ್ಮೆಯ ಸಂಗತಿ ಎಂದರು.
ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರಪ್ಪ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಗ್ರಾಮೀಣ ಭಾಗಗಳಲ್ಲಿ ನಡೆಯುವಂತಹ ಸಾಮಾಜಿಕ ಕಾರ್ಯಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಕಮರೂರು ಗ್ರಾಮದ ಶ್ರೀ ಮಾರಿಕಾಂಬ ಕಲಾ ನಾಟ್ಯಾ ಸಂಘದಿಂದ ರೌಡಿ ಅರ್ಥಾತ್ ಛಲ ಸಾಧಿಸಿದ ಕುಲಪುತ್ರ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಬೆನ್ನೂರು ಗ್ರಾಪಂ ಅಧ್ಯಕ್ಷ ಮಾರಪ್ಪ, ಗ್ರಾಮ ಸಮಿತಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಎನ್. ಕೊಂಡ್ಲಿ, ಉಪಾಧ್ಯಕ್ಷ ಮಂಜು ಎಲ್. ಭೋವಿ, ಕಾರ್ಯದರ್ಶಿ ಅಣ್ಣಪ್ಪ, ಹರೀಶಿ ಗ್ರಾಪಂ ಮಾಜಿ ಅಧ್ಯಕ್ಷ ಉಮಾಪತಿ ನಾಯ್ಕ, ಪ್ರಮುಖರಾದ ವಿಷ್ಣು ನಾಯ್ಕ, ಅಣ್ಣಪ್ಪ, ವಿನಾಯಕ, ರಾಜು, ತಿಮ್ಮಪ್ಪ, ಉಮೇಶ್, ಆನಂದ, ಸಣ್ಣಪ್ಪ, ಪರಶುರಾಮ್, ಶಂಕರ ಇತರರಿದ್ದರು.
ನಾಟಕಗಳಿಂದ ಜೀವನದ ಮಹತ್ವ ಪರಿಚಯ

You Might Also Like
ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango
mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…
ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ.. Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಅಂಗಡಿಗಳು ವ್ಯಾಪಾರದಿಂದ…
ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice
Sugarcane Juice: ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…