ಅಂತರ್​ ಧರ್ಮೀಯ ವಿವಾಹಕ್ಕೆ ಕೋರ್ಟ್​ ಗ್ರೀನ್​ ಸಿಗ್ನಲ್​ ನೀಡಿದ್ದರೂ ಪಾಲಕರು ಬಿಡಲಿಲ್ಲ…

ಹಾಸನ: ಅಂತರ್​ ಧರ್ಮೀಯ ವಿವಾಹಕ್ಕೆ ನ್ಯಾಯಾಲಯ ಗ್ರೀನ್​ ಸಿಗ್ನಲ್​ ನೀಡಿದ್ದರೂ ಯುವತಿಯ ಮನೆಯವರು ಆಕೆಯನ್ನು ಪ್ರೀತಿಸಿದ ಯುವಕನೊಂದಿಗೆ ಕಳುಹಿಸದೆ ನಗರದ ಮಕ್ಕಳ ಕಲ್ಯಾಣ ಸಮಿತಿ ಕೇಂದ್ರದ ಎದುರು ಹೈಡ್ರಾಮಾ ಸೃಷ್ಟಿಸಿರುವ ಘಟನೆ ನಡೆದಿದೆ.

ಏನಿದು ಘಟನೆ?
ಆಲೂರು ತಾಲೂಕಿನ ಹೊಸಹಳ್ಳಿ ಗ್ರಾಮದ ರಘು ಮತ್ತು ಕಾಗನೂರು ಹೊಸಹಳ್ಳಿ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ 17 ವರ್ಷವಿದ್ದಾಗ ಮದುವೆಯಾಗಿತ್ತು. ಈ ಪ್ರಕರಣ ಕಳೆದ ವರ್ಷ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯ ಹುಡುಗಿಗೆ 18 ವರ್ಷ ಪೂರ್ಣಗೊಂಡ ನಂತರ ಇಷ್ಟಪಟ್ಟವರ ಜತೆ ಹೋಗಲಿ ಎಂದು ಆದೇಶಿಸಿ, ಆಕೆಯನ್ನು ಉಜ್ವಲ ನಿರ್ಮಲ ಕೇಂದ್ರದಲ್ಲಿ ಇರಿಸಿದ್ದರು.

ಇಂದು ಬಾಲಕಿಗೆ 18 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಯುವತಿ ತಾನು ಪ್ರೀತಿಸಿದವನ ಜತೆ ಹೋಗುವುದಾಗಿ ತಿಳಿಸಿದ್ದಾಳೆ. ಆದರೆ, ಯುವತಿಯ ತೀರ್ಮಾನಕ್ಕೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದು, ಆಕೆಯನ್ನು ಬಲವಂತವಾಗಿ ಮನೆಗೆ ಕರೆದೊಯ್ದಿದ್ದಾರೆ. (ದಿಗ್ವಿಜಯ ನ್ಯೂಸ್)