PHOTOS: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ  ನಗರದ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜ್ ಬಳಿ ಬೃಹತ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ.

ಬೆಳಗ್ಗೆ 10.30ಕ್ಕೆ ಸಂಸದ ಪ್ರಹ್ಲಾದ ಜೋಶಿ ಹಾಗೂ ಎಂಎಲ್‌ಸಿ ಪ್ರದೀಪ ಶೆಟ್ಟರ್ ಉದ್ಘಾಟಿಸಿದರು.  11 ದೇಶಗಳ 34 ಖ್ಯಾತ ಗಾಳಿಪಟ ಆಟಗಾರರು ಆಗಮಿಸಿದ್ದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಟ-ಪಾಠಗಳು, ಚಿತ್ರಕಲಾ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಉತ್ಸವಕ್ಕೆ ಗೇಲ್ ಇಂಡಿಯಾ, ಆಯಿಲ್ ಇಂಡಿಯಾ, ಶ್ರೀ ಕೃಷ್ಣಾ ಡೈರಿ, ಭಾರತೀಯ ಸ್ಟೇಟ್ ಬ್ಯಾಂಕ್ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಿವೆ.
ಆಸ್ಟ್ರೇಲಿಯಾದ ಪ್ರಖ್ಯಾತ ಸಾರತ ಕಿಂಗಸ್ಲೇ ಗುನವಾರ್ಡೇನಾ, ಅಮೆರಿಕದ ಫಿಲ್ ಬಾರ್ಡರ್, ಮಲೇಶಿಯಾದ ನಸ್ರಿ ಅಹಮದ್, ಮಹದ್ ಭೋಹಾರಿ ಬಿನ್ ಕಿಪ್ಲಿ, ಬೆಲ್ಜಿಯಂನ ಮಾರ್ಕ್ ಆಂಡ್ರೆ ಪೌಲಾ ವಂಡೇನ್ ಬೊರೆಕ್, ಮತ್ಲಿಡ್ ಫೋರಿನ್, ಕೆನಡಾದ ಫೆಡ್ರಿಕ್ ಆಂಡ್ರೆ ಟೇಲರ್, ಡೊನ್ನಾ ಲಿನ್ ಟೇಲರ್, ಸಿಂಗಾಪೂರದ ಗಡೀಸ್ ವಿದಿಯತಿ, ಟರ್ಕಿಯ ರಿಕ್ಯಾಪ್, ಎಸ್ಟೋನಿಯಾದ ಆಂಡ್ರಿಯಾ ಸೋಕ್, ಜಾನಾ ಸೂಮ್, ಪೋಲೆಂಡ್ ವ್ಹಿಸ್ಟಾ ಗ್ವಿಸದತಾ, ರಿಯಾ ಸ್ವಸ್ತಿಕಾ ಅವರು ಭಾಗವಹಿಸಿದ್ದಾರೆ.