ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ದಿಗ್ವಿಜಯ 24*7 ನ್ಯೂಸ್ ವತಿಯಿಂದ ವರ್ಲ್ಡ್ ಸ್ಕ್ವೇರ್ ವಾಕಥಾನ್, ಮಹಿಳೆಯರಿಗಾಗಿಯೇ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
‘ಮಹಿಳೆಯರ ಸಮಾನತೆಗಾಗಿ ನಡಿಗೆ’ ಎಂಬ ಘೋಷಣೆಯಡಿ ಇಂದು ಬೆಳಗ್ಗೆ 6.30ಕ್ಕೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ವಾಕ್ಥಾನ್ ದೇಸಾಯಿ ಸರ್ಕಲ್ ಮೂಲಕ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದವರೆಗೂ ಸಾಗಿತು. ವಾಕಥಾನ್ ಉದ್ದಕ್ಕೂ ಹುಬ್ಬಳ್ಳಿಯ ಸುಳ್ಳ ಗ್ರಾಮದ ಕರಿಯಮ್ಮನದೇವಿ ಡೊಳ್ಳಿನ ಮೇಳ ಮೆರಗು ನೀಡಿತು. ವಾಕ್ಥಾನ್ಗೆ ಧಾರವಾಡ ಎಸಿಪಿ ಅನುಷಾ ಜಿ., ನೈಋತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ಚಾಲನೆ ನೀಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಮತ್ತು ವಿಆರ್ಎಲ್ ನಿರ್ದೇಶಕರಾದ ವಾಣಿ ಸಂಕೇಶ್ವರ ಅವರು ವಾಕಥಾನ್ನಲ್ಲಿ ಹೆಜ್ಜೆ ಹಾಕಿದರು.
ಸ್ಪರ್ಧೆಗಳ ವಿಜೇತರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನೆಲ್ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಆನಂದ ಸಂಕೇಶ್ವರ ಮತ್ತು ಶ್ರೀಮತಿ ವಾಣಿ ಸಂಕೇಶ್ವರ ಬಹುಮಾನ ವಿತರಣೆ ಮಾಡಿದರು. ಮಹಿಳೆಯರಿಗಾಗಿ ‘ವಿಜಯವಾಣಿ’ ಪ್ರಕಟಿಸಿದ ವಿಶೇಷ ಪುರವಣಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಆನಂದ ಸಂಕೇಶ್ವರ ಅವರು, ನಾಡಿನ ಎಲ್ಲ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಆನಂದ ಸಂಕೇಶ್ವರ ಹಾಗೂ ಶ್ರೀಮತಿ ವಾಣಿ ಸಂಕೇಶ್ವರ ಅವರು ಬಹುಮಾನ ವಿತರಿಸಿದರು. ಡ್ರೀಮ್ ಹೌಸ್ ಸ್ಪರ್ಧೆಯಲ್ಲಿ ಜ್ಯೋತಿ ಶೇಟ್(ಪ್ರಥಮ), ತಾನಿಯಾ ಶಹಾ (ದ್ವಿತೀಯ), ಭಾಗ್ಯಶ್ರೀ ಆನಂದ ಮತ್ತು ಸುಮಾ ರತಗಲ್ (ತೃತೀಯ) ಬಹುಮಾನ ಪಡೆದರು.
ಫ್ಯಾನ್ಸಿ ಡ್ರೆಸ್ ವಿಭಾಗದಲ್ಲಿ ಗಾಯತ್ರಿ ಮುತಾಲಿಕ (ಪ್ರಥಮ), ಅಕ್ಕಮ್ಮ ಕಂಬಳಿ (ದ್ವಿತೀಯ), ಉನ್ನತಿ ಪಾಟೀಲ (ತೃತೀಯ) ಬಹುಮಾನ ಪಡೆದರು. 3ಜಿ ಎಥ್ನಿಕ್ ಡ್ರೆಸ್ ಫ್ಯಾಶನ್ ಶೋನಲ್ಲಿ ಪೂರ್ಣಿಮಾ ಕದಂಬಿ (ಪ್ರಥಮ), ಸೀತಾಲಕ್ಷ್ಮೀ ಶಿರೋಳ (ದ್ವಿತೀಯ), ಲಲಿತಾ ಬಾರಕೇರ (ತೃತೀಯ) ಬಹುಮಾನ ಪಡೆದರು.
ಸಮಾರಂಭದಲ್ಲಿ ರಾಧಿಕಾ ಗೋಖಲೆ, ಡಾ.ಕೇತಕಿ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು. ವಾಕಥಾನ್ ಉದ್ದಕ್ಕೂ ಹುಬ್ಬಳ್ಳಿಯ ಸುಳ್ಳ ಗ್ರಾಮದ ಕರಿಯಮ್ಮನದೇವಿ ಡೊಳ್ಳಿನ ಮೇಳ ಮೆರಗು ನೀಡಿದೆ.
ಸವಾಲುಗಳ ನಡುವೆ ಮೇಲೇರುವುದೇ ಸಂಭ್ರಮ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!