ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಣೆ

ಕುಶಾಲನಗರ: ಕುಶಾಲನಗರ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಮಹಿಳಾ ಸಮಾಜದ ಆವರಣದಲ್ಲಿ ಅಧ್ಯಕ್ಷೆ ಸಲೀನ ಡಿಕುನ್ನ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸದಸ್ಯೆ ಲೀಲಾ ಬಂಗಾರಶೆಟ್ಟಿ ಉದ್ಘಾಟಿಸಿದರು.

ಡಾ.ಹರಿ.ಎ.ಶೆಟ್ಟಿ ಅವರು ಮಹಿಳಾ ದಿನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಪ್ರಕತಿ ವಿಕೋಪ ಸಂತ್ರಸ್ತರಾದ ಇಬ್ಬರು ಮಹಿಳೆಯರಿಗೆ ಸಂಘದ ವತಿಯಿಂದ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಮಹಿಳೆಯರಿಗೆ ಸಂಘದ ಆವರಣದಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಎನ್.ಎ.ಸುಶೀಲಾ, ಕಾರ್ಯದರ್ಶಿ ಬಿ.ಆರ್.ಶೈಲಾಕುಮಾರಿ, ಸಂಘದ ನಿರ್ದೇಶಕರಾದ ಕಾವೇರಿ ಕಾಳಪ್ಪ, ನಳಿನಿ ನಂಜಪ್ಪ, ಎಚ್.ಎಂ.ಜಯಮ್ಮ, ಟಿ.ಪಿ.ಜಯ, ಎಚ್.ಜೆ.ಕಮಲಮ್ಮ, ಟಿ.ಡಿ.ಯಶೋಧಮ್ಮ, ಎಂ.ಎಂ.ಆಯಿಷಾಬಿ, ಕಮಲಾ ಗಣಪತಿ, ಟಿ.ಕೆ.ಅಜಿತಕುಮಾರ್, ನಿರ್ಮಲಾ ಶಿವದಾಸ್ ಹಾಗೂ ಶಿಕ್ಷಕಿಯರು ಇದ್ದರು.