ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌

ನವದೆಹಲಿ: ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ಪ್ರಮುಖ ಆರೋಪಿ ಮೆಹುಲ್‌ ಚೋಕ್ಸಿಗೆ ಇಂಟರ್‌ಪೊಲ್‌ ರೆಡ್‌ ಕಾರ್ನರ್‌ ನೋಟಿಸ್ ಜಾರಿ ಮಾಡಿದೆ.

ಪಿಎನ್‌ಬಿ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ ಚೋಕ್ಸಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡುವಂತೆ ಕೇಂದ್ರ ಅಪರಾಧ ತನಿಖಾ ದಳ(ಸಿಬಿಐ) ಇಂಟರ್‌ಪೋಲ್‌ಗೆ ಮನವಿ ಮಾಡಿತ್ತು.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಮುಂಬೈ ನ್ಯಾಯಾಲಯದಲ್ಲಿ ಚೋಕ್ಸಿ ವಿರುದ್ಧ ಅಪರಾಧ ಪಟ್ಟಿ ಸಲ್ಲಿಸಿದ್ದವು.

ಅಮೆರಿಕದ ಅಧಿಕಾರಿಗಳು ಚೋಕ್ಸಿಯನ್ನು ಪತ್ತೆಹಚ್ಚಿ ಭಾರತಕ್ಕೆ ತಿಳಿಸುವ ಸಾಧ್ಯತೆಗಳಿವೆ. ಚೋಕ್ಸಿಯ ಚಲನವಲನಗಳನ್ನು ಗಮನಿಸಿ ದೇಶದಿಂದ ಹೊರಹೋಗದಂತೆ ತಡೆಯಲಾಗುತ್ತದೆ ಎನ್ನಲಾಗಿದೆ. 59 ವರ್ಷದ ಚೋಕ್ಸಿ ಕಳೆದ ಜನವರಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಭಾರತವನ್ನು ತೊರೆದವರು ಅಮೆರಿಕಕ್ಕೆ ತೆರಳಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸೋದರಳಿಯ ನೀರವ್‌ ಮೋದಿ ಅವರೊಂದಿಗೆ ಪರಾರಿಯಾಗಿದ್ದ ಚೋಕ್ಸಿ ಸದ್ಯ ಆಂಟಿಗುವಾದಲ್ಲಿದ್ದು, ಅವರನ್ನು ಭಾರತಕ್ಕೆ ಕರೆತರಲು ಸಿಬಿಐ ಅಧಿಕಾರಿಗಳ ಪ್ರಯತ್ನ ನಡೆಸುತ್ತಲೇ ಇದ್ದಾರೆ. (ಏಜೆನ್ಸೀಸ್)

ಪಿಎನ್​ಬಿ ವಂಚನೆ ಪ್ರಕರಣ: ಆರೋಪಿ ಮೆಹುಲ್‌ ಚೋಕ್ಸಿ ಇನ್ನು 3 ತಿಂಗಳಲ್ಲಿ ಭಾರತಕ್ಕೆ!