ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಾಳೆಯಿಂದ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಹಿಂದಿ ಅಧ್ಯಯನ ವಿಭಾಗ ವತಿಯಿಂದ ಫೆ. 21, 22ರಂದು ಸಮಕಾಲೀನ ಭಾರತೀಯ ಸಾಹಿತ್ಯ: ಪರಿಸರ ಚಿಂತನೆ ಕುರಿತು ಕವಿವಿ ಮಾನಸೋಲ್ಲಾಸ ಭವನದಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕವಿವಿ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್​. ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 21ರಂದು ಬೆಳಗ್ಗೆ 10.30ಕ್ಕೆ ನಾರ್ವೆಯ ಓಸ್ಲಾನ್​ ಬರಹಗಾರ ಡಾ. ಸುರೇಶ ಚಂದ್ರ ಶುಕ್ಲ ಕಾರ್ಯಕ್ರಮ ಉದ್ಘಾಟಿಸುವರು. ಕೊಲ್ಹಾಪುರದ ಸಾಹಿತಿ ಪ್ರೊ. ಅರ್ಜುನ ಚವ್ಹಾಣ ದಿಕ್ಸೂಚಿ ಭಾಷಣ ಮಾಡುವರು. ಅತಿಥಿಗಳಾಗಿ ರೂಪನಾರಾಯಣ ಸೋನಕರ, ಅನಾಮಿಕಾ ಶಿವ, ಡಾ. ಮಹೇಶ ದಿವಾಕರ, ಪ್ರೊ. ಜೆ.ವಿ. ನಾಗನ್ನವರ, ಡಾ. ಎ. ಚನ್ನಪ್ಪ, ಪ್ರೊ. ಮೃತ್ಯುಂಜಯ ಅಗಡಿ ಆಗಮಿಸುವರು ಎಂದರು.
ಮಧ್ಯಾಹ್ನ 12 ಗಂಟೆಗೆ ಸಮಕಾಲೀನ ಕಾವ್ಯ ಹಾಗೂ ಪರಿಸರ ವಿಮರ್ಶೆ, 2.30ಕ್ಕೆ ಸಮಕಾಲೀನ ಕಾದಂಬರಿಗಳಲ್ಲಿ ಸಾಹಿತ್ಯ ಹಾಗೂ ಪರಿಸರ ವಿಮರ್ಶೆ, 4 ಗಂಟೆಗೆ ಸಮಕಾಲೀನ ಕಥಾ ಸಾಹಿತ್ಯ ಹಾಗೂ ಪರಿಸರ ವಿಮರ್ಶೆ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಸಂಜೆ 6 ಗಂಟೆಗೆ ಕವಿಗೋಷ್ಠಿ ನಡೆಯಲಿವೆ ಎಂದರು.
ಫೆ. 22ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಕಡೆಗಳಲ್ಲಿ ಗೋಷ್ಠಿಗಳು, ಮಧ್ಯಾಹ್ನ 12 ಗಂಟೆಗೆ ಸಮಕಾಲೀನ ಸಾಹಿತ್ಯ ಹಾಗೂ ಪರಿಸರ ವಿಮರ್ಶೆ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಸೇವಾ ನಿವೃತ್ತಿ ಹೊಂದಿದ ಹಿಂದಿ ಪ್ರಾಧ್ಯಾಪಕರಿಗೆ ಸನ್ಮಾನಿಸಲಾಗುವುದು. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಪ್ರೊ. ಎನ್​.ವೈ. ಮಟ್ಟಿಹಾಳ, ಸಿ. ಕೃಷ್ಣಮೂರ್ತಿ ಆಗಮಿಸುವರು. ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು.
ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ರಾಜ್ಯಗಳ ಸಾಹಿತ್ಯಕಾರರು, ಪರಿಸರವಾದಿಗಳು, ಚಿಂತಕರು, ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 2 ದಶಕಗಳಿಂದ ಸರ್ಕಾರ ಪರಿಸರ ರಕ್ಷಣೆಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿವೆ. ಅವುಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಇಂತಹ ವಿಚಾರ ಸಂಕಿರಣಗಳನ್ನು ಆಯೋಜಿಸಿ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವುದೇ ಉದ್ದೇಶವಾಗಿದೆ ಎಂದರು.
ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಎ. ಚೆನ್ನಪ್ಪ, ಹಿಂದಿ ವಿಭಾಗದ ಅಧ್ಯಕ್ಷ ಪ್ರೊ. ಸೀತಾರಾಮ ಪವಾರ, ಪ್ರೊ. ಸಿ. ಕೃಷ್ಣಮೂರ್ತಿ, ಇತರರು ಇದ್ದರು.

Share This Article

ಈ ಬೇಸಿಗೆಯಲ್ಲಿ ಈ 5 ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ! ಆರೋಗ್ಯವಾಗಿರಿ… summer health

 summer health : ಬದಲಾಗುತ್ತಿರುವ ಋತುಗಳಿಗೆ ಅನುಗುಣವಾಗಿ ನಿಮ್ಮ ದೇಹವನ್ನು ಸದೃಢವಾಗಿಡಲು, ನಿಮ್ಮ ಆಹಾರಕ್ರಮದಲ್ಲಿ ಆರೋಗ್ಯಕರ…

ಕೆಟ್ಟ ಕೊಲೆಸ್ಟ್ರಾಲ್​ ಅನ್ನು ನ್ಯಾಚುರಲ್​ ಆಗಿ ಕಡಿಮೆ ಮಾಡಬೇಕಾ? ಕೇವಲ ಈ ಬದಲಾವಣೆ ಮಾಡಿ ಸಾಕು! Bad cholesterol

Bad cholesterol : ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆರೋಗ್ಯವಾಗಿರಬೇಕೆಂದರೆ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.…