More

    ಮಲ್ಲಾಪುರದಲ್ಲಿ ಮನೆಗಳ ಪರಿಶೀಲನೆ

    ಚನ್ನಮ್ಮ ಕಿತ್ತೂರು: ಸಮೀಪದ ಮಲ್ಲಾಪೂರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಶಾಸಕ ಬಾಬಾಸಾಹೇಬ್ ಪಾಟೀಲ ಪರಿಶೀಲಿಸಿದರು. ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇಂತಹ ಮನೆಗಳನ್ನು ದುರಸ್ತಿಗೊಳಿಸಬೇಕು, ಹೊಸದಾಗಿ ಮನೆಗಳನ್ನು ಮಂಜೂರು ಮಾಡಿಸಿಕೊಡಬೇಕು ಎಂದು ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಹಾನಿಗೊಳಿಗಾದ ಹಾಗೂ ಸಂಪೂರ್ಣ ಕುಸಿದಿರುವ ಮನೆಗಳ ಪಟ್ಟಿ ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶೀಘ್ರದಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಭರವಸೆ ನೀಡಿದರು. ಪಿಡಿಒ ಜಗದೀಶ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಪವನಕುಮಾರ ತಳವಾರ, ಅಶ್ವಾಕ್ ಹವಾಲ್ದಾರ್, ಬಸವರಾಜ ಸಂಗೊಳ್ಳಿ, ಪ್ರವೀಣಗೌಡ ಜಕ್ಕನಗೌಡರ, ಗಂಗಾಗಿರಿ ಗೋಸಾವಿ, ಮಂಜುನಾಥ ಗಂಗಪ್ಪನವರ, ರಾಯಪ್ಪ ಮುರಸಿದ್ದಿ, ನವೀನ ಬೆಳ್ಳೂರ, ಗ್ರಾಮಸ್ಥರು ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts