ನವದೆಹಲಿ: ಫೋಟೋ ಶೇರಿಂಗ್ ಆ್ಯಪ್ ಇನ್ಸ್ಟಾಗ್ರಾಮ್ನಲ್ಲಿ ಶುಕ್ರವಾರ ಸಮಸ್ಯೆ ಕಂಡುಬಂದಿತ್ತು. ಆದರೆ ಅದರ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಸಮಸ್ಯೆ ಹೇಳಿಕೊಂಡಿದ್ದು ಹಲವರಿಗೆ ಅಚ್ಚರಿ ಮೂಡಿಸಿತ್ತು.
ವಾಟ್ಸ್ಆ್ಯಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್.. ಈ ಮೂರೂ ಒಂದೇ ಒಡೆತನಕ್ಕೆ ಸೇರಿದಂಥವು. ಈ ಪೈಕಿ ಇನ್ಸ್ಟಾಗ್ರಾಮ್ಗೆ ಸಂಬಂಧಿಸಿದಂತೆ ಶುಕ್ರವಾರ ಭಾರತ, ಯುಎಸ್, ಯುಕೆನಲ್ಲಿ ಸಮಸ್ಯೆ ಕಂಡುಬಂದಿತ್ತು. ಕೆಲವರಿಗೆ ನ್ಯೂಸ್ಫೀಡ್ನಲ್ಲಿ ಅಪ್ಲೋಡ್ ಮಾಡಲು ಸಾಧ್ಯವಾಗಿಲ್ಲ, ಇನ್ನು ಕೆಲವರಿಗೆ ಲಾಗ್ಇನ್ ಆಗಲಿಕ್ಕೇ ಆಗಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಡೌನ್ಡಿಟೆಕ್ಟರ್ನ ವರದಿ ಪ್ರಕಾರ ಇನ್ಸ್ಟಾಗ್ರಾಮ್ ಸಂಬಂಧಿತ ಸಮಸ್ಯೆ ಬಗ್ಗೆ ಜಗತ್ತಿನಾದ್ಯಂತ 5 ಸಾವಿರಕ್ಕೂ ಅಧಿಕ ಮಂದಿ ರಿಪೋರ್ಟ್ ಮಾಡಿದ್ದಾರೆ. ಆ ಪೈಕಿ ಕೇವಲ 224 ಯೂಸರ್ ಮಾತ್ರ ಫೇಸ್ಬುಕ್ನಲ್ಲಿ ರಿಪೋರ್ಟ್ ಮಾಡಿದ್ದಾರೆ. ಉಳಿದವರೆಲ್ಲ ಟ್ವಿಟರ್ನಲ್ಲಿ ದೂರುಗಳನ್ನು ಹೇಳಿಕೊಂಡಿದ್ದಾರೆ.
“ಇನ್ಸ್ಟಾಗ್ರಾಮ್ ಡೌನ್ ಆಗಿದೆಯಾ ಅಥವಾ ಇಂಟರೆನೆಟ್ ಕೆಲಸ ಮಾಡುತ್ತಿಲ್ವಾ? ಎಂದು ಪರೀಕ್ಷಿಸಲು ಹಲವರು ಟ್ವಿಟರ್ಗೆ ಧಾವಿಸುತ್ತಿದ್ದಾರೆ..”
“ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು ಟ್ವಿಟರನ್ನು ಕಂಡುಹಿಡಿದಿದ್ದಾ?”
ಇನ್ಸ್ಟಾಗ್ರಾಮ್ ಸಮಸ್ಯೆ ಕುರಿತ ಹಲವಾರು ಟ್ವೀಟ್ಗಳನ್ನು ಗಮನಿಸಿದ ಟ್ವೀಟಿಗರನೇಕರು, ಆ ಬಗ್ಗೆ ಈ ಮೇಲಿನಂತೆ ಟ್ವೀಟ್ ಮಾಡುವ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)