ಹೈದರಾಬಾದ್: ಸಾಧು-ಸಂತರ ಸೋಗಿನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಚಾರ ಮಾಡುತ್ತ, ಅಮಾಯಕರನ್ನು ವಂಚಿಸಿ ಹಣ ಮಾಡಿಕೊಳ್ಳುತ್ತಿದ್ದುದಲ್ಲದೆ ಹವಾಲಾ ಸಂಪರ್ಕವನ್ನೂ ಹೊಂದಿದ್ದ ನಕಲಿ ಬಾಬಾಗಳ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ಹೀಗೆ ಒಟ್ಟು ನಾಲ್ವರು ಫೇಕ್ ಬಾಬಾಗಳು ಪೊಲೀಸರ ವಶವಾಗಿದ್ದಾರೆ.
ಬಂಧಿತ ನಾಲ್ವರ ಪೈಕಿ ಮೂವರು ಹವಾಲಾ ದಂಧೆಯಲ್ಲೂ ತೊಡಗಿದ್ದರು. ಸಾಧು-ಸಂತರ ವೇಷ ಧರಿಸಿ ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತಿದ್ದ ಇವರು, ಅಮಾಯಕರನ್ನು, ದುರ್ಬಲ ಮನಸ್ಸಿನವರನ್ನು ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದರು. ಸರ್ಪದೋಷ, ನಾಗದೋಷ ಎಂದೆಲ್ಲ ಹೆದರಿಸಿ ಜೀವಭಯ ಹುಟ್ಟಿಸುತ್ತಿದ್ದ ಇವರು, ಬಳಿಕ ಅದನ್ನು ಪರಿಹರಿಸುವ ಮಂತ್ರತಂತ್ರಗಳ ನೆಪದಲ್ಲಿ ಜನರಿಂದ ಹಣ ಕೀಳುತ್ತಿದ್ದರು.
ಈ ನಾಲ್ವರೂ ರಾಜಸ್ಥಾನದ ಸಿರೋಹಿ ಜಿಲ್ಲೆಯವರಾಗಿದ್ದು, ಹೈದರಾಬಾದ್ನಲ್ಲಿ ಸಿಕ್ಕಿಬಿದ್ದಿದ್ದಾರೆ. 53 ವರ್ಷದ ಉದ್ಯಮಿಯೊಬ್ಬರು ತಮಗೆ 37.71 ಲಕ್ಷ ವಂಚನೆ ಎಸಗಿದ ಸಂಬಂಧ ನೀಡಿದ್ದ ದೂರಿನ ಮೇರೆಗೆ ಇವರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ರಚಕೊಂಡ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಜೇಮ್ಸ್’ ಚಿತ್ರದ ನಿರ್ಮಾಪಕ ಅಸ್ವಸ್ಥ; ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
ದೂರುದಾರ ವ್ಯಕ್ತಿ 2020ರ ನವೆಂಬರ್ನಲ್ಲಿ ಬೈಕ್ನಲ್ಲಿ ಬರುವಾಗ ಮಾರ್ಗಮಧ್ಯೆ ಹಾವು ಅಡ್ಡ ಬಂದು ಬಿದ್ದು ಗಾಯಗೊಂಡಿದ್ದರು. ಬಳಿಕ 2020ರ ಡಿಸೆಂಬರ್ನಲ್ಲಿ ಬಂಧಿತ ಆರೋಪಿಗಳ ಪೈಕಿ ಇಬ್ಬರು, ದೂರುದಾರ ವ್ಯಕ್ತಿಯ ಕಚೇರಿ ಬಳಿ ತೆರಳಿ ಹೋಗಿದ್ದರು. ಅಲ್ಲಿ ಇವರನ್ನು ನೋಡಿ ಸರ್ಪದೋಷ ಇರುವುದಾಗಿ ಹೇಳಿದ್ದರು.
ಇದನ್ನೂ ಓದಿ: ಕಬ್ಬಿನ ಹಾಲು ತೆಗೆಯುವ ಯಂತ್ರದಲ್ಲಿ ರಕ್ತ; ಬಟ್ಟೆ ಸಿಲುಕಿ ಮಹಿಳೆಯ ಸಾವು..
ನಂಬಿದ ದೂರುದಾರರಿಗೆ ಜೀವಕ್ಕೆ ಅಪಾಯ ಇದೆ ಎಂದು ಭಯ ಹುಟ್ಟಿಸಿ, ಅದರ ಪರಿಹಾರಕ್ಕೆ ನಾವು ಹೇಳಿದ ಪೂಜೆ ಮಾಡಿಸಬೇಕು, ಅದಕ್ಕೆ 40 ಸಾವಿರ ಆಗುತ್ತೆ ಅಂತ ಹೇಳಿದ್ದರು. ಬಳಿಕ 2022ರ ಫೆಬ್ರವರಿಯವರೆಗೂ ಒಂದಲ್ಲ ಒಂದು ರೀತಿಯಲ್ಲಿ ಹೆದರಿಸಿ 37.71 ಲಕ್ಷ ಪಡೆದಿದ್ದರು. ಅಲ್ಲದೆ ದೂರುದಾರ ವ್ಯಕ್ತಿಯ ಖಾತೆಗೆ ಹವಾಲಾ ಹಣ ಹಾಕಿಸಿ, ವಹಿವಾಟು ನಡೆಸಿ ಪೀಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯಾದ್ಯಂತ ಭಾರಿ ಮಳೆ, ಶಾಲೆಗಳಿಗೂ ರಜೆ: ಎಲ್ಲೆಲ್ಲಿ ಎಷ್ಟು ದಿನ? ಇಲ್ಲಿದೆ ಮಾಹಿತಿ..
ಸಾಕ್ಷ್ಯಚಿತ್ರದಲ್ಲಿ ‘ಕಾಳಿ’ಗೆ ಅವಮಾನ; ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ…