More

    ಯೂಕ್ರೇನ್​-ರಷ್ಯಾ ಯುದ್ಧ: ವ್ಲಾಡಿಮಿರ್​ ಪುತಿನ್​ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದ ಐಸಿಸಿ

    ನವದೆಹಲಿ: ಯೂಕ್ರೇನ್​ನಲ್ಲಿ ನಡೆದ ಯುದ್ಧ ಅಪರಾಧಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್ ಹೊಣೆಗಾರರು ಎಂದು ಆರೋಪಿಸಿರುವ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ (ಐಸಿಸಿ) ಪುಟಿನ್​ ವಿರುದ್ಧ ಶುಕ್ರವಾರ ಬಂಧನ ವಾರೆಂಟ್​ ಜಾರಿ ಮಾಡಿದೆ.

    ರಷ್ಯಾ ತನ್ನ ನೆರೆಯ ಯೂಕ್ರೇನ್​ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದು, ಈ ಸಮಯದಲ್ಲಿ ಯೂಕ್ರೇನ್​ ಮೇಲೆ ತನ್ನ ಪಡೆಗಳು ದೌರ್ಜನ್ಯ ಎಸಗಿವೆ ಎಂಬ ಆರೋಪವನ್ನು ಪದೇಪದೆ ನಿರಾಕರಿಸಿದೆ. ಆದರೆ, ಅಲ್ಲಿನ ದೌರ್ಜನ್ಯಗಳ ಬಗ್ಗೆ ಸಾಕಷ್ಟು ವರದಿಗಳಾಗಿವೆ.

    ಇದನ್ನೂ ಓದಿ: ಆಸ್ಕರ್​ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬೆನ್ನಲ್ಲೇ ಅಮಿತ್​ ಷಾ ಭೇಟಿ ಮಾಡಿದ ರಾಮ್​ ಚರಣ್!​

    ಮಕ್ಕಳನ್ನು ಕಾನೂನುಬಾಹಿರವಾಗಿ ಗಡಿಪಾರು ಮಾಡಿದ ಮತ್ತು ಯೂಕ್ರೇನ್ ಪ್ರದೇಶದಿಂದ ರಷ್ಯಾದ ಒಕ್ಕೂಟಕ್ಕೆ ಜನರನ್ನು ಕಾನೂನುಬಾಹಿರವಾಗಿ ವರ್ಗಾಯಿಸಿರುವ ಶಂಕೆಯ ಮೇಲೆ ಪುತಿನ್ ಅವರನ್ನು ಬಂಧಿಸುವಂತೆ ಐಸಿಸಿ ಯೂಕ್ರೇನ್‌ಗೆ ನೀಡಿದ ತನ್ನ ಮೊದಲ ವಾರೆಂಟ್‌ನಲ್ಲಿ ತಿಳಿಸಿದೆ.

    ಈ ವಾರದ ಆರಂಭದಲ್ಲೇ ನ್ಯಾಯಾಲಯವು ವಾರಂಟ್‌ಗಳನ್ನು ಹೊರಡಿಸುವ ನಿರೀಕ್ಷೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು. ನ್ಯಾಯಾಲಯವು ಅದೇ ಆರೋಪದ ಮೇಲೆ ಪ್ರತ್ಯೇಕವಾಗಿ ಮಕ್ಕಳ ಹಕ್ಕುಗಳ ರಷ್ಯಾ ಕಮಿಷನರ್ ಮರಿಯಾ ಲ್ವೋವಾ-ಬೆಲೋವಾ ಅವರಿಗೂ ವಾರಂಟ್ ಹೊರಡಿಸಿದೆ.

    ಐಸಿಸಿ ಪ್ರಾಸಿಕ್ಯೂಟರ್ ಆಗಿರುವ ಕರೀಮ್ ಖಾನ್ ಅವರು ಒಂದು ವರ್ಷದ ಹಿಂದೆಯೇ ಯೂಕ್ರೇನ್​ನಲ್ಲಿ ಸಂಭವನೀಯ ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧಗಳ ತನಿಖೆಯನ್ನು ಪ್ರಾರಂಭಿಸಿದರು. ಯೂಕ್ರೇನ್‌ಗೆ ನಾಲ್ಕು ಬಾರಿ ಪ್ರವಾಸ ಮಾಡಿದ ಸಮಯದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಗುರಿಯಾಗಿಸಿಕೊಂಡು ನಡೆದಿರುವ ದೌರ್ಜನ್ಯಗಳ ಬಗ್ಗೆ ಹೆಚ್ಚು ಗಮನವಹಿಸಿ, ವರದಿ ತಯಾರಿಸಿದರು.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಮಹಡಿಯಿಂದ ಬಿದ್ದು ಗಗನಸಖಿ ಸಾವು ಪ್ರಕರಣ: ಕೊನೆಗೂ ತಪ್ಪೊಪ್ಪಿಕೊಂಡ ಪ್ರಿಯಕರ

    ಇದೀಗ ನ್ಯಾಯಾಲಯವು ಪುತಿನ್​ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು, ಅವರ ವಿರುದ್ಧ ಬಂಧನ ವಾರೆಂಟ್​ ಜಾರಿ ಮಾಡಿದೆ. (ಏಜೆನ್ಸೀಸ್​)

    ರಷ್ಯಾ ಅಧ್ಯಕ್ಷ ಪುತಿನ್​ ಬದುಕೋದು ಮೂರೇ ವರ್ಷ: ಆತಂಕಕಾರಿ ರಹಸ್ಯ ಬಿಚ್ಚಿಟ್ಟ ಗುಪ್ತಚರ ಅಧಿಕಾರಿ!

    70ನೇ ವಯಸ್ಸಿಗೆ ತಂದೆಯಾಗುತ್ತಿದ್ದಾರೆ ಪುಟಿನ್​: ಪ್ರೇಯಸಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಕೋಪಗೊಂಡ ರಷ್ಯಾ ಅಧ್ಯಕ್ಷ! ಕಾರಣ ಇಲ್ಲಿದೆ

    ರಷ್ಯಾ ಅಧ್ಯಕ್ಷ ಪುಟಿನ್​​​ ಆರೋಗ್ಯ ಮತ್ತಷ್ಟು ಕ್ಷೀಣ: ಇನ್ನು ಕೆಲವೇ ವರ್ಷ ಬದುಕುತ್ತಾರೆ ಎಂದಿರುವ ವೈದ್ಯರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts