More

    ಮಹಾ ಗೆಜೆಟ್ ನೋಟಿಫಿಕೇಷನ್​ಗೆ ಒತ್ತಾಯ

    ನವದೆಹಲಿ: ಮಹದಾಯಿ ಜಲವ್ಯಾಜ್ಯದ ಕುರಿತು ನ್ಯಾಯಾಧಿಕರಣ ಐತೀರ್ಪ ಪ್ರಕಟಿಸಿದ್ದರೂ ಗೆಜೆಟ್ ನೋಟಿಫಿಕೇಷನ್ ಹೊರಡಿಸದ ಕಾರಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿ ಮಲಪ್ರಭಾ ಕಣಿವೆ ಹಾಗೂ ಉತ್ತರ ಕರ್ನಾಟಕದ ರೈತರ ನೆರವಿಗೆ ಧಾವಿಸಬೇಕು ಎಂದು ಸಹ್ಯಾದ್ರಿ ಜಲಜನ ಸೊಸೈಟಿ ಸದಸ್ಯರು ಮತ್ತು ರೈತ ಮುಖಂಡರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಮನವಿ ಸಲ್ಲಿಸಿದರು. ಮಹದಾಯಿ, ಮಲಪ್ರಭಾ ನೀರನ್ನು ಬಳಸಿಕೊಂಡು ಕುಡಿವ ನೀರು ಹಾಗೂ ನೀರಾವರಿ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಸೊಸೈಟಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಕೇಂದ್ರ ಸಚಿವರೊಂದಿಗೆ ಹಂಚಿಕೊಂಡರು. ಇದಕ್ಕೂ ಮುನ್ನ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸದಸ್ಯರು ಸ್ಮಾರ್ಟ್ ಸಿಟಿ ಹಾಗೂ ಸ್ಮಾರ್ಟ್ ವಿಲೇಜ್ ಯೋಜನೆಗಳ ಬಗ್ಗೆ ರ್ಚಚಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts