ಕೇರಾ ಸುರಕ್ಷಾ ಯೋಜನೆಯಡಿ ವಿಮಾ ಸೌಲಭ್ಯ: ಎಳನೀರು, ಕಾಯಿ ಕೀಳುವವರಿಗೆ ಅನುಕೂಲ

blank

ಮಂಡ್ಯ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೇರಾ ಸುರಕ್ಷಾ ವಿಮಾ ಯೋಜನೆಯಿಂದ ಎಳನೀರು, ಕಾಯಿ ಕೀಳುವವರಿಗೆ, ನೀರಾ ತಂತ್ರಜ್ಞರು, ತೆಂಗಿನಕಾಯಿ ಕೊಯ್ದು ಮಾಡುವವರಿಗೆ, ಹೈಬ್ರಿಡೋನೇಶನ್ ಕೆಲಸಗಾರರು, ಪ್ರಾತ್ಯಕ್ಷಿತೆ ಹಾಗೂ ಬೀಜ ಉತ್ಪಾದನೆ ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುವವರಿಗೆ ಹಾಗೂ ಎಫ್‌ಸಿಟಿ(ಫ್ರೆಂಡ್ಸ್ ಆಫ್ ಕೋಕೋನಟ್ ಟೀ) ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ತೊಡಗಿರುವ ಕಾರ್ಮಿಕರಿಗೆ ಸಮಗ್ರ ವಿಮಾ ರಕ್ಷಣೆ ದೊರೆಯಲಿದೆ.
ತೆಂಗು ಅಭಿವೃದ್ಧಿ ಮಂಡಳಿ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯಿಂದ ದಿ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿ ಈ ವಿಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಯೋಜನೆಯಡಿ ವಿಮೆಯ ಮೊತ್ತವು ವಾರ್ಷಿಕ 956 ರೂ ಆಗಿದೆ. ಶೇ.75:25ರಂತೆ ಇದರಲ್ಲಿ 717 ರೂ ಕಂತಿನ ಮೊತ್ತವನ್ನು ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ಪಾವತಿ ಮಾಡಲಾಗುವುದು. ಉಳಿದ 239 ರೂಗಳನ್ನು ಪಾಲಿಸಿದಾರರು ಕೊಡಬೇಕು. ಪ್ರತಿ ವರ್ಷವು ಈ ವಿಮಾ ಯೋಜನೆಯನ್ನು ಪಾಲಿಸಿದಾರರು ನವೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಯೋಜನೆಯಡಿ ಪಾಲಿಸಿದಾರರು ಅಪಘಾತಕ್ಕೊಳಗಾಗಿ ಮರಣ ಹೊಂದಿದ್ದಲ್ಲಿ 7 ಲಕ್ಷ ರೂ, ಶಾಶ್ವತ ಭಾಗಶಃ ಅಂಗವಿಕಲತೆ ಹೊಂದಿದ್ದಲ್ಲಿ 3.50 ಲಕ್ಷ ರೂ, ಆಸ್ಪತ್ರೆ ವೆಚ್ಚ(24ಗಂಟೆ ಐಪಿ) ಗರಿಷ್ಟ 2 ಲಕ್ಷ ರೂ, ತಾತ್ಕಾಲಿಕ ಅಂಗವಿಕಲತೆ ಹೊಂದುವವರಿಗೆ ಪ್ರತಿ ವಾರ 3,500 ರೂನಂತೆ ಗರಿಷ್ಟ 21 ಸಾವಿರ ರೂ, ಆಂಬ್ಯುಲೆನ್ಸ್ ಖರ್ಚು 3,500 ರೂ ಹಾಗೂ ಪಾಲಿಸಿದಾರರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5,500 ರೂ ನೀಡಲಾಗುತ್ತದೆ. ಆಸಕ್ತರು ತೆಂಗು ಅಭಿವೃದ್ಧಿ ಮಂಡಳಿಯಿಂದ ನಿಗದಿತ ಅರ್ಜಿ ಪಡೆದು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪ್ರತಿ, ರೈತರ ವಾರ್ಷಿಕ ವಂತಿಕೆ ಪಾವತಿಸಿದ ರಶೀದಿ ಸಲ್ಲಿಸಬೇಕು. ಮಾಹಿತಿಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article

ಪ್ರತಿದಿನ ಹಣೆಗೆ ವಿಭೂತಿ ಹಚ್ಚಿಕೊಂಡರೆ ಏನಾಗುತ್ತದೆ ಗೊತ್ತಾ? significance of vibhuti

significance of vibhuti:  ಸಾಮಾನ್ಯವಾಗಿ ಹಿಂದೂಗಳು ಹಣೆಯ ಮೇಲೆ ಹಚ್ಚೆ ಹಾಕಿಸಿಕೊಂಡಿರುವುದನ್ನು ನೋಡುತ್ತೇವೆ. ಮಹಿಳೆಯರು  ತಿಲಕವನ್ನು…

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…