ಮಾಯಾವತಿ ಅವರನ್ನು ಅವಮಾನಿಸಿದರೆ ನನಗೆ ಅವಮಾನವಾದಂತೆ: ಅಖಿಲೇಶ್​ ಯಾದವ್​

ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರಿಗೆ ಅವಮಾನಿಸದರೆ ನನಗೆ ಅವಮಾನಿಸಿದಂತೆ ಎಂದು ಸಮಾಜ ಪಕ್ಷದ ಅಖಿಲೇಶ್​ ಯಾದವ್​ ತಿಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್​ಪಿ) ಮತ್ತು ಬಿಎಸ್​ಪಿ ​ಮೈತ್ರಿ ಘೋಷಣೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಯಾವತಿಯವರನ್ನು ಅವಮಾನಿಸಿದರೆ ವೈಯಕ್ತಿಕವಾಗಿ ನನ್ನನ್ನು ಅವಮಾನಿಸಿದಂತೆ ಎಂದು ಅಖಿಲೇಶ್​ ಯಾದವ್​ ತಮ್ಮ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಮಾಯಾವತಿ ಅವರು ಪ್ರಧಾನಿ ಅಭ್ಯರ್ಥಿಯಾದರೆ ಅವರಿಗೆ ಬೆಂಬಲ ಸೂಚಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯಾದವ್​, “ಉತ್ತರ ಪ್ರದೇಶ ಇಲ್ಲಿಯವರೆಗೂ ಅನೇಕ ಪ್ರಧಾನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಮುಂದಿನ ವರ್ಷ ಉತ್ತರ ಪ್ರದೇಶದಿಂದಲೇ ಮತ್ತೊಬ್ಬ ಪ್ರಧಾನಿ ಆಯ್ಕೆಯಾದರೆ ನಾನು ಸಂತಸ ಪಡುತ್ತೇನೆ” ಎಂದು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಲೋಕಸಮರಕ್ಕೆ ನಾವು ಮಾಡಿಕೊಂಡಿರುವ ಮೈತ್ರಿ ಬಿಜೆಪಿಯನ್ನು ನಡುಗಿಸಿದೆ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಕಳೆದ ವರ್ಷದಿಂದಲೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆಸಿದ್ದವು. ಆದರೆ, ಶನಿವಾರ ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಉತ್ತರಪ್ರದೇಶದಲ್ಲಿ ಒಟ್ಟಿಗೆ ಸ್ಪರ್ಧಿಸುವುದಾಗಿ ತಿಳಿಸಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *