ನಶಿಸುತ್ತಿವೆ ಬಡ ಪ್ರತಿಭೆಗಳು

blank

ಹೊನ್ನಾಳಿ: ಬಡ ವಿದ್ಯಾರ್ಥಿಗಳಲ್ಲಿ ಮೆರಿಟ್, ಪ್ರತಿಭೆ ಇದ್ದರೂ ಆರ್ಥಿಕ ಅಸಮಾನತೆಯಿಂದ ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಡ ಪ್ರತಿಭೆಗಳು ನಶಿಸಿ ಹೋಗುತ್ತಿವೆ ಎಂದು ಸ್ವಾಭಿಮಾನ ಬಳಗದ ರಾಜ್ಯಾಧ್ಯಕ್ಷ, ಐಎಎಸ್ ಇನ್​ಸೈಟ್ಸ್ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಸ್ವಾಭಿಮಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶೇ.90 ಕ್ಕಿಂತ ಹೆಚ್ಚು ಅಂಕ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಅಂಥವರಿಗೆ ಪ್ರೋತ್ಸಾಹ ನೀಡುವುದು ಮತ್ತು ಭವಿಷ್ಯದ ದಿಕ್ಕುಗಳನ್ನು ತೋರಿಸುವುದು ಬಹಳ ಮುಖ್ಯ. ಆರ್ಥಿಕ ಹಾಗೂ ಶಿಕ್ಷಣ ಅಸಮಾನತೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಐಎಎಸ್, ಐಪಿಎಸ್ ಹಾಗೂ ಐಎಫ್​ಎಸ್​ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ತರಬೇತಿ ನೀಡುತ್ತಿದೆ ಎಂದರು.

ಇನ್​ಸೈಟ್ಸ್ ಸಂಸ್ಥೆ ಪ್ರಾರಂಭವಾಗಿ 11 ವರ್ಷವಾಗಿದ್ದು, ಇಲ್ಲಿಯವರೆಗೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯುಪಿಎಸ್​ಸಿ ಟಾಪರ್ ಗಳಾಗಿದ್ದಾರೆ. ಬಹುಮುಖ್ಯವಾಗಿ ವಿದ್ಯಾರ್ಥಿಗಳು ಪುಸ್ತಕ, ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಇಲ್ಲದಿದ್ದರೆ ನಿಮಗೆ ಸಾಮಾನ್ಯ ಜ್ಞಾನ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದರು.

ಉನ್ನತ ಸ್ಥಾನಗಳು ಹಾಗೂ ಉನ್ನತ ಶಿಕ್ಷಣ ತರಬೇತಿಗಳು ಉಳ್ಳವರ ಪಾಲಾಗುತ್ತಿದೆ, ಅದು ಬದಲಾಗಬೇಕು. ಕುರಿ ಕಾಯವವನು ಐಎಎಸ್ ಹಾಗೂ ಐಪಿಎಸ್ ಮಾಡಬೇಕು ಹಾಗೂ ಉನ್ನತ ಸ್ಥಾನಗಳಿಗೆ ಹೋಗಬೇಕು. ಆಗ ಮಾತ್ರ ಶಿಕ್ಷಣ ಅಸಮಾನತೆಯನ್ನು ಹೋಗಲಾಡಿಸಬಹುದು ಎಂದರು.

ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಿ.ಬಿ. ವಿನಯ್ಕುಮಾರ್ ಅವರ ಮಾತುಗಳು ಚೇತೋಹಾರಿಯಾಗಿವೆ. ವಿದ್ಯಾರ್ಥಿಗಳು ಮುಂದೆ ಬರಬೇಕಾದರೆ ನೀವು ಹೊನ್ನಾಳಿ, ದಾವಣಗೆರೆ ಬಿಟ್ಟು ಹೊರಬನ್ನಿ, ಏಕೆಂದರೆ ಹೊರಗಿನ ಪ್ರಪಂಚ ನೋಡಿ ಕಲಿಯುವುದು ಸಾಕಷ್ಟಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಎಲ್ಲ ಉನ್ನತ ಸ್ಥಾನಗಳ ಶಿಕ್ಷಣಕ್ಕೆ ಹೊನ್ನಾಳಿಯಲ್ಲೇ ತರಬೇತಿ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಆಸ್ಪತ್ರೆ ಕೂಡ ಸ್ಥಾಪಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಸಿದ್ಧತೆ ಕೂಡ ಭರದಿಂದ ಸಾಗುತ್ತಿದೆ ಎಂದರು.

ಪೊ›. ಪಾಂಡುರಂಗ ಮಾತನಾಡಿ, ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಈ ದಿಕ್ಸೂಚಿ ಕಾರ್ಯಕ್ರಮ ಅವರ ಭವಿಷ್ಯಕ್ಕೆ ಪೂರಕವಾಗಿದೆ ಎಂದರು.

ಪೊ›.ಡಿ.ಸಿ. ಪಾಟೀಲ್ ಮಾತನಾಡಿ, ಯೋಚನೆಗಳು ಜಗತ್ತನ್ನು ಆಳುತ್ತದೆ. ಅಂತಹ ಯೋಚನೆಗಳನ್ನು ಕೊಡುವ ಕೆಲಸವನ್ನು ಜಿ.ಬಿ. ವಿನಯಕುಮಾರ್ ಮಾಡುತ್ತಿದ್ದಾರೆ. ಅವರು ನಮ್ಮ ಸಮಾಜದ ಆಸ್ತಿ ಎಂದು ಹೇಳಿದರು.

ಸಮಾರಂಭದಲ್ಲಿ 180 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದು ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸ್ವಾಭಿಮಾನಿ ಬಳಗದ ಮುಖಂಡರಾದ ರಾಜು ಕಡಗಣ್ಣಾರ್, ಸುದೀಪ್ ದಿಡಗೂರು, ಕರವೇ ಅಧ್ಯಕ್ಷ ವಿನಯ್ ವಗ್ಗರ್, ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ. ವೀರಣ್ಣ, ಬಣಜಾರ್ ಸಮಾಜದ ಅಧ್ಯಕ್ಷ ಅಂಜುನಾಯ್ಕ, ಮುಸ್ಲಿಂ ಸಮಾಜದ ಮುಖಂಡರು, ಲಿಂಗಾಯತ ಸಮಾಜ, ಮಡಿವಾಳ ಸಮಾಜ ಸೇರಿ ಅನೇಕ ಸಮಾಜದ ಅಧ್ಯಕ್ಷರಿದ್ದರು.

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…