More

    ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ಫೆ.1 ರಿಂದ

    ಬಳ್ಳಾರಿ: ನಗರದ ಅಲ್ಲಂ ಭವನದಲ್ಲಿ ಫೆ.1 ಮತ್ತು 2 ರಂದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ನ ಅಧ್ಯಕ್ಷ ಬಂಡ್ರಾಳ್ ಮೃತ್ಯುಂಜಯ ಸ್ವಾಮಿ ಹೇಳಿದರು.

    ಗೊಜುರಿಯೊ ಕರಾಟೆ ಡು ಕೆನಿರೊಖಾನ್ ಇಂಡಿಯಾ ಸಹಯೋಗದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ನೇಪಾಳ್, ಶ್ರೀಲಂಕಾ, ಮಲೇಷಿಯಾ ಮತ್ತು ಇಂಡೊನೇಷಿಯಾದ ಸುಮಾರು ಒಂದು ಸಾವಿರ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ‘ವಯಸ್ಸು ಆಧರಿಸಿ ಕಟಾ ವಿಭಾಗದಲ್ಲಿ ಮತ್ತು ತೂಕ ಆಧರಿಸಿ ಫೈಟಿಂಗ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.‌ ಬ್ಲಾಕ್ ಬೆಲ್ಟ್ ಕುಮತಿ ವಿಭಾಗದಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ಸ್ಪರ್ಧಿಗಳಿಗೆ ತಲಾ 11ಸಾವಿರ ನಗದು ಬಹುಮಾನ ನೀಡಲಾಗುವುದು.

    ಕಟಾ ವಿಭಾಗದಲ್ಲಿ ಕರಾಟೆ ಪ್ರದರ್ಶನ ಮಾತ್ರ ನಡೆಯಲಿದ್ದು ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು’ ಎಂದು ತಿಳಿಸಿದರು.

    ಮಲೇಷಿಯಾದ ಕರಾಟೆ ಗ್ರಾಂಡ್ ಮಾಸ್ಟರ್ ಕೋಶಿ ಅನಂತನ್ ಸ್ಪರ್ಧೆಯ ಮುಖ್ಯ ತೀರ್ಪುಗಾರರಾಗಿದ್ದು, ಅವರೊಂದಿಗೆ ಬೆಂಗಳೂರಿನ ಡಾನಮಿಕ್, ಶ್ರೀಲಂಕಾದ ಶಿವರಾಜನ್, ನೇಪಾಳದ ಕುಂತಿ, ಹುಬ್ಬಳ್ಳಿಯ ಅನ್ನಪ್ಪ ಮಾರ್ಕಲ್ ಮತ್ತು ಗದಗದ ಪರಶುರಾಂ ಹಬೀಬ್
    ಕಾರ್ಯನಿರ್ವಹಿಸುತ್ತಾರೆ ಎಂದರು.

    ಪ್ರತಿ‌ ಎರಡು ವರ್ಷಕ್ಕೊಮ್ಮೆ ಟ್ರಸ್ಟ್ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಏರ್ಪಡಿಸುತ್ತಿದ್ದು, ನಗರದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ಆಯೋಜಿಸಿರುವುದು ವಿಶೇಷ.

    ಸ್ಪರ್ಧೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು, ಶಾಸಕ ಜಿ.ಸೋಮಶೇಖರ ರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ.ಧ್ಯಾನ ಕುರಿತ ಪುಸ್ತಕವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ‌ಸವದಿ ಬಿಡುಗಡೆ ಮಾಡಲಿದ್ದಾರೆ ಎಂದರು.

    ಸ್ವಾಗತ ಸಮಿತಿಯ ಎಸ್.ಮಲ್ಲನಗೌಡ, ಗುರುಮೂರ್ತಿ, ರವಿಚಂದ್ರನ್,‌ಕೆ.ಅಶೋಕ್, ವೀರಶೇಖರರೆಡ್ಡಿ, ಗೌರಿಶಂಕರ್, ಕಪ್ಪಗಲ್ಲು ಚಂದ್ರಶೇಖರ ಆಚಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts