VIDEO: ತಿನ್ನಲೆಂದು ಪ್ಲೇಟ್​ಗೆ ಹಾಕಿದ್ದ ಹಸಿ ಮಾಂಸದ ತುಂಡು ಚಲಿಸಿ, ಹಾರಿ ನೆಲಕ್ಕೆ ಬಿತ್ತು…ಭಯಭೀತರಾಗಿ ಜನ ಕಿರುಚಾಡಿದರು

ಫ್ಲೋರಿಡಾ: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ರೆಸ್ಟೋರೆಂಟ್​ನಲ್ಲಿ ನಡೆದ ವಿಚಿತ್ರ ಘಟನೆಯೊಂದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು ಇದೊಂತರ ಭಯ ಹುಟ್ಟಿಸುವ ರೀತಿಯಲ್ಲಿಯೂ ಇದೆ.
ಫ್ಲೋರಿಡಾದ ರೈ ಫಿಲಿಪ್ಸ್​ ಎಂಬುವರು ಫೇಸ್​ಬುಕ್​ನಲ್ಲಿ ಒಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.

ಅದ್ಯಾವುದೋ ರೆಸ್ಟೋರೆಂಟ್​. ಒಂದು ಟೇಬಲ್​ ಮೇಲೆ ಹಲವು ಪ್ಲೇಟ್​ಗಳಲ್ಲಿ ವಿವಿಧ ತಿನಿಸುಗಳು ಇವೆ. ಅದರಲ್ಲಿ ಒಂದು ಪಾತ್ರೆಯಲ್ಲಿ ಕೋಳಿಯ ಹಸಿ ಮಾಂಸವೂ ಇತ್ತು. ಅದನ್ನು ತಿನ್ನಲೆಂದು ಪ್ಲೇಟ್​ವೊಂದಕ್ಕೆ ಹಾಕಿದ ಮರುಕ್ಷಣವೇ ಮಾಂಸದ ಒಂದು ತುಂಡು ಅಲುಗಾಡಲು ಪ್ರಾರಂಭಿಸಿತು. ನೋಡನೋಡುತ್ತಿದ್ದಂತೆ ಚಲಿಸಲು ಪ್ರಾರಂಭಿಸಿ ಟೇಬಲ್​ನಿಂದ ಹಾರಿ ನೆಲಕ್ಕೆ ಬಿತ್ತು. ಅದನ್ನು ನೋಡುತ್ತಿದ್ದಂತೆ ಆ ಟೇಬಲ್​ ಸುತ್ತ ಕುಳಿತಿದ್ದವರೆಲ್ಲ ಭಯದಿಂದ ಕೂಗಾಡಿದ್ದಾರೆ.

ಇನ್ನೇನು ಮಾಂಸವನ್ನು ತಿನ್ನಬೇಕು ಎಂದುಕೊಳ್ಳುವಷ್ಟರಲ್ಲಿ ಮಾಂಸದ ತುಂಡೊಂದು ಚಲಿಸಿದ್ದನ್ನು ನೋಡಿದವರೆಲ್ಲ ಇದೊಂದು ಭಯಾನಕ ಎಂದೇ ಹೇಳುತ್ತಿದ್ದಾರೆ. ರೈ ಫಿಲಿಪ್ಸ್ ಪೋಸ್ಟ್​ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 19 ಮಿಲಿಯನ್​ಗೂ ಹೆಚ್ಚು ವೀಕ್ಷಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಂದಿ ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋ ಮಾಡಿದ್ದು ನಾನಲ್ಲ ಎಂದು ಕೂಡ ರೈ ಫಿಲಿಪ್ಸ್​ ಹೇಳಿದ್ದಾರೆ.  ಆದರೆ ಆ ರೆಸ್ಟೋರೆಂಟ್​ ಯಾವುದು ಎಂಬುದು ತಿಳಿದುಬಂದಿಲ್ಲ. ಆದರೆ ಟೇಬಲ್​ ಮೇಲೆ ಪ್ಲೇಟ್​ಗಳ ಜತೆ ಚಾಪ್​ಸ್ಟಿಕ್​ಗಳು ವಿಡಿಯೋದಲ್ಲಿ ಕಂಡುಬಂದಿದ್ದರಿಂದ ಘಟನೆ ನಡೆದಿದ್ದು ಜಪಾನ್​, ಚೀನಾ ಅಥವಾ ಕೋರಿಯಾದ ರೆಸ್ಟೋರೆಂಟ್​ನಲ್ಲಿ ಎಂದು ನ್ಯೂಯಾರ್ಕ್​ ಮಾಧ್ಯಮವೊಂದು ವರದಿ ಮಾಡಿದೆ.

ವಿಡಿಯೋ ನೋಡಿದ ಅದೆಷ್ಟೋ ಮಂದಿ ತಮ್ಮದೇ ರೀತಿಯಲ್ಲಿ ವಿಮರ್ಶಿಸುತ್ತಿದ್ದಾರೆ. ಇದು ನಿಜವಾಗಿ ನಡೆದಿದ್ದಾ ಅಥವಾ ಗಿಮಿಕ್​ ಮಾಡಿದ್ದಾ ಎಂದು ಪ್ರಶ್ನಿಸಿದ್ದಾರೆ. ಈ ಮಾಂಸ ತುಂಬ ತಾಜಾ ಆಗಿದೆ. ಅದಕ್ಕೆ ಉಪ್ಪು ಸೇರಿಸಿದಾಗ ಹೀಗೆ ಆಗಿದೆ ಎಂದು ಒಬ್ಬರು ಅಭಿಪ್ರಾಯ ತಿಳಿಸಿದ್ದಾರೆ. ಕೋಳಿ ಸತ್ತ ಮೇಲೆ ಕೂಡ ಸಾಯಲು ನಿರಾಕರಿಸುತ್ತಿದೆ ಎಂದು ಹಾಸ್ಯವನ್ನೂ ಮಾಡಿದ್ದಾರೆ. ಒಟ್ಟಿನಲ್ಲಿ ಕೋಳಿ ಮಾಂಸದ ವಿಡಿಯೋವೊಂದು ಇಂಟರ್​ನೆಟ್​ನಲ್ಲಿ ಸಿಕ್ಕಾಪಟೆ ಸುದ್ದಿ ಮಾಡುತ್ತಿದೆ.

Whatttt Thaaaa Fuckkkkk 🤮… This was not recorded by me… all I did was repost the video TheShade Room

Rie Phillips ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 9, 2019