ಬಸವನಬಾಗೇವಾಡಿ: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಚಿವ ಶಿವಾನಂದ ಪಾಟೀಲ ಅವರಿಗೆ ಬರೆದ ಮನವಿ ಪತ್ರವನ್ನು ಶನಿವಾರ ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಂಡ ಬಸವನಬಾಗೇವಾಡಿ ತಾಲೂಕು ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಯ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಸರ್ಕರದ ಮೇಲೆ ಒತ್ತಡ ತರಬೇಕು. ಡಿ.16 ರಂದು ಬೆಳಗಾವಿಯ ಹಕ್ಕೊತ್ತಾಯ ಸಮಾವೇಶದಲ್ಲಿ ತಾವು ಭಾಗವಹಿಸಬೇಕು ಎಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
ಒಕ್ಕೂಟದ ರಾಜ್ಯ ಸಂಚಾಲಕ ತಿಪ್ಪಣ್ಣ ಮಾದರ, ಜಿಲ್ಲಾ ಉಪಾಧ್ಯಕ್ಷ ಪ್ರಹ್ಲಾದ ಕರಿಯಣ್ಣವರ, ತಮ್ಮಣ್ಣ ಕಾನಾಗಡ್ಡಿ, ದುರುಗಪ್ಪ ದುರಗಪ್ಪಗೊಳ, ಪ್ರಕಾಶ ಬೀಳಗಿ, ರಮೇಶ ಮಾದರ, ಯಮನೂರಿ ಬೂದಿಹಾಳ, ಪರಶುರಾಮ ಚೌಡೇಕರ, ನಾಗರಾಜ ಚಳ್ಳಿಮರದ, ಲಕ್ಷ್ಮಣ ಆದವಾನಿ, ಕಲ್ಮೇಶ ಗುಡದಪ್ಪನವರ, ಮಹಾಂತೇಶ ಚಳ್ಳಿಮರದ, ಯಲಪ್ಪ ಚಳ್ಳಿಮರದ ಇತರರಿದ್ದರು.