ವಿಜಯವಾಣಿ ಸುದ್ದಿಜಾಲ ಧಾರವಾಡ
ಹಬ್ಬ-ಹರಿದಿನಗಳ ಆಚರಣೆಯಿಂದ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಪರಿಚಯವಾಗುತ್ತದೆ. ಮಕರ ಸಂಕ್ರಾಂತಿ ಹಬ್ಬ ಸೂರ್ಯನಿಗೆ ಸಮಪಿರ್ತವಾದ ಹಬ್ಬ. ಇದು ಸಮೃದ್ಧಿಯ ಸಂಕೇತ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಿ ಮಕರ ರಾಶಿಗೆ ಪ್ರವೇಶಿಸುವುದರಿಂದ ಈ ಹಬ್ಬವನ್ನು ಮಕರ ಸಂಕ್ರಮಣ ಎನ್ನಲಾಗುತ್ತದೆ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಸಿಬಿಎಸ್ಇ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅವರು ಮಾತನಾಡಿದರು.
ಸಂಕ್ರಾಂತಿ ಹಬ್ಬ ಧಾಮಿರ್ಕವಾಗಿ ಅಲ್ಲದೇ, ವೈಜ್ಞಾನಿಕ ದೃಷ್ಟಿಕೋನದಿಂದಲೂ ಪ್ರಾಮುಖ್ಯತೆ ಪಡೆದಿದೆ. ಇದು ಸಂಬಂಧಗಳನ್ನು ಬೆಸೆಯುವ ಹಬ್ಬ. ಸಿಹಿ ಹಂಚುವ ಮೂಲಕ ಮಕ್ಕಳು ತಂದೆ-ತಾಯಿ, ಗುರುಗಳು ಹಾಗೂ ಗೆಳೆಯರೊಂದಿಗೆ ಭಾಂಧವ್ಯವನ್ನು ಗಟ್ಟಿಯಾಗಿಸಿಕೊಳ್ಳಲಿ ಎಂದರು.
ನಂತರ ಮಕ್ಕಳಿಗೆ ಕರಿ ಎರೆದು ಹಬ್ಬದ ಊಟ ಉಣಬಡಿಸಿದರು. ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಕ್ರಾಂತಿ ಸಂತೆಯಲ್ಲಿ ಹಬ್ಬಕ್ಕೆ ಬೇಕಾಗುವ ವಿವಿಧ ರೀತಿಯ ವಸ್ತುಗಳು, ಆಹಾರ ಪದಾರ್ಥಗಳನ್ನು ಸ್ವ-ಉದ್ಯೋಗ ಮಾಡುತ್ತಿರುವ ಮಹಿಳೆಯರು ವಿದ್ಯಾರ್ಥಿಗಳ ಸಹಾಯದಿಂದ ಮಾರಾಟ ಮಾಡಿದರು. ಮಕ್ಕಳು ಸಾಂಸ್ಕೃತಿಕ ಉಡುಪುಗಳನ್ನು ತೊಟ್ಟು ಗಾಳಿಪಟಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದರು.
ಶಾಲೆ ಪ್ರಾಚಾರ್ಯೆ ಸಾಧನಾ ಎಸ್., ಐಟಿಐ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಪಾಲಕರು, ಶಿಕ್ಷಕರು, ಸಿಬ್ಬಂದಿ, ಇತರರು ಇದ್ದರು.
ಹಬ್ಬಗಳಿಂದಲೇ ಭಾರತದ ಸಂಸ್ಕೃತಿಯ ಪರಿಚಯ

You Might Also Like
ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla
Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್ಬೆರಿ ಎಂದು ಕರೆಯಲಾಗುತ್ತದೆ. ಇದು…
ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips
Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…
ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep
Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…