ಉಪ್ಪಿನಬೆಟಗೇರಿ: ಗ್ರಾಮದ ಕೆಲ ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ವಕ್ಪ್ ಆಸ್ತಿ ಎಂದು ದಾಖಲಾದ ಹಿನ್ನೆಲೆಯಲ್ಲಿ ಉಪ್ಪಿನಬೆಟಗೇರಿ ಗ್ರಾಮಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಸೋಮವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಅ. 30ರಂದು ಧಾರವಾಡ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸುವ ಮೂಲಕ ನಮ್ಮ ಆಸ್ತಿಯನ್ನು ರಕ್ಷಿಸಿಕೊಳ್ಳೋಣ ಎಂದರು. ಇದಕ್ಕೆ ಸಮ್ಮತಿಸಿದ ಗ್ರಾಮಸ್ಥರು ಆಗಿರುವ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ ನಡೆಸೋಣ ಎಂದು ತೀರ್ವನಿಸಿದರು.
ಗಂಗಪ್ಪ ಜವಳಗಿ, ಕರಬಸಪ್ಪ ಓಂಕಾರಿ, ಈಶ್ವರಿ ಜವಳಗಿ, ಅಣ್ಣಪ್ಪ ನಿಲವಾಣಿ, ರುದ್ರಪ್ಪ ಮಸೂತಿ, ಈಶ್ವರ ಆಯಟ್ಟಿ, ಶ್ರೀಶೈಲ್ ಮಸೂತಿ, ನಾಗಪ್ಪ ನರಗುಂದ, ಸೋಮಶೇಖರ ಗೋಡೆಕಟ್ಟಿ, ಶಿವಾನಂದ ಲಗಮಣ್ಣವರ, ಶಿವಾನಂದ ದೇಶನೂರ ಇತರರಿದ್ದರು.